ಜಾತಿ ಜನಗಣತಿಯಲ್ಲಿ ನಾಯಕ ಎಂದು ಬರೆಸಲು ವಾಲ್ಮೀಕಿ ಸಂಘದ ಉಪಾಧ್ಯಕ್ಷ ಬಿ ಜಯರಾಮ್ ಸೂಚನೆ 

Ravi Talawar
ಜಾತಿ ಜನಗಣತಿಯಲ್ಲಿ ನಾಯಕ ಎಂದು ಬರೆಸಲು ವಾಲ್ಮೀಕಿ ಸಂಘದ ಉಪಾಧ್ಯಕ್ಷ ಬಿ ಜಯರಾಮ್ ಸೂಚನೆ 
WhatsApp Group Join Now
Telegram Group Join Now
ಬಳ್ಳಾರಿ ಸೆ. 22.:  ನಾಳೆಯಿಂದ ರಾಜ್ಯ ಸರ್ಕಾರ ನಡೆಸಲು ಜಾತಿ ಜನಗಣತಿಯಲ್ಲಿ ವಾಲ್ಮೀಕಿ ಸಮುದಾಯದ ಜನಾಂಗ ತಪ್ಪದೇ ಧರ್ಮದ ಕಲಂ ನಲ್ಲಿ ಹಿಂದೂ ಎಂದು ಜಾತಿ ಕಾಲಮ್‌ನಲ್ಲಿ ನಾಯಕ ಎಂದು ಬರೆಸಿ ಸಮುದಾಯದ ಏಳಿಗೆಗೆ ಸಹಕರಿಸಬೇಕೆಂದು ಬಳ್ಳಾರಿ ಜಿಲ್ಲಾ ವಾಲ್ಮೀಕಿ ನಾಯಕರ ವಿದ್ಯಾಭಿವೃದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷ ಬಿ ಜೆ ರಾಮ್ ಪ್ರೂಯುಸಿದರು.
 ಅವರು ಇಂದು ಗಾಂಧಿನಗರದ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಪತ್ರಕರ್ತರೊಂದಿಗೆ ಮಾತನಾಡಿ, ರಾಜನಹಳ್ಳಿಯ ನಮ್ಮ ಕುಲಗುರುಗಳ ಸೂಚನೆಯ ಮೇರೆಗೆ ನಮ್ಮ ವಾಲ್ಮೀಕಿ ನಾಯಕ ಜನಾಂಗದ  ಆರ್ಥಿಕ  ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗುವಂತೆ ಈ ಜಾತಿ ಜನಗಣತಿಯಲ್ಲಿ ನಾಯಕ ಎಂದು ಬರೆಸಬೇಕೆಂದು ಈ ಸಂದರ್ಭದಲ್ಲಿ ಸಮುದಾಯದ ಸಾರ್ವಜನಿಕರಿಗೆ ತಿಳಿಸಿದರು.
 ವಾಲ್ಮೀಕಿ ಜನಾಂಗದ ಎಷ್ಟೇ ಸಂಘಟನೆಗಳಿದ್ದರೂ ಅವೆಲ್ಲವೂ ನಮ್ಮ ಅಂಗ ಸಂಸ್ಥೆಗಳಿದ್ದಂತೆ ನಮ್ಮ ಸಂಘಟನೆ ಮಾತೃ ಸಂಸ್ಥೆ ಇದ್ದಂತೆ, ಸಮುದಾಯದ ಜನಾಂಗಕ್ಕೆ ಯಾವುದೇ ರೀತಿಯ  ಅನ್ಯಾಯವಾದಲ್ಲಿ ಎಲ್ಲರೂ ಸೇರಿ ಒಟ್ಟಾಗಿ ಹೋರಾಟ ಮಾಡಲಾಗುವುದು ಎಂದರು.
 ಈ ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವ ಖಜಾಂಚಿಯಾದ ಗೌರಯ್ಯ, ಕಂಪಿಲ್ಲರಾಯ ಗಿರಿಜನ ಪ್ರೌಢಶಾಲೆಯ  ಪ್ರಧಾನ ಕಾರ್ಯದರ್ಶಿಯಾದ ಬಿ ರುದ್ರಪ್ಪ, ಸಮಾಜದ ಹಿರಿಯ ಮುಖಂಡರಾದ ಜಿ ರುದ್ರಪ್ಪ,  ಪರಮದೇವನಹಳ್ಳಿ ಗೋಪಾಲ್, ಗುಜ್ಜಲ ಗಾದಿಲಿಂಗಪ್ಪ, ಕಾಯಿಪಲ್ಲೆ ಬಸವರಾಜ್ ಸೇರಿದಂತೆ ಇತರರಿದ್ದರು.
WhatsApp Group Join Now
Telegram Group Join Now
Share This Article