ಬೆಂಗಳೂರು, (ಸೆಪ್ಟೆಂಬರ್ 22): ಕಾಲಚಕ್ರ ಈಗ ತಿರುಗುತ್ತಿದೆ. ಭಾರತದ ಅಪಾರ ಪ್ರತಿಭಾ ಖನಜಕ್ಕೆ ಮಾರುಹೋಗಿರುವ ವಿಶ್ವ ಈಗ ಭಾರತ ಅದರಲ್ಲೂ ಕರ್ನಾಟಕ ಹಾಗೂ ಬೆಂಗಳೂರಿನತ್ತ ಬೆರಗಿನಿಂದ ನೋಡುತ್ತಿದೆ ಜಾಗತಿಕ ವಿಶ್ವ. ಅದರಲ್ಲೂ ಪ್ರತಿಭೆಗಳನ್ನ ಪಟಾಯಿಸಿಕೊಂಡು ಹೋಗುವಲ್ಲಿ ಪಕ್ಕಾ ಫೋರ್ಟ್ವೆಂಟಿ ಅಮೆರಿಕ ಈಗ ಕರ್ನಾಟಕದ ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳನ್ನ ತನ್ನತ್ತ ಸೆಳೆಯಲಾರಂಭಿಸಿದೆ. ಈ ಸಂಬಂಧ ಅಮೆರಿಕದ ನ್ಯೂಜೆರ್ಸಿ ಕರ್ನಾಟಕದ ಉದ್ಯಮಿಗಳು ಮತ್ತು ವಿದ್ಯಾರ್ಥಿಗಳಿಗೆ ತನ್ನಲ್ಲಿ ಅಪಾರ ಅವಕಾಶ ಇದೆ. ಬನ್ನಿ ಬಂಡವಾಳ ಹೂಡಿ ಎಂದು ಉದ್ಯಮಿಗಳನ್ನ ಕರೆದಿದೆ. ಈ ಸಂಬಂಧ ಕರ್ನಾಟಕ ಸರ್ಕಾರದ ಜತೆಗೆ ಬೆಂಗಳೂರಿನಲ್ಲಿ ಗವರ್ನರ್ ಫಿಲ್ ಮರ್ಫಿ ನೇತೃತ್ವದ ನಿಯೋಗ ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ.
ಇನ್ನೂ ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳು, ಹಾಗೂ ಉದ್ಯೋಗಿಗಳ ಮೇಲೆ ಹಿಂಸಾಚಾರ ಹೆಚ್ಚಾಗುತ್ತಿದೆ. ಚಿಕ್ಕ ಚಿಕ್ಕ ವಿಷಯಗಳಿಗೂ ಭಾರತೀರ ಮೇಲೆ ಮಾರಣಾಂತಿಕ ಹಲ್ಲೆಗಳಾಗುತ್ತಿವೆ. ಹೀಗಾಗಿ ಇತ್ತೀಚಿನ ಹಿಂಸಾಚಾರ ಘಟನೆಗಳ ಬಗ್ಗೆ ಭಾರತೀಯ ವಿದ್ಯಾರ್ಥಿಗಳು, ಉದ್ಯೋಗದ ಆಕಾಂಕ್ಷಿಗಳು ಹಾಗೂ ಉದ್ಯೋಗದಾತರಿಗೆ ಡಾಲರ್ನಲ್ಲಿ ಕಮಾಯಿಸಲು ಆಸೆ ಇದ್ರೂ ಭದ್ರತೆಯ ಬಗ್ಗೆ ಆತಂಕ ಹೆಚ್ಚಾಗುತ್ತಿದೆ. ಹೀಗಾಗಿ ಈ ಬಗ್ಗೆ ಸ್ಪಷ್ಟಿಕರಣದ ಜತೆಗೆ ಭದ್ರತೆಯ ಅಭಯ ನೀಡಿದ್ದಾರೆ ಗವರ್ನರ್ ಮರ್ಪಿ ದಂಪತಿ.