ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮಿ ಅರ್ಬನ್ ಕೋ-ಆಪ್ ಬ್ಯಾಂಕ 1.60 ಕೋಟಿ ಲಾಭ

Ravi Talawar
ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮಿ ಅರ್ಬನ್ ಕೋ-ಆಪ್ ಬ್ಯಾಂಕ 1.60 ಕೋಟಿ ಲಾಭ
WhatsApp Group Join Now
Telegram Group Join Now
ಅಥಣಿ: ಶತಮಾನೋತ್ಸವ ಸಂಭ್ರಮದಲ್ಲಿರುವ ಅಥಣಿ ಶಿವಯೋಗಿಗಳ ನಾಡಿನ ಶ್ರೀ ಮುರುಘೇಂದ್ರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ 102 ನೇ ವರ್ಷ ತುಂಬಿತು ಸಹಕಾರಿ ಕ್ಷೇತ್ರದ ಅತ್ಯಂತ ಹಳೆಯ ಮತ್ತು ನಂಬಿಗಾರ್ಹ ವಿಶ್ವಸಮಿಯ ಬ್ಯಾಂಕು ನಮ್ಮದಾಗಿದೆ. 2024-25 ಸಾಲಿನಲ್ಲಿ 1.60 ಕೋಟಿ ನಿವ್ವಳ ಲಾಭ ಮಾಡಿದ್ದು, ಐತಿಹಾಸಿಕ ಬ್ಯಾಂಕನ್ನು ಇನ್ನು ಉನ್ನತ ಮಟ್ಟಿಗೆ ಬೆಳೆಸುವಲ್ಲಿ ಆಡಳಿತ ಮಂಡಳಿ ಪ್ರಾಮಾಣಿಕ ಪ್ರಯತ್ನ, ಎಲ್ಲಾ ಸದಸ್ಯರ ಸಹಕಾರದೊಂದಿಗೆ ಹೊಸ ಮೈಲುಗಲ್ಲು ನಿರ್ಮಾಣದತ್ತ ದಾಪುಗಾಲು ಹಾಕೋಣ ಎಂದು ಪ್ರಾಸ್ತಾವಿಕವಾಗಿ ನಿರ್ದೇಶಕ ಸಂತೋಷ ಸಾವಡಕರ ಹೇಳಿದರು
ಅಥಣಿ ಪಟ್ಟಣದ ಶಿವಣಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮಿ ಅರ್ಬನ್ ಕೋ-ಆಪ್ ಬ್ಯಾಂಕ ಲಿ; ಅಥಣಿ ಇದರ 102ನೆ ವಾರ್ಷಿಕ ಮಹಾಸಭೆ ಜರುಗಿತು. ಸಭೆಯನ್ನು ಉದ್ದೇಶಿಸಿ ಬ್ಯಾಂಕಿನ ನಿರ್ದೇಶಕ ಸಂತೋಷ ಸಾವಡಕರ ಮಾತನಾಡಿ ನಮ್ಮ ಬ್ಯಾಂಕಿಗೆ 102 ವರ್ಷಗಳ ಸುದೀರ್ಘ ಅನುಭವ ಹಾಗೂ ಇತಿಹಾಸ ಇದೆ. ಬ್ಯಾಂಕಿನ ಮೇಲೆ ಜನರು ನಂಬಿಕೆ ಇಟ್ಟು ಬೆಳೆಸಿ ಪೋಷಿಸಿದ್ದಾರೆ. ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ. ನಿಸ್ವಾರ್ಥ ಹಾಗೂ ಪ್ರಾಮಾಣಿಕ ಕೆಲಸಗಳಿಂದ ಈ ಬ್ಯಾಂಕಿನ ಉದ್ಧಾರಕ್ಕಾಗಿ ಎಲ್ಲರೂ ಶ್ರಮಿಸೋಣ ಎಂದು ಹೇಳಿದರು.
ಈ ವೇಳೆ ಬ್ಯಾಂಕಿನ ಅಧ್ಯಕ್ಷ ಶಿವಯೋಗಿ ಗೆಜ್ಜೆ, ಉಪಾಧ್ಯಕ್ಷ ರುದ್ರಯ್ಯ ಹಿರೇಮಠ, ನಿರ್ದೇಶಕರಾದ, ಸಂಜಯ ತೆಲಸಂಗ, ಸಂತೋಷ ಸಾವಡಕರ, ಶಿವಾನಂದ ಹುನ್ನೂರ, ಶ್ರೀಶೈಲ ಮೋಪಗಾರ, ಶ್ರೀಮತಿ ವಿಜಯಮಾಲಾ ತೆಲಸಂಗ, ದುಂಡಪ್ಪ ಬುರುಡ, ಶಿವಯೋಗಿ ಮಂಗಸೂಳಿ, ಮಹೇಶ ಚುನಮುರಿ, ರಾಮು ಗಾಡಿವಡ್ಡರ, ಶ್ರೀಮತಿ ಸುಷ್ಮಾ ಇಟ್ನಾಳಮಠ, ಮುಖಂಡರಾದ ರಾಮನಗೌಡ ಪಾಟೀಲ, ಶಂಭು ಮಮದಾಪುರ, ಪುಟ್ಟು ತೆಲಸಂಗ ಸಂಪತಕುಮಾರ ಶೇಟ್ಟಿ, ಸೇರಿದಂತೆ ಎಸ್ ಎಸ್ ಎಮ್ ಎಸ್ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article