ಧಾರವಾಡ: ಜಿಲ್ಲಾ ಮಹಿಳಾ ಕಾಂಗ್ರೆಸ್ ಪದಗ್ರಹಣ ಕಾರ್ಯಕ್ರಮವು ಸೆ.23ರಂದು ಧಾರವಾಡ ಮಾಡರ್ನ್ ಹಾಲ್‌ನಲ್ಲಿ ನಡೆಯಲಿದೆ ಎಂದು ಹು-ಧಾ ಮಹಾನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೌರಮ್ಮಾ ಬಲೋಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಪಿ.ಎಂ.ಸಿ. ರಾಜ್ಯಾಧ್ಯಕ್ಷೆ ಸೌಮ್ಯಾ ರೆಡ್ಡಿ ಅವರು ಆಗಮಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕ ವಿನಯ ಕುಲಕರ್ಣಿ, ಹುಬ್ಬಳ್ಳಿ ಶಾಸಕ ಅಬ್ಬಯ್ಯ ಪ್ರಸಾದ, ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ, ಇಸ್ಮಾಯಿಲ್ ತಮಟಗಾರ, ರಜತ ಉಳ್ಳಾಗಡ್ಡಿಮಠ, ಶಿವಲೀಲಾ ಕುಲಕರ್ಣಿ ಪಾಲ್ಗೊಳ್ಳುವರು ಎಂದರು. ಹು-ಧಾ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಬ್ಲಾಕ್ ಅಧ್ಯಕ್ಷರಾದ ಕಲಾವತಿ ದತ್ತವಾಡ, ನಾಗರತ್ನ ಶೀಗಿಹಳ್ಳಿ, ಅಕ್ಕಮ್ಮ ಕಂಬಳಿ, ಚೇತನಾ ಲಿಂಗದಾಳ, ಸುಮಂಗಲಾ ಪೂಜಾರ, ಬಾಳಮ್ಮ ಜಂಗಿನವರ ಇದ್ದರು.


