ಕಾಂತಾರ-ಅಧ್ಯಾಯ 1 ಟ್ರೇಲರ್  ಕನ್ನಡ ಚಿತ್ರಪ್ರೇಮಿಗಳಿಂದ  

Ravi Talawar
ಕಾಂತಾರ-ಅಧ್ಯಾಯ 1 ಟ್ರೇಲರ್  ಕನ್ನಡ ಚಿತ್ರಪ್ರೇಮಿಗಳಿಂದ  
WhatsApp Group Join Now
Telegram Group Join Now
‘ಕಾಂತಾರ-ಅಧ್ಯಾಯ 1’ ಕನ್ನಡ ಟ್ರೇಲರ್ ಹಾಗೂ ಸ್ಟಾರ್ ನಟರುಗಳಿಂದ ಉಳಿದ 5 ಭಾಷೆಗಳ ಟ್ರೈಲರ್ ಬಿಡುಗಡೆಯಾಗಿದೆ.
     ಹೃತಿಕ್ ರೋಷನ್, ಶಿವಕಾರ್ತಿಕೇಯನ್, ಪೃಥ್ವಿರಾಜ್ ಸುಕುಮಾರನ್, ಪ್ರಭಾಸ್ ಅವರಿಂದ, ವಿಶ್ವವೇ ಎದುರು ನೋಡುತ್ತಿರುವ ಕಾಂತಾರ ಅಧ್ಯಾಯ 1′ ಚಿತ್ರದ ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯ ಟ್ರೇಲರ್ ಬಿಡುಗಡೆಯಾಗಿದೆ.
     ಆರಂಭದಿಂದಲೂ ಸಾಕಷ್ಟು ಕುತೂಹಲ, ಕಾತುರ  ಮೂಡಿಸಿರುವ, ಹೊಂಬಾಳೆ ಫಿಲಂಸ್ ನಿರ್ಮಾಣ ಹಾಗೂ ರಿಷಬ್ ಶೆಟ್ಟಿ ಅವರ ನಟನೆ ಹಾಗೂ ನಿರ್ದೇಶನದ,  ಬಹು ನಿರೀಕ್ಷಿತ
‘ಕಾಂತಾರ-ಅಧ್ಯಾಯ 1’ ಚಿತ್ರವು ಸಪ್ತ ಭಾಷೆಗಳಲ್ಲಿ ಅಕ್ಟೋಬರ್ 2 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ಟ್ರೇಲರನ್ನು ಆಯಾ ಭಾಷೆಗಳ ಸ್ಟಾರ್ ನಟರುಗಳು ಬಿಡುಗಡೆ ಮಾಡಿದರು. ಹಿಂದಿ ಟ್ರೇಲರ್ ಅನ್ನು ಹೃತಿಕ್ ರೋಶನ್, ತಮಿಳಿನ ಟ್ರೇಲರ್ ನ ಶಿವಕಾರ್ತಿಕೇಯನ್, ಮಲಯಾಳಂ- ಪೃಥ್ವಿರಾಜ್ ಸುಕುಮಾರನ್ ಹಾಗೂ ತೆಲುಗು ಭಾಷೆಯಲ್ಲಿ ಪ್ರಭಾಸ್ ಅವರು ಅನಾವರಣ ಮಾಡಿದರು.
ಕನ್ನಡದ ಕಲಾಭಿಮಾಗಳಿಂದಲೇ ಕನ್ನಡದ ‘ಕಾಂತಾರ-1’ ಚಿತ್ರದ ಟ್ರೇಲರ್ ಬಿಡುಗಡೆಯಾಗಿರುವುದು ವಿಶೇಷ.
     ಚಿತ್ರದ ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿದ್ದು, ಈಗಾಗಲೇ ರಿಲೀಸಾಗಿರುವ  ಚಿತ್ರದ ಮೇಕಿಂಗ್ ವಿಡಿಯೋ, ಪೋಸ್ಟರ್ ಗಳಿಗೆ ಫಿದಾ ಆಗಿರುವ ಅಭಿಮಾನಿಗಳು ಅಕ್ಟೋಬರ್ 2ರಂದು ಕಾಂತಾರ-1 ಚಿತ್ರವನ್ನು ತೆರೆ ಮೇಲೆ ವೀಕ್ಷಿಸಲು  ಕಾತುರದಿಂದ ಕಾಯುತ್ತಿದ್ದಾರೆ.
     ಬಿ. ಅಜನೀಶ್ ಲೋಕನಾಥ್  ಸಂಗೀತ ನಿರ್ದೇಶನ,  ಅರವಿಂದ್ ಎಸ್. ಕಶ್ಯಪ್  ಛಾಯಾಗ್ರಹಣ ಹಾಗೂ ಪ್ರಗತಿ ಶೆಟ್ಟಿ  ವಸ್ತ್ರ ವಿನ್ಯಾಸ ‘ಕಾಂತಾರ-೧’ ಚಿತ್ರಕ್ಕಿದೆ.
ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಅವರುಗಳು  ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
     ‘ಕಾಂತಾರ-ಅಧ್ಯಾಯ 1. ಕಲೆ, ಭಕ್ತಿ ಮತ್ತು ಶಕ್ತಿಯ ಮಹತ್ವವನ್ನು ಒಳಗೊಂಡ ಚಿತ್ರವಾಗಿದ್ದು, ಸದಭಿರುಚಿಯ ಚಿತ್ರಗಳನ್ನೇ ನಿರ್ಮಾಣ ಮಾಡುತ್ತಾ ಬಂದಿರುವ ಹೊಂಬಾಳೆ ಫಿಲಂಸ್ ನಿಂದ ಮತ್ತೊಂದು ಅದ್ಭುತ ಈ ಚಿತ್ರವನ್ನು ವೀಕ್ಷಿಸಲು ವಿಶ್ವದಾದ್ಯಂತ ಜನರು ಕಾತುರದಿಂದ ಕಾಯುತ್ತಿದ್ದಾರೆ.
WhatsApp Group Join Now
Telegram Group Join Now
Share This Article