ಹಸಿರು ಕ್ರಾಂತಿ ವರದಿ: ಜಮಖಂಡಿ: ಕಬ್ಬಡ್ಡಿ ಎಂಬುದು ಅದ್ಭುತ ಆಟ ಆತ್ಮೀಯತೆ ಬೆಳೆಸುವ ಆಟ. ಅಬಕಾರಿ ಇಲಾಖೆಯಿಂದ ಕ್ರೀಡಾ ಮೀಸಲಾತಿ ತರುವ ಕೆಲಸ ಮಾಡುತ್ತೇನೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ನಗರದ ಬಿಎಲ್‌ಡಿಇ ದರ್ಬಾರ ಹಾಲ್ ನಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು. ಬಿ.ಎಲ್.ಡಿ.ಇ. ಅಸೋಸಿಯೇಷನ್ಸ್ ನರ್ಸಿಂಗ್ ಕಾಲೇಜು, ಜಮಖಂಡಿ ಇವರ ಸಹಯೋಗದಲ್ಲಿ ಆರ್.ಜಿ.ಯು.ಎಚ್.ಎಸ್. ಕಬಡ್ಡಿ (ಪುರುಷ) ಅಂತರ ವಲಯ & ಕಬಡ್ಡಿ (ಮಹಿಳೆಯರು) ಏಕ ವಲಯ ಪಂದ್ಯಾವಳಿ ಮತ್ತು ಆಯ್ಕೆ ಟ್ರಯಲ್ಸ್ ೨೦೨೫-೨೬ ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕಬ್ಬಡ್ಡಿ ಆಟವು ಎದುರಿಗಿನ ಆಟಗಾರನ ಚಲನವಲನಗಳನ್ನು ಗಮನಿಸಿ ಹೊಂಚುಹಾಕಿ ಧಾಳಿಮಾಡುವ ಆಟ. ಕಬ್ಬಡ್ಡಿಯನ್ನು ಛಲದಿಂದ ಯುಕ್ತಿ ಉಪಯೋಗಿಸಿ ಆಡಬೇಕು. ಆಟಗಾರರು ದೇಶದ ಕೀರ್ತಿ ತರುವ ಕೆಲಸವಾಗಬೇಕು. ಆಟಗಾರರು ಛಲದಿಂದ ಎದುರಾಳಿಯನ್ನು ಸೋಲಿಸಿ ಗೆಲ್ಲುವ ಹುಮ್ಮಸನ್ನು ಬೆಳಸಿಕೊಳ್ಳಿ ಎಂದು ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು.
ಮುಖ್ಯ ಅಥಿತಿ ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ ಜಮಖಂಡಿ ಕ್ರೀಡೆಯಲ್ಲಿ ತನ್ನದೆ ಆದ ಕೊಡುಗೆ ನೀಡಿದೆ ಅಂತರಾಷ್ಟಿಯ ಸೈಕಲ್ ಪಟುಗಳನ್ನು, ಕುಸ್ತಿಪಟುಗಳನ್ನು ಸೇರಿದಂತೆ ಹಲವಾರು ಸಾಧಕರನ್ನು ನೀಡಿದೆ. ಕಳೆದ ೫ ವರ್ಷದಿಂದ ಸಿದ್ದುನ್ಯಾಮಗೌಡ ಅಕ್ಯಾಡೆಮಿಯಿಂದ ೩ ಜನ ಪ್ರೋ ಕಬ್ಬಡಿಗೆ ಆಯ್ಕೆಯಾಗಿದ್ದಾರೆ. ಸೋತವರು ಹುಮ್ಮಸ್ಸು ಕಳೆದುಕೊಳ್ಳದೆ ಗೆದ್ದವರು ಅಹಂಕಾರಿಗಳಾಗದೆ ದೇಶದ ಕೀರ್ತಿ ಹೆಚ್ಚಿಸಿ, ದೇಶವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಾಗಿ ಹೊಮ್ಮಲಿ ಎಂದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷ ಅರುಣಕುಮಾರ ಶಹಾ, ವಿ.ಎಚ್.ಲಗಳಿ, ದೈಹಿಕ ನಿರ್ದೇಶಕ ಐ.ಎಸ್.ನ್ಯಾಮಗೌಡ, ಪ್ರೋಫೆಸರ್ ವೀರಭದ್ರ, ಧಮೇಂದ್ರ ಸೇರಿದಂತೆ ಹಲವರು ಇದ್ದರು.
ಪೋಟೋ ಜೆಕೆಡಿ ೨೦-೧ಎ-ಬಿಜಮಖಂಡಿ: ನಗರದ ಬಿಎಲ್‌ಡಿಇ ದರ್ಬಾರ ಹಾಲ್‌ನಲ್ಲಿ ನಡೆದ ಬಿ.ಎಲ್.ಡಿ.ಇ. ಅಸೋಸಿಯೇಷನ್ಸ್ ನರ್ಸಿಂಗ್ ಕಾಲೇಜು, ಜಮಖಂಡಿ ಇವರ ಸಹಯೋಗದಲ್ಲಿ ಆರ್.ಜಿ.ಯು.ಎಚ್.ಎಸ್. ಕಬಡ್ಡಿ (ಪುರುಷ) ಅಂತರ ವಲಯ & (ಮಹಿಳೆಯರು) ಏಕ ವಲಯ ಪಂದ್ಯಾವಳಿ ಮತ್ತು ಆಯ್ಕೆ ಟ್ರಯಲ್ಸ್ ೨೦೨೫-೨೬ ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಆರ್.ಬಿ.ತಿಮ್ಮಾಪೂರ


