ಜಮಖಂಡಿ; ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಅನ್ಯಾಜಾತಿಯ ಯುವಕ – ಯುವತಿಯ ನಡುವಿನ ಸಂಬಧ ಎರಡು ಕುಟುಂಬದ ನಡುವೆ ನಡೆದ ಗಲಾಟೆ ತಡೆಯಲು ಹೋದ ಪೋಲಿಸರ ಮೇಲೆ ಹಲ್ಲೆ ನಡೆದಿದ ಹಿನ್ನಲೆ ೨೦ ಜನರನ್ನು ಬಂಧಿಸಿರುವ ಘಟನೆ ನಡೆದಿದೆ.
ಕಲ್ಲಹಳ್ಳಿ ಗ್ರಾಮದಲ್ಲಿ ಯುವಕ, ಯುವತಿಯ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ಮಧ್ಯೆ ವಾಗ್ವಾದ ಗಲಾಟೆ ರಾತ್ರಿ ಸಮಯದಲ್ಲಿ ನಡೆದಿದ್ದು. ಗಲಾಟೆ ವಿಕೋಪಕ್ಕೆ ತಿರುಗುವ ಹಂತ ತಲುಪುವ ಸಮಯದಲ್ಲಿ ಅಲ್ಲಿನ ಸ್ಥಳೀಯರ ಪೋಲಿಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ. ಗ್ರಾಮೀಣ ಠಾಣೆ ಪೋಲಿಸರು ಮಾಹಿತಿ ಪಡೆದ ಪಿಎಸ್‌ಐ ಗಂಗಾಧರ ಪೂಜಾರಿ ಹಾಗೂ ಸಿಬ್ಬಂದಿಯೊAದಿಗೆ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಗ್ರಾಮಸ್ಥರನ್ನು ಸಮಾಧಾನ ಪಡಿಸುತ್ತಿದ್ದಾಗ ವ್ಯಕ್ತಿಯೊಬ್ಬ ಹಾಲಿನ ಕ್ಯಾನ್‌ನಿಂದ ಪಿಎಸ್‌ಐ ಮೇಲೆ ಹಲ್ಲೆ ನಡೆಸಿದ್ದು. ಹಲ್ಲೆಯಿಂದ ಪಿಎಸ್‌ಐ ತಲೆಗೆ ಗಾಯವಾಗಿದೆ. ಇನ್ನುಳಿದ ಸಿಬ್ಬಂದಿ ಜನರನ್ನು ಚದುರಿಸಲು ಮುಂದಾದಾಗ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದ್ದು. ಗ್ರಾಮಸ್ಥರ ನಡುವೆ ಹಾಗೂ ಪೋಲಿಸರ ನಡುವ ಮಾತಿನ ಚಕಮಕಿ ಮಧ್ಯ ನೂಕು, ನುಗ್ಗಲು ಮಧ್ಯ ಗಲಾಟೆ ನಡೆದಿದೆ ಎಂದು ಮಾಹಿತಿ ತಿಳಿದು ಬಂದಿರುತ್ತದೆ.
ಕಲ್ಲಹಳ್ಳಿ ಗ್ರಾಮದಲ್ಲಿ ಯುವಕ, ಯುವತಿಯ ಪ್ರೇಮ ಪ್ರಕರಣಕ್ಕೆ ಸಂಬAಧಿಸಿದAತೆ ಸ್ಥಳದಲ್ಲಿ ಬೀಗ ಪೋಲಿಸ್ ಬಂದುಬಸ್ತ್ ನಿಯೋಜಿಸಲಾಗಿದ್ದು. ರಾತ್ರಿ ಘಟನಾ ಸ್ಥಳಕ್ಕೆ ಜಿಲ್ಲಾ ಎಸ್‌ಪಿ, ಸಿದ್ಧಾರ್ಥ ಗೋಯಲ್, ಡಿಎಸ್‌ಪಿ, ಎಸ್, ರೋಷನ್ ಜಮೀರ್, ಸಿಪಿಐ ಮಲ್ಲಪ್ಪ ಮಡ್ಡಿ ಭೇಟಿ ನೀಡಿ. ತನಿಖೆಯನ್ನು ಮುಇಂದುವರಿಸಿದ್ದಾರೆ. ಸ್ಥಳದಲ್ಲಿ ಸಾವಳಗಿ ಪಿಎಸ್‌ಐ, ಅಪ್ಪಣ್ಣ ಐಗಳಿ ಹಾಗೂ ಡಿಆರ್ ಪೋಲಿಸ್ ವ್ಯಾನ್ ಬಂದುಬಸ್ತ್ ವ್ಯವಸ್ಥೆಯನ್ನು ನಿಯೋಜಿಸಿದ್ದಾರೆ. ಗ್ರಾಮದಲ್ಲಿ ಪ್ರಕ್ಷÄಬ್ದ ವಾತಾವರಣ ನಿರ್ಮಾಣಗೊಂಡಿದೆ ಎಂದು ತಿಳಿದು ಬಂದಿರುತ್ತದೆ.