ಬಳ್ಳಾರಿ ಸೆ.23.. ಜಿಲ್ಲೆಯ ಸಾಹಿತಿ, ಕತೆಗಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷರಾಗಿರುವ ಸಿದ್ದರಾಮ ಕಲ್ಮಠ ಅವರ ರಚನೆಯ `ಪೈಲ್ವಾನ್ ಪಿಂಜಾರ್ ರಂಜಾನ್ ಸಾಬ್ ಕೃತಿಯು ಸಿದ್ದನಹಳ್ಳಿಯ ಬುದ್ದ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ನ ಬಿ.ಎಂ.ಶ್ರೀ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ.
ಸದರಿ ಪ್ರಶಸ್ತಿಯನ್ನು ಇದೇ ತಿಂಗಳು ಸೆಪ್ಟಂಬರ್ ೨೮ರಂದು ಭಾನುವಾರ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ೧೦ನೇ ಯುವಜನ ಸಾಹಿತ್ಯ, ಸಂಸ್ಕೃತಿ ಸಮಾವೇಶದಲ್ಲಿ ಹಿರಿಯ ಸಾಹಿತಿ ಹಾಗೂ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಅವರು ಲೇಖಕ ಸಿದ್ದರಾಮ ಕಲ್ಮಠ ಅವರಿಗೆ ಪ್ರದಾನ ಮಾಡಲಿದ್ದಾರೆ ಎಂದು ಸಿದ್ದನಹಳ್ಳಿಯ ಬುದ್ದ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ನ ಅಧ್ಯಕ್ಷ ಎಸ್.ರಾಮಲಿಂಗೇಶ್ವರ ಅವರು ತಿಳಿಸಿದ್ದಾರೆ.


