ಘಟಪ್ರಭಾ: ಇಲ್ಲಿನ ಪುರಸಭೆ ಕಾರ್ಯಾಲಯದಲ್ಲಿ ಮಂಗಳವಾರದಂದು ಪೌರ ಕಾರ್ಮಿಕರ ದಿನಾಚರಣೆಯ ಪ್ರಯುಕ್ತವಾಗಿ ಸಪಾಯಿ ಮಿತ್ರರಿಗೆ ಸುರಕ್ಷಿತ ಶಹರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮ್ಯೂಸಿಕಲ್ ಚೇರ್ ಆಟ, ಕುರ್ಚಿ ಮೇಲೆ ಕುಳಿತು ಬಲೂನ್ ವಡೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದವರಿಗೆ ಬಹುಮಾನ ಹಾಗೂ ಪ್ರಶಂಸನ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಎಮ್ ಎಸ್ ಪಾಟೀಲ, ಹಿರಿಯ ಮುಖಂಡ ಡಿ ಎಮ್ ದಳವಾಯಿ, ಕರವೇ ಸಂಸ್ಥಾಪಕ ಅಧ್ಯಕ್ಷ ಡಾ. ಕೆಂಪಣ್ಣ ಚೌಕಸಿ, ಪ್ರವೀಣ್ ಮಟಗಾರ, ಅಪ್ಪಾಸಾಬ್ ಮುಲ್ಲಾ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಈರಣ್ಣ ಕಲಕುಟಗಿ, ಮಾರುತಿ ಹುಕ್ಕೇರಿ, ಶಿವಾನಂದ ಚೌಕಸಿ, ಕುಮಾರ ಕರ್ಪುರಮಠ ಸೇರಿದಂತೆ ಎಲ್ಲ ಅಧಿಕಾರಿಗಳು, ಸಿಬ್ಬಂದಿ, ಎಲ್ಲ ಪೌರ ಕಾರ್ಮಿಕರು ಉಪಸ್ಥಿತರಿದ್ದರು.


