ಬಸವಣ್ಣನವರ ತತ್ವಾದರ್ಶ ತಿರಸ್ಕರಿಸುವವರು ಮನುಷ್ಯತ್ವ ವಿರೋಧಿಗಳು: ಮೈತ್ರೇಯಿನಿ ಗದಿಗೆಪ್ಪಗೌಡರ

Ravi Talawar
ಬಸವಣ್ಣನವರ ತತ್ವಾದರ್ಶ ತಿರಸ್ಕರಿಸುವವರು ಮನುಷ್ಯತ್ವ ವಿರೋಧಿಗಳು: ಮೈತ್ರೇಯಿನಿ ಗದಿಗೆಪ್ಪಗೌಡರ
WhatsApp Group Join Now
Telegram Group Join Now

ಬೆಳಗಾವಿ: ಬಸವಣ್ಣನವರ ಸಾಮಾಜಿಕ ಮತ್ತು ಆರ್ಥಿಕ ಮೌಲ್ಯಗಳನ್ನು ತಿರಸ್ಕರಿಸುವ ಮನಸ್ಥಿತಿಯ ವ್ಯಕ್ತಿ ಸಮಾಜದಲ್ಲಿ ಯಾರನ್ನೂ ಪ್ರೀತಿಸಲಾರ ಎಂದು ಮೈತ್ರೇಯಿನಿ ಗದಿಗೆಪ್ಪಗೌಡರ ಅಭಿಪ್ರಾಯಪಟ್ಟರು.

ಮಹಾಂತೇಶ ನಗರದ ಮಹಾಂತ ಭವನದಲ್ಲಿ ಭಾನುವಾರ ಜಾಗತಿಕ ಲಿಂಗಾಯತ ಮಹಾಸಭಾ ಆಯೋಜಿದ್ದ ಮಾಸಿಕ ಅನುಭಾವ ಗೋಷ್ಠಿಯಲ್ಲಿ ” ಬಸವ ಸಂಸ್ಕೃತಿ ಅಭಿಯಾನ – ಒಂದು ವಿಶ್ಲೇಷಣೆ “ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಅವರು,

ಸಾಹಿತಿ ಶರಣೆ ಮೈತ್ರೇಯಿನಿ ಗದಿಗೆಪ್ಪಗೌಡರ ಅವರು ಮೇಲಿನಂತೆ ಹೇಳಿದರು.  ಬಸವಾದಿ ಶರಣರ ತತ್ವ ಆದರ್ಶಗಳನ್ನು ಅಪಪ್ರಚಾರ ಮಾಡುವವರು  ಮನುಷ್ಯತ್ವದ ವಿರೋಧಿಗಳು. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಬಸವಾದಿ ಶರಣರ ತತ್ವ ಆದರ್ಶ ವಿಶ್ವಕ್ಕೆ ನೀಡಿದ ಒಂದು ಅಮೂಲ್ಯ ಕೊಡುಗೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ  ಬಸವರಾಜ ರೊಟ್ಟಿ ಇತ್ತೀಚಿಗೆ ಕೆಲವು ರಾಜಕಾರಣಿಗಳು ವಿಶ್ವ ಗುರು ಬಸವಣ್ಣನವರ ಕುರಿತು ಅವಹೇಳನಕರ ಹೇಳಿಕೆಯನ್ನು ಕೊಡುತ್ತಿದ್ದು ದುರದೃಷ್ಟಕರ ಎಂದು ಹೇಳಿದರು. ಶಾಸಕ ಬಸನಗೌಡಾ ಪಾಟೀಲ ಯತ್ನಾಳ ಅವರು ಬಸವಣ್ಣನವರು “ಲಿಂಗಾಯತ ಧರ್ಮದ ಸ್ಥಾಪನೆ ಮಾಡಿಲ್ಲ” ಅಂತಾ ಹೇಳಿದ್ದನ್ನು ಜಾಗತಿಕ ಲಿಂಗಾಯತ ಮಹಾಸಭಾವು ಉಗ್ರವಾಗಿ ಖಂಡಿಸುತ್ತದೆ. ಎಲ್ಲಾ ಲಿಂಗಾಯತ ಒಳ ಪಂಗಡದವರು ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ” ಲಿಂಗಾಯತ ” ಅಂತಾ ಬರೆಸಬೇಕು.ಜಾತಿಯ ಕಾಲಂನಲ್ಲಿ ತಮ್ಮ ತಮ್ಮ ಜಾತಿಯ ಹೆಸರನ್ನು ಬರೆಸಬೇಕೆಂದು ಕರೆಕೊಟ್ಟರು.

ಪಾವನ ಸಾನಿದ್ಯ ವಹಿಸಿ ಆಶಿರ್ವಚನ ನೀಡಿದ ನಾಗನೂರ ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿ ಅವರು ನಮ್ಮ ಮುಂದಿನ ಪೀಳಿಗೆಗೆ ಬಸವಾದಿ ಶರಣರ ತತ್ವಾದರ್ಶಗಳನ್ನು ಕೊಡಬೇಕಾದ ಹೊಣೆಗಾರಿಕೆ ನಮ್ಮ ತಾಯಂದಿರ ಮೇಲಿದೆ.ಇಂತಹ ಗೋಷ್ಠಿ, ಉಪನ್ಯಾಸಗಳಿಗೆ ತಮ್ಮತಮ್ಮ ಮಕ್ಕಳನ್ನು ಕರೆತರಬೇಕೆಂದು ಹೇಳಿದರು.
ವೇದಿಕೆಯ ಮೇಲೆ ಪ್ರಸಾದ ದಾಹೋಹಿಗಳಾದ  ಎಸ್.ಜಿ.ಸಿದ್ನಾಳ ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕ ಸದಸ್ಯರಾದ ಶೈಲಜಾ ಭಿಂಗೆ ಇದ್ದರು.

ಇದೇ ಸಂದರ್ಭದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿಗೆ ಶ್ರಮಿಸಿದ ಬಸವರಾಜ ರೊಟ್ಟಿ,ಅಶೋಕ ಮಳಗಲಿ,ಪ್ರವೀಣ ಚಿಕಲಿ,ಚಂದ್ರು ಬೂದಿಹಾಳ,ಮುರಿಗೆಪ್ಪ ಬಾಳಿ,ಶರಣೆ ರತ್ನಾ ಬೆಣಚಮರ್ಡಿ,ಸುಜಾತಾ ಮತ್ತಿಕಟ್ಟಿ,ಅನಿತಾ ಚಟ್ಟರ ನಯನಾ ಗಿರಿಗೌಡರ,ಕಾವೇರಿ ಕಿಲಾರಿ ಅವರನ್ನು ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಗೌರವಿಸಲಾಯಿತು.
ಶೋಭಾ ಶಿವಳ್ಳಿ ಅವರು ನಿರೂಪಣೆ ಮಾಡಿದರು.ರತ್ನಾ ಬೆಣಚಮರ್ಡಿ ಪ್ರಾಸ್ತಾವಿಕ ದೊಂದಿಗೆ ಸ್ವಾಗತಿಸಿದರು.ಸುಜಾತಾ ಮತ್ತಿಕಟ್ಟಿ ಶರಣು ಸಮರ್ಪಣೆ ಮಾಡಿದರು.

ಅಶೋಕ ಮಳಗಲಿ, ಅರವಿಂದ ಪರುಶೆಟ್ಟಿ,ಎಫ್ ಆರ್ ಪಾಟೀಲ, ಈರಣ್ಣ ಚಿನಗುಡಿ,ಗಂಗಪ್ಪ ಗುರುವನ್ನನವರ,ಶಂಕರ ಶೆಟ್ಟಿ, ಮೋಹನ ಗುಂಡ್ಲೂರ,ಭಾಗ್ಶಬೆಣಚಮರ್ಡಿ,ನೇತ್ರಾ ರಾಮಾಪುರಿ,ಕೆಂಪಣ್ಣ ರಾಮಾಪುರಿ,ಕುಲಗೋಡಿ,ಚಂದ್ರಪ್ಪ ನಾವಲಗಟ್ಟಿ,ನಯನಾGBG ಗಿರಿಗೌಡರ,ಕಾವೇರಿ ಕಿಲಾರಿ,ಸದಾನಂದ ಬಶೆಟ್ಟಿ,ಬಸವರಾಜ ಮತ್ತಿಕಟ್ಟಿ,ಸುಲೋಚನಾ ವಸ್ತ್ರದ, ಹೇಮಾ ಕಾಜಗಾರ ಅಲ್ಲದೇ ವಿವಿಧ ಬಡವಣೆಗಳ ಬಸವ ಅನುಯಾಯಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತಿತರಿದ್ದರು.

WhatsApp Group Join Now
Telegram Group Join Now
Share This Article