ತಾಯಿ ದುರ್ಗಾ ಮಾತೆ ಜನತೆಗೆ ಸಕಲವನ್ನೂ ಕರುಣಿಸಲಿ: ಸಹಜಾನಂದ ಶ್ರೀ

Pratibha Boi
ತಾಯಿ ದುರ್ಗಾ ಮಾತೆ ಜನತೆಗೆ ಸಕಲವನ್ನೂ ಕರುಣಿಸಲಿ: ಸಹಜಾನಂದ ಶ್ರೀ
WhatsApp Group Join Now
Telegram Group Join Now

ಮಹಾಲಿಂಗಪುರ : ನಾಡಹಬ್ಬ ದಸರಾ ಉತ್ಸವದ ಸಂಭ್ರಮಕ್ಕೆ ನಗರ ಮಧುವನಗಿಂತಿಯಂತೆ ಸಿಂಗಾರಗೊಂಡು ಹಬ್ಬದ ಕಳೆ ಎದ್ದು ಕಾಣುತ್ತಿತ್ತು ಅದರಲ್ಲೂ ದುರ್ಗಾದೇವಿ ಮೆರವಣಿಗೆ ಚಾಲನೆ ನೀಡಿದ ಸಿದ್ದಾರೂಢ ಆಶ್ರಮದ ಪ ಪೂ ಶ್ರೀ ಸಹಜಾ ನಂದ ಸ್ವಾಮೀಜಿ ದೇವಿ ನಾಡಿನ ಜನತೆಗೆ ಸಕಲ ಸೌಭಾಗ್ಯ ಕರುಣಿಸಲಿ ಎಂದು ಹೇಳಿದರು.

ನಗರದಲ್ಲಿ ನಡೆಯುವ ದಸರಾ ಉತ್ಸವದ ಮೆರವಣಿಗೆ ಶ್ರೀ ಬನಶಂಕರಿದೇವಿ ದೇವಸ್ಥಾನ ಆಡಳಿತ ಮಂಡಳಿ ದೇವಾಂಗ ಹಟಗಾರ ಯುವಕ ಸಂಘ (ರಿ) ಮಹಾಲಿಂಗಪುರ ಸಾಂಸ್ಕೃತಿಕ ಉತ್ಸವ ಸಂಘ ( ರಿ) ಮಹಾಲಿಂಗಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟ ಇವರ ಸಹಯೋಗದಲ್ಲಿ ಶ್ರೀ ಸಿದ್ದಾರೂಢ ಆಶ್ರಮದಲ್ಲಿ ದೇವಿಯ ಬೆಳ್ಳಿ ಮೂರ್ತಿ ಮತ್ತು ನೂತನ ಶ್ರೀ ಚಕ್ರ ಮತ್ತು ನೂತನ ಕಳಸಗಳ ಪೂಜೆ ಸಲ್ಲಿಸಿದರು. ಅಲ್ಲಿಂದ ಮೆರವಣಿಗೆ ಸಕಲ ಮಂಗಲ ವಾದ್ಯ ಮುತೈದೆಯರ ಆರತಿ, ಕುಂಭ ಮೇಳದೊಂದಿಗೆ ಚನ್ನಮ್ಮ ವೃತ್ತ, ಗಾಂಧಿ ವೃತ್ತ, ಜವಳಿ ಬಜಾರ, ನಡುಚೌಕಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಾರ್ಗವಾಗಿ ಸಾಗಿ ಬಂದು ದೇವಸ್ಥಾನ ತಲುಪಿದ ನಂತರ ಪೂಜೆ ಸಲ್ಲಿಸಿ ದೇವಿ ಮೂರ್ತಿ ವೇದಿಕೆ ಮೇಲೆ ಪ್ರತಿ?ಪನೆ ಮಾಡಲಾಯಿತು.

ಒಟ್ಟಿನಲ್ಲಿ ನೋಡುಗರಿಗೆ ಇದು ಮೈಸೂರ ದಸರಾ ತರ ಕಂಗೋಳಿಸುತ್ತಿತ್ತು.
ಈ ಬಾರಿ ದಸರಾ ಹತ್ತು ದಿನಗಳು ಬಂದಿದ್ದು ಒಂದು ವಿಶೇಷವಾಗಿದ್ದು ಮೈಂದರಗಿಯ ಮೃತ್ಯುಂಜಯ ಮಹಾಸ್ವಾಮಿಗಳು ದೇವಿ ಪುರಾಣ ಪ್ರವಚನ ನಡೆಸಿಕೊಡಲಿದ್ದಾರೆ. ಅವರಿಗೆ ಹಣಮಂತ ಅಂಕದ ತಬಲಾ ಮತ್ತು ಶ್ರೀಕಾಂತ್ ನಾಯಿಕ ಹಾರ್ಮೋನಿಯಂ ಸಂಗೀತ ಸೇವೆ ನೀಡಲಿದ್ದಾರೆ.

ನೀಲಕಂಟೇಶ್ವರ ದೇವಸ್ಥಾನ : ನಗರದ ಕುರುಹಿನಶೆಟ್ಟಿ ಸಮುದಾಯ ನೀಲಕಂಟೇಶ್ವರ ದೇವಸ್ಥಾನದಲ್ಲಿ ಇಂದಿನಿಂದ ಹತ್ತು ದಿನಗಳ ಕಾಲ ಸಾಯಂಕಾಲ ೭ ಗಂಟೆಯಿಂದ ೯ ಗಂಟೆವರೆಗೆ ದೇವಿ ಪುರಾಣ ಮತ್ತು ಮಹಾಪ್ರಸಾದ ಜರುಗುವುದು ಭಕ್ತರು ದೇವಿ ಪುರಾಣ ಕೇಳಿ ದೇವಿ ಕೃಪೆಗೆ ಪಾತ್ರರಾಗಬೇಕು.

ಬಸವ ನಗರ : ನಗರ ಬಸವ ನಗರ ಬಡಾವಣೆಯಲ್ಲಿ ದೇವಿ ಮೂರ್ತಿಯನ್ನು ಭವ್ಯ ಮೆರವಣಿಗೆ ಮೂಲಕ ತಂದು ಪ್ರತಿ?ಪನೆ ಮಾಡಿದ್ದು ಅಲ್ಲೂ ಹತ್ತು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ಜರಗುವವು ಭಕ್ತಾದಿಗಳು ದೇವಿ ಕೃಪೆಗೆ ಪಾತ್ರರಾಗಬೇಕು.

ಲಕ್ಷ್ಮಿ ನಗರ : ಕೆಂಗೇರಿ ಮಡ್ಡಿಯಲ್ಲಿರುವ ಲಕ್ಷ್ಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ನಿಮಿತ್ಯ ವಿಶೇಷ ಅಲಂಕೃತ ದೇವಿ ಮೂರ್ತಿ ಅತೀ ಸುಂದರವಾಗಿ ಕಂಗೊಳಿಸುತ್ತಿತ್ತು ದೇವಸ್ಥಾನದಲ್ಲಿ ಹತ್ತು ದಿನಗಳ ಕಾಲ ವಿವಿಧ ಪೂಜೆಗಳು ಲಭ್ಯವಿದ್ದು ಭಕ್ತರು ಇದರ ಸದುಪಯೋಗ ಮಾಡಿಕೊಳ್ಳಬೇಕು.

ಸಿದ್ದು ಸವದಿ ಭೇಟಿ : ದೇವಿ ಮೂರ್ತಿಯ ಮೆರವಣಿಗೆ ಜವಳಿ ಬಜಾರ ತಲುಪಿದಾಗ ತೇರದಾಳ್ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಅವರು ದೇವಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಈ ಸಂಧರ್ಭದಲ್ಲಿ ನಗರದ ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.ರವಿಗೌಡ ಪಾಟೀಲ, ಕೃಷಗೌಡ ಪಾಟೀಲ, ಮಲ್ಲಪ್ಪ ಭಾವಿಕಟ್ಟಿ,ಲಕ್ಕಪ್ಪ ಚಮಕೇರಿ, ಸಿದ್ದಪ್ಪ ನಿಂಬರಗಿ, ಶೇಖರ ಅಂಗಡಿ, ರವಿ ಕೌಜಲಗಿ, ಗುರುಪಾದ ಅಂಬಿ, ಶಿವಾನಂದ ಅಂಗಡಿ, ಗುರು ಬಾಡಗಿ,ಶಿವಲಿಂಗ ಟಿರ್ಕಿ, ರಮೆಶ ಭಾವಿಕಟ್ಟಿ, ಚಂದ್ರು ಗೊಂದಿ, ಮಹಾಲಿಂಗಪ್ಪ ಜಕ್ಕಣ್ಣವರ, ಮಹಾಲಿಂಗ ದಡೂತಿ, ಅಶೋಕ ಅಂಗಡಿ, ಮಂಜನಾಥ್ ಭಾವಿಕಟ್ಟಿ, ಬಿ ಡಿ ಸೋರಗಾಂವಿ ಪ್ರಕಾಶ್ ಬಾಡನವರ,ಬಿ.ಸಿ ಪೂಜಾರಿ ಸೇರಿದಂತೆ ನಗರದ ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.

 

WhatsApp Group Join Now
Telegram Group Join Now
Share This Article