ಮೂವರು ನಕ್ಸಲರು ಭದ್ರತಾ ಪಡೆಯ ಗುಂಡಿಗೆ ಬಲಿ

Ravi Talawar
ಮೂವರು ನಕ್ಸಲರು ಭದ್ರತಾ ಪಡೆಯ ಗುಂಡಿಗೆ ಬಲಿ
WhatsApp Group Join Now
Telegram Group Join Now

ರಾಂಚಿ (ಜಾರ್ಖಡ್​): ಇಂದು ಬೆಳಗ್ಗೆ ಗುಮ್ಲಾ ಜಿಲ್ಲೆಯಲ್ಲಿ ನಕ್ಸಲರು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ನಿಷೇಧಿತ ಮಾವೋವಾದಿ ವಿಭಜಿತ ಗುಂಪಿನ ಕನಿಷ್ಠ ಮೂವರು ನಕ್ಸಲರು ಭದ್ರತಾ ಪಡೆಯ ಗುಂಡಿಗೆ ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಜಾರ್ಖಡ್​ ಜಾಗ್ವರ್​ ಮತ್ತು ಗುಮ್ಲಾ ಪೊಲೀಸರನ್ನೊಳಗೊಂಡ ಭದ್ರತಾ ಪಡೆ ಜಾರ್ಖಂಡ್​ ಜನ್​ ಮುಕ್ತಿ ಪರಿಷದ್​ (ಜೆಜೆಎಂಪಿ) ಮಾವೋ ಗುಂಪಿನ ಸದಸ್ಯರು ಇರುವಿಕೆ ಕುರಿತು ಮಾಹಿತಿ ಪಡೆದಿದ್ದಾರೆ. ಇಂದು ಬೆಳಗ್ಗೆ 8ಕ್ಕೆ ಬಿಷ್ಣುಪುರ್​ ಪೊಲೀಸ್​ ಠಾಣೆಯ ವ್ಯಾಪಿಯಡಿ ಬರುವ ಕೆಚಕಿ ಗ್ರಾಮದ ಅರಣ್ಯದೊಳಗೆ ಶೋಧ ನಡೆಸಿದ್ದಾರೆ.

ಭದ್ರತಾ ಪಡೆ ಕಂಡೊಡನೆ ಜೆಜೆಎಂಪಿ ಮಾವೋಗಳು ಗುಂಡಿನ ದಾಳಿ ನಡೆಸಿದ್ದು, ಅದಕ್ಕೆ ಪ್ರತಿಯಾಗಿ ಭದ್ರತಾ ಪಡೆ ಕೂಡ ದಾಳಿ ಮಾಡಿತು. ಘಟನೆಯಲ್ಲಿ ಮೂವರು ನಕ್ಸಲರು ಹತರಾಗಿದ್ದು, ಸ್ಥಳದಲ್ಲಿದ್ದ ಮೂರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಾರ್ಖಂಡ್​ ಪೊಲೀಸ್​ ವಕ್ತಾರ ಹಾಗೂ ಐಜಿ ಮೈಕಲ್​ ರಾಜ್​ ಎಸ್​ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article