ಸ್ವಾಭಿಮಾನಿ ಪೆನಲ್ ಗೆ  ನಿಮ್ಮ ಮತ ನೀಡಿ: ಮಹಾವೀರ ನೀಲಜಗಿ

Ravi Talawar
 ಸ್ವಾಭಿಮಾನಿ ಪೆನಲ್ ಗೆ  ನಿಮ್ಮ ಮತ ನೀಡಿ: ಮಹಾವೀರ ನೀಲಜಗಿ
WhatsApp Group Join Now
Telegram Group Join Now
ಹುಕ್ಕೇರಿ.ಇಲ್ಲಿನ  ಹುಕ್ಕೇರಿ ಗ್ರಾಮೀಣ ವಿದ್ಯುತ ಸಹಕಾರಿ ಸಂಘ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಸ್ವಾಭಿಮಾನ ಪೆನಲ್ ವತಿಯಿಂದ ಹುಕ್ಕೇರಿ ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸುತ್ತಾ  ಚುನಾವಣಾ ಅಭ್ಯರ್ಥಿಗಳಾದ  ಮಹಾವೀರ ನೀಲಜಗಿ ಹಾಗೂ ಶ್ರೀಮತಿ ಮಹಬೂಬಿ ಗೌಸ್ ನಾಯಿಕವಾಡಿ ಇವರ ಜೊತೆಗೂಡಿ ಸಂಜು  ನಿಲಜಗಿ, ಪ್ರಜ್ವಲ್ ನಿಲಜಗಿ, ಲಾಜಮ್ ನಾಯಕವಾಡಿ, ಜಾವಿದ್ ನಾಯಕವಾಡಿ ಜೊತೆಗೂಡಿ ವಾರ್ಡ್ ನಂಬರ್ 1ರಿಂದ ವಾರ್ಡ್ ನಂಬರ್ 10 ರವರೆಗೆ ಮನೆಮನೆಗೆ ಭೇಟಿ ನೀಡಿ ಸ್ವಾಭಿಮಾನಿ ಫೆನಲಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಆಶೀರ್ವದಿಸಬೇಕೆಂದು ಕೇಳಿಕೊಂಡರು ಇದೇ ಸಂದರ್ಭದಲ್ಲಿ ವಿವಿಧ ಗಲ್ಲಿಯಲ್ಲಿ ಆಗಿರುವ ಸಮಸ್ಯೆಗಳೇನು ನಾವೆಲ್ಲರೂ ಕೂಡಿಕೊಂಡು ಬಗೆಹರಿಸಿ ಕೊಡುತ್ತೇವೆ ಎಂದು ಮಹಾವೀರ ನಿಲಜಗಿ ಹೇಳಿದರು. ಹಾಗೂ ಮಾಧ್ಯಮದವರೊಂದಿಗೆ ಮಾತನಾಡಿ ಸ್ವಾಭಿಮಾನಿ ಪೆನಲ್ ಮಾಜಿ ಸಂಸದ   ರಮೇಶ್ ಕತ್ತಿ,  ಮಾಜಿ ಸಚಿವ  ಎ ಬಿ ಪಾಟೀಲ್ ಹಾಗೂ  ಶಾಸಕರಾದ ನಿಖಿಲ್ ಕತ್ತಿ ಇವರ ನೇತೃತ್ವದಲ್ಲಿ ಹುಕ್ಕೇರಿ ವಿದ್ಯುತ್ ಸಂಘದ ಅಭ್ಯರ್ಥಿಗಳಾಗಿ ನಮ್ಮನ್ನು ಆಯ್ಕೆ ಮಾಡಿರುತ್ತಾರೆ ಸ್ವಾಭಿಮಾನ ಪೆನಾಲಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ನಮಗೆ ಆಶೀರ್ವದಿಸಿ ನಾವು ನಿಮ್ಮ ಜೊತೆ ಯಾವಾಗಲೂ ಇರುತ್ತೇವೆ. ಕಳೆದ 30 ವರ್ಷದಿಂದ ಸಹಕಾರಿ ಕ್ಷೇತ್ರ ಶಿಕ್ಷಣ ಕ್ಷೇತ್ರ ಹಾಗೂ ಹಣಕಾಸಿನ ಕ್ಷೇತ್ರ ಗುರುತಿಸಿಕೊಂಡಿರುವ ನಾನು ಈ ಬಾರಿ ನನ್ನನ್ನು ಹುಕ್ಕೇರಿ ಗ್ರಾಮೀಣ ವಿದ್ಯುತ ಸಹಕಾರಿ ಸಂಘದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುತ್ತಾರೆ ಹಾಗಾಗಿ ನೀವು ನಮ್ಮ ಸ್ವಾಭಿಮಾನ ಪೆನಲಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ನಮಗೆ ಆಶೀರ್ವದಿಸಿ ಎಂದು  ಮಹಾವೀರ್ ನಿಲಜಗಿ ಹೇಳಿದರು.
 ಸ್ವಾಭಿಮಾನಿ ಫೆನಲ ಅಭ್ಯರ್ಥಿಗಳಿಗೆ ದಿನಾಂಕ  28.09.2025 ರಂದು ನಿಮ್ಮ ಮತ ಅಮೂಲ್ಯವಾದದ್ದು, ನಮ್ಮ ಸ್ವಾಭಿಮಾನ ಪೆನಲಿನ ಅಭ್ಯರ್ಥಿಗಳಿಗೆ ನಿಮ್ಮ ಮತ ನೀಡಿ ಆಶೀರ್ವದಿಸಿ ಎಂದು ನಾಯಕವಾಡಿ ಹೇಳಿದರು ಹುಕ್ಕೇರಿ ನಗರದ ಗಣ್ಯಮಾನ್ಯರು,ಮುಖಂಡರು,ಯುವಕರು ಭರ್ಜರಿ ಮತಯಾಚಿಸಿದರು.
WhatsApp Group Join Now
Telegram Group Join Now
Share This Article