ಅಥಣಿ: ಖಾಸಗಿ ಸಕ್ಕರೆ ಕಾರಖಾನೆಗಳು ಪ್ರತಿ ಟ್ರಾö್ಯಕ್ಟರ ಕಬ್ಬಿನಲ್ಲಿ ೨ ಟನ್‌ನಷ್ಟು ತೂಕ ಹೊಡೆದು, ರೈತರಿಗೆ ಮೋಸ ಮಾಡುತ್ತಿರುವದು ಕಂಡು ಬಂದಿದೆ. ಖಾಸಗಿ ಸಕ್ಕರೆ ಕಾರ್ಖಾನೆಗಳು ಲಾಭದಲ್ಲಿ ಇವೆ. ಪ್ರತಿ ಲೋಡನಲ್ಲಿ ಸರಿಸುಮಾರು ೫ಸಾವಿರ ಹಣ ಕೊಳ್ಳೆ ಹೊಡಿಯುತ್ತಿದ್ದಾರೆ. ಆದರೆ ಸಹಕಾರಿ ರಂಗದ ಸಕ್ಕರೆ ಕಾರಖಾನೆಗಳಲ್ಲಿ ತೂಕ ಹಾಗೂ ಬೆಲೆಯಲ್ಲಿ ಪ್ರಾಮಾಣಕವಾಗಿ ಕಾರ್ಯ ಮಾಡುತ್ತಿರುವದರಿಂದ ಹಾನಿಗೊಳಗಾಗುತ್ತಿವೆ. ಸಹಕಾರಿ ಕ್ಷೇತ್ರದ ಸಕ್ಕರೆ ಕಾರಖಾನೆಗಳು ಉಳಿವಿಗಾರಿ ಪ್ರಾಮಾಣಿಕ ಆಡಳಿತ ಮಂಡಳಿ ಹಾಗೂ ನಮ್ಮ ಕಾರಖಾನೆ ಎನ್ನುವ ಮನೋಭಾವದಿಂದ ಗುಣಮಟ್ಟದ ಕಬ್ಬುನ್ನು ರೈತರು ಪೂರೈಸಬೇಕು ಎಂದು ಶಾಸಕ ಲಕ್ಷö್ಮಣ ಸವದಿ ಮನವಿ ಮಾಡಿದರು
ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಬಳಿ ಸೋಮವಾರ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ನಿಯಮಿತ ಅಥಣಿ ಇದರ ೩೩ ಮೇ ವಾರ್ಷಿಕ ಸರ್ವಸಾಧರಣ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಲಕ್ಷö್ಮಣ ಸವದಿ ಅವರು ೨೦೨೫-೨೬ನೇ ಸಾಲಿಗೆ ೮ ಲಕ್ಷ್ ಕಬ್ಬು ನುರಿಸಿ ೧೧ ಇಳುವರಿಯೊಂದಿಗೆ ೯ ಲಕ್ಷ ಕ್ವೀಂಟಾಲ್ ಸಕ್ಕರೆ ಉತ್ಪಾದನೆ ಮಾಡಿ ೧೩.೫೦ ಕೋಟಿ ಲಾಭ ಹೊಂದುವ ಗುರಿ ಹೊಂದಲಾಗಿದ್ದು ಆದರೆ ಕಳೆದ ವರ್ಷದಲ್ಲಿ ೩೪ ಕೋಟಿ ರೂ.ಗಳಷ್ಟು ವಿವಿಧ ಕಾರಣಗಳಿಂದಾಗಿ ಕಾರಖಾನೆ ಹಾನಿಗೊಳಗಾಗಿದ್ದು, ಆದರೆ ಇದಕ್ಕೆ ಪ್ರಮುಖವಾಗಿ ಕಳೆದ ಸಾಲಿನಲ್ಲಿ ಕಡಿಮೆ ಇಳುವರಿ ಹಾಗೂ ಕೇವಲ ೪ ಲಕ್ಷ ಟನ್ ನಷ್ಟು ಕಬ್ಬು ಪೂರೈಕೆ ಮಾಡಲಾಗಿದೆ. ಬರುವ ಹಂಗಾಮಿಗೆ ಈ ಭಾಗದ ರೈತರು ಅತಿ ಹೆಚ್ಚು ಗುಣಮಟ್ಟದ ಕಬ್ಬು ಸರಬರಾಜ ಮಾಡಿ ೮ ಲಕ್ಷ ಟನ್‌ಗು ಹೆಚ್ಚು ಕಬ್ಬು ನೂರಿಸಿ ನಷ್ಟದಲ್ಲಿರುವ ಕಾರಖಾನೆಯನು ಲಾಭದ ಕಡೆಗೆ ಕೊಂಡೊಯ್ಯಲು ಪ್ರಾಮಾಣಿಕ ಪ್ರೇಯತ್ನ ಮಾಡಲಾಗುವದು. ರೈತರ ಕಾರಖಾನೆ ಉಳಿಸಲು ರೈತರ ಸಹಕಾರ ಅಗತ್ಯತೆ ಇದೆ. ಖಾಸಗಿ ಬಹುತೇಕ ಕಾರಖಾನೆಗಳು ಮೊಸ ಮಾಡುತ್ತಿವೆ. ಸಹಕಾರಿ ಸಕ್ಕರೆ ಕಾರಖಾನೆಗಳು ಬೆರಳೆಣಿಕೆಯಷ್ಟು ಉಳಿದಿವೆ. ಸರಕಾರದ ನಿಯಮಗಳನ್ನು ಮೀರಿ ಖಾಸಗಿ ಕಾರಖಾನೆಗಳು ಸಕ್ಕರೆ ಮಾರಾಟ ಮಾಡುತ್ತಿವೆ. ಕೇಂದ್ರದ ಎಫ್ ಆರ್ ಪಿ ನಿಯಮಗಳನ್ನು ಯಾರು ಪಾಲಿಸುತ್ತಿಲ್ಲ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಿ ಮೋಸದ ಆಟಕ್ಕೆ ಬ್ರೇಕ್ ಹಾಕಲು ಸರಕಾರದ ಮಟ್ಟದಲ್ಲಿ ರೈತರ ಪರವಾಗಿ ಹೋರಾಟ ಮಾಡುವದಾಗಿ ಹೇಳಿದರು
ಈ ವೇಳೆ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಅಥಣಿ ವಾರ್ಷಿಕ ೩೩ನೇ ಸರ್ವಸಾಧಾರಣ ಸಭೆಯಲ್ಲಿ ಅದ್ಯಕ್ಷ ಪರಪ್ಪ ಸವದಿ ಅವರು
ವಾರ್ಷಿಕ ವರದಿಯನ್ನು ಸಭೆಗೆ ನೀಡಿ ಒಪ್ಪಿಗೆ ಪಡೆದರು.ಕಾಗವಾಡ ಶಾಸಕ ರಾಜೂ ಕಾಗೆ ಮಾತನಾಡಿದರು.
ಈ ವೇಳೆ ಕಾರಖಾನೆ ಉಪಾಧ್ಯಕ್ಷ ಶಂಕರ ವಾಘಮೋಡೆ, ನಿರ್ದೇಶಕರಾದ ಗುರುಬಸು ತೇವರಮನಿ, ಶಾಂತಿನಾಥ ನಂದೇಶ್ವರ, ರುಕ್ಮೀಣಿ ಕುಲಕರ್ಣಿ, ರಮೇಶ ಪಟ್ಟಣ, ಸೌರಭ ಪಾಟೀಲ, ಸುನಂದಾ ನಾಯಿಕ, ಸಿದ್ರಾಯ ನಾಯಿಕ, ಮಲ್ಲಿಕಾರ್ಜುನ ಗೋಟಖಿಂಡಿ, ಹಣಮಂತ ಜಗದೇವ, ಪ್ರಲ್ಹಾದ ಪಾಟೀಲ, ವಿಶ್ವನಾಥ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಜಿ ಎಮ್ ಪಾಟೀಲ, ಮುಖಂಡರಾದ ಮಲ್ಲೇಶ ಸವದಿ, ಶಿವಕುಮಾರ ಸವದಿ, ವಿಶ್ವನಾಥ ತೆಲಸಂಗ, ಸಂತೋಷ ಸಾವಡಕರ, ಸಿಬ್ಬಂಧಿಗಳಾದ ಸಿ ಎಸ್ ಪಾಟೀಲ, ಎಹ್ ಡಿ ಧರಿಗೌಡರ, ಎಸ್ ಎ ಠಕ್ಕಣ್ಣವರ, ಎಸ್ ಬಿ ಗೋಟಖಿಂಡಿ, ಡಿ ಬಿ ದೇಸಾಯಿ, ವಿ ಪಿ ಮನಗೂಳಿ, ಎ ಜಿ ಕುಲಕರ್ಣಿ, ಸೇರಿದಂತೆ ಕಾರಖಾನೆ ಸಿಬ್ಬಂದಿಗಳು ಹಾಗೂ ಕಾರ್ಮಿಕರು ಮತ್ತು
ರೈತಬಾಂಧವರು ಉಪಸ್ಥಿತರಿದ್ದರು.


