ಕೇಂದ್ರ ಸರ್ಕಾರದ ಸ್ಪಂದನೆಗೆ ಎಸ್.ಗುರುಲಿಂಗನಗೌಡ ಅಭಿನಂದನೆ

Ravi Talawar
ಕೇಂದ್ರ ಸರ್ಕಾರದ ಸ್ಪಂದನೆಗೆ ಎಸ್.ಗುರುಲಿಂಗನಗೌಡ ಅಭಿನಂದನೆ
WhatsApp Group Join Now
Telegram Group Join Now

ಬಳ್ಳಾರಿ:23.. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೆಲವೊಂದು ಬೆಳೆಗಳು ನೀರು ಪಾಲಾಗಿ, ಧರಾಶಾಹಿಯಾಗಿ ರೈತರು ನಷ್ಟವನ್ನು ಹೊಂದಿದ್ದರು. ಅಳಿದುಳಿದ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಸಾಕಷ್ಟು ಹರಸಾಹಸ ಪಡುತ್ತಿದ್ದರು. ರೈತರ ಸಮಸ್ಯೆಗೆ ಸ್ಪಂದಿಸಿದ ಕೇಂದ್ರ ಸರ್ಕಾರ ಹೆಸರು, ಉದ್ದು, ನೆಲಗಡಲೆ, ಸೋಯಾಬೀನ್ ಮತ್ತು ಸೂರ್ಯಕಾಂತಿ ಬೆಳೆಗಳನ್ನು ಖರೀದಿಸಲು ರಾಜ್ಯ ಸರ್ಕಾರ ಖರೀದಿ ಕೇಂದ್ರಗಳನ್ನು ಆರಂಭಿಸಬೇಕೆAದು ಸೂಚಿಸಿದೆ. ಜೊತೆಗೆ ಕೇಂದ್ರದಿAದ ನೆರವು ನೀಡುವ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಎಸ್ ಗುರುಲಿಂಗನಗೌಡ ಅವರು ಕೇಂದ್ರ ಸರ್ಕಾರವನ್ನು ಅಭಿನಂದಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಾಕಷ್ಟು ಮಳೆಯಿಂದಾಗಿ ಸಾಲ ಮಾಡಿಕೊಂಡು ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿತ್ತು. ಪಾರಂಪರಿಕ ಕೃಷಿ ಪ್ರಜ್ಞೆಯುಳ್ಳ ನಮ್ಮ ರೈತರು ಕೃಷಿಯಿಂದ ವಿಮುಖರಾಗಬಾರದು. ಕೃಷಿಯಲ್ಲಿ ಉತ್ತೇಜನ ಕಾಣಬೇಕು. ಸರ್ಕಾರಗಳು ರೈತರ ನೆರವಿಗೆ ಬರಬೇಕೆಂದು ಮಾನ್ಯ ಬಿಜೆಪಿ ರಾಜ್ಯಧ್ಯಕ್ಷರಾದ  ಬಿವೈ ವಿಜಯೇಂದ್ರ ಅವರು ರಾಜ್ಯಾಧ್ಯಂತ ಸಂಚರಿಸಿ, ಬಳಿಕ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರಿಗೆ ನಾಡಿನ ಅನ್ನದಾತ ಎದುರಿಸುತ್ತಿರುವ ಬವಣೆಗಳ ವರದಿ ನೀಡಿದ್ದರು.

ಕೂಡಲೇ ಸ್ಪಂದಿಸಿದ ಕೇಂದ್ರ ಮಂತ್ರಿ ಜೋಶಿ ಅವರು, ಕೇಂದ್ರ ಕೃಷಿ ಸಚಿವರಾದ ಶಿವರಾಜ ಸಿಂಗ್ ಚವ್ಹಾಣ್ ಅವರ ಗಮನ ಸೆಳೆದು, ರಾಜ್ಯದ ರೈತರ ನೆರವಿಗೆ ಧಾವಿಸಿದ್ದಾರೆ. ಹೀಗಾಗಿ  ಅನ್ನದಾತರ  ಹಿತದೃಷ್ಟಿಯಿಂದ ಹೆಸರು, ಉದ್ದು, ನೆಲಗಡಲೆ, ಸೋಯಾಬೀನ್ ಮತ್ತು ಸೂರ್ಯಕಾಂತಿ ಬೆಳೆಗಳನ್ನು ಖರೀದಿಸಲು ರಾಜ್ಯ ಸರ್ಕಾರ ಖರೀದಿ ಕೇಂದ್ರಗಳನ್ನು ಆರಂಭಿಸಬೇಕೆನ್ನುವುದು ನಮ್ಮ ಹಾಗೂ ನಮ್ಮ ನಾಯಕರ ಆಗ್ರಹವಾಗಿದೆ. ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷರ ಕರೆಯ ಮೇರೆಗೆ ನಾವೂ ಕೂಡ ರಾಜ್ಯಾದ್ಯಂತ ಸಂಚರಿಸಿ ಕ್ಷೇತ್ರ ಕಾರ್ಯ ಮಾಡುವ ಮೂಲಕ ರೈತರ ಸಮಸ್ಯೆಗಳನ್ನು ಹತ್ತಿರದಿಂದ ನೋಡಿದ್ದೆವು. ರೈತರು ಇನ್ನೇನಿದ್ದರೂ ನಷ್ಟ ಭರಿಸಲು ಸಾಲದ ಮೊರೆ ಹೋಗುವುದು ಅನಿವಾರ್ಯತೆ  ಇತ್ತು.
ಇದನ್ನು ಪಕ್ಷದ ರಾಜ್ಯಧ್ಯಕ್ಷರು ಮತ್ತು ವರಿಷ್ಠ ನೇತಾರರ ಗಮನಕ್ಕೆ ತರಲಾಗಿತ್ತು. ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ಅವರು ಕೇಂದ್ರ ಕೃಷಿ ಸಚಿವರಿಗೆ ಈ ಕುರಿತು ಗಮನ ಸೆಳೆದಾಗ ಕೇಂದ್ರ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಚಿವರು ತಕ್ಷಣವೇ ಸ್ಪಂದಿಸಿ ಎಂ ಎಸ್ ಪಿ ದರ ನಿಗದಿಗೊಳಿಸಿದ್ದಾರೆ. ಇದರಿಂದ ಹೆಸರು ಬೆಳೆ ಸೇರಿದಂತೆ ಒಟ್ಟು ಐದು ಬೆಳೆಗೆ ಎಂ ಎಸ್ ಪಿ ದರ ನಿಗದಿಗೊಳಿಸಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ.

ಬೆಂಬಲ ಬೆಲೆ ಅಡಿ ಕೇಂದ್ರದಿAದ ಹೆಸರು, ಉದ್ದು, ಶೇಂಗಾ ಖರೀದಿಗೆ ಭರವಸೆ ನೀಡಿದ್ದು, ಸೋಯಾಬಿನ್, ಸೂರ್ಯಕಾಂತಿಗೂ ನೆರವು ನೀಡಲು  ಕೇಂದ್ರ ಸಮ್ಮತಿಸಿದೆ. ಅತಿವೃಷ್ಟಿ ಕಾರಣ ನೆರವು ಕೋರಿದ್ದ ಜೋಶಿ ಅವರ ಮನವಿಗೆ ಕೇಂದ್ರ  ಮನ್ನಣೆ ನೀಡಿದೆ. ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ ಅವರ ಒತ್ತಾಸೆ ಮೇರೆಗೆ ನವರಾತ್ರಿ ಕೊಡುಗೆಯಾಗಿ ಬೆಂಬಲ ಬೆಲೆಯಲ್ಲಿ ಐದು ಧಾನ್ಯಗಳ ಖರೀದಿಗೆ ಅನುಮತಿ ನೀಡಲಾಗಿದೆ. ೨೦೨೫-೨೬ನೇ ಸಾಲಿನ ಮುಂಗಾರಿನಲ್ಲಿ ಬೆಳೆದ ಹೆಸರು ಕಾಳು, ಉದ್ದಿನ ಕಾಳು, ನೆಲಗಡಲೆ(ಶೇಂಗಾ), ಸೋಯಾ ಬಿನ್ ಮತ್ತು ಸೂರ್ಯಕಾಂತಿ ಧಾನ್ಯಗಳನ್ನು ಕೇಂದ್ರದ ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.

ರಾಜ್ಯ ಸರ್ಕಾರ ಖರೀದಿ ಕೇಂದ್ರ ಆರಂಭಿಸಲಿ ಎನ್ನುವುದು ನಮ್ಮ ಆಗ್ರಹವಾಗಿದೆ. ಕೇಂದ್ರದ ಬೆಂಬಲ ಬೆಲೆ ಯೋಜನೆಗೆ ರಾಜ್ಯವೂ ನೆರವು ನೀಡಬೇಕು. ತಕ್ಷಣ ಜಿಲ್ಲಾವಾರು ಖರೀದಿ ಕೇಂದ್ರ ತೆರೆದು ಧಾನ್ಯ ಖರೀದಿ ಪ್ರಕ್ರಿ ಯೆಗೆ ಚಾಲನೆ ನೀಡಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ. ಈ ವಿಷಯವಾಗಿ ರೈತರ ಸಂಕಷ್ಟಗಳಿಗೆ ಸ್ಪಂದಿಸಿ ಕೇಂದ್ರ ಸರ್ಕಾರದ ಗಮನ ಸೆಳೆಯುವಲ್ಲಿ ಪ್ರಯತ್ನ ನಡೆಸಿದ  ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಕೇಂದ್ರ ತೋಟಗಾರಿಕೆ ಸಚಿವರಿಗೆ, ಉನ್ನತ ಮಟ್ಟದ  ಅಧಿಕಾರಿಗಳಿಗೆ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಗಳನ್ನು ಸಲ್ಲಿಸಲು ಹರ್ಷಿಸುತ್ತೇನೆ ಎಂದು ಎಸ್.ಗುರುಲಿಂಗನಗೌಡ ಅವರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article