ಘಟಪ್ರಭಾ. ಸ್ವಚ್ಛಭಾರತ ಅಭಿಯಾನದ ಅಂಗವಾಗಿ ಮತ್ತು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಹುಟ್ಟುಹಬ್ಬ ಮತ್ತು ಮಹಾತ್ಮ ಗಾಂಧಿಯವರ ಹುಟ್ಟು ಹಬ್ಬದ ಅಂಗವಾಗಿ ಸೇವಾ ಪಾಕ್ಷಿಕ ಆಚರಣೆ ನಿಮಿತ್ತ ಘಟಪ್ರಭಾ ರೇಲ್ವೆ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು. ಮತ್ತು ನಾಗರಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ವೇದಿಕೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಶ್ರೀ ರಾಮ ಪ್ಭಭಾತ ಶಾಖೆ, ಜೈಂಟ್ಸ್ ಗ್ರೂಪ್ ಆಫ್ ಘಟಪ್ರಭಾದ ಸದಸ್ಯ ರು ಭಾಗವಹಿಸಿದ್ದರು
ಈ ಸಂದರ್ಭದಲ್ಲಿ ರಾಮಣ್ಣ ಹುಕ್ಕೇರಿ, ಸುರೇಶ ಪಾಟೀಲ, ಶ್ರೀಕಾಂತ ವಿ ಮಹಾಜನ ಅರ್ ಪಿ ಎಫ್ ಅಧಿಕಾರಿಗಳಾದ ತ್ರಿವಾಲ ಕುಮಾರ ಬಸವರಾಜ ಕಟ್ಟೀಮನಿ ಮುಂತಾದವರು ಮಾತನಾಡಿ ರೇಲ್ವೆ ನಿಲ್ದಾಣದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಎಲ್ಲಾ ನಾಗರೀಕರು ಸಹಕಾರ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುಪಪರಿಂಟೆಂಡೆಂಟ್ ವಿಕ್ರಮ್ ಮೀನಾ ಬಾಬುರಾವ್ ಚೌಧರಿ, ಹುಕಮಾರಾಮ್ ಚೌಧರಿ, ಸುಭಾಸ್ ದಡ್ಡೀಕರ, ಚಿನ್ನಪ್ಪ ಅಂಗಡಿ ಬಾಬುರಾವ್ ಚೌಧರಿ, ಹುಕಮಾರಾಮ್ ಚೌಧರಿ ಭೂಪಾಲ್ ಖೆಮಲಾಪುರೆ ಶ್ರೀಕಾಂತ ಕುಲಕರ್ಣಿ ಪ್ರಶಾಂತ ಶಿವಾಪುರ, ಮಲ್ಲಪ್ಪ ಹುಕ್ಕೇರಿ, ಗುರುಬಸಯ್ಯಾ ಕರ್ಪೂರಮಠ ರಾಜು ಕತ್ತಿ, ಕೆಂಚಪ್ಪಾ ನಾಯಿಕ , ಪುಂಡಲೀಕ ನಾಯಿಕ ಕೆಪಿ ಕಳ್ಳೀಮಠ, ಮಲ್ಲಿಕಾರ್ಜುನ ಮಾನಗಾವಿ ಕಾಳಪ್ಪ ರಾಜಣ್ಣವರ, ರಮೇಶ್ ಜಿರ್ಲಿ ಗಣುಸಿಂಗ ರಜಪೂತ ಮಾರುತಿ ವನಜೇರಿ ಆರ್ ಪಿ ಎಪ್ ಸಿಬ್ಬಂದಿಗಳಾದ , ಎಸ್ ಆಯ್ ಮಲ್ಲಿಕಾರ್ಜುನ ಇಂಗಳೆ ಬಸವರಾಜ ಕಟ್ಟೀಮನಿ ಧಾರು, ಮಾರುತಿ ಸೇರಿದಂತೆ ಘಟಪ್ರಭಾ ಹಾಗೂ ಸುತ್ತ ಮುತ್ತಲಿನ ನಾಗರಿಕರು ಭಾಗವಹಿಸಿದ್ದರು.


