ಬೆಂಗಳೂರು (ಸೆ.20): ಅಪಸ್ವರಗಳ ನಡುವೆಯೂ ಸೆಪ್ಟೆಂಬರ್ 22 ರಿಂದ ಜಾತಿ ಗಣತಿ ಸಮೀಕ್ಷೆ (Caste Census Survey) ನಡೆಸಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಆದಿ ಚುಂಚನಗಿರಿ ಮಠದ ಸ್ವಾಮೀಜಿಗಳ ನೇತೃತ್ವದಲ್ಲಿ ಒಕ್ಕಲಿಗ ನಾಯಕರ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಸ್ವಾಮೀಜಿಗಳು ಕೆಲ ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಒಕ್ಕಲಿಗರ ಸಭೆಯಲ್ಲಿ ಪ್ರಮುಖ ನಿರ್ಣಯ
ಒಕ್ಕಲಿಗರ ನಾಯಕರ ಸಭೆಯಲ್ಲಿ ಕೆಲ ಮಹತ್ವದ ನಿರ್ಣಯಗಳು ತೆಗೆದುಕೊಳ್ಳಲಾಗಿದೆ. ಒಕ್ಕಲಿಗರ ಸಮುದಾಯದವರ ಮನೆಗಳಿಗೆ ಜಾತಿ ಗಣತಿ ಸಮೀಕ್ಷೆಗೆಂದು ಬಂದಾಗ ಏನೆಂದು ಬರೆಸ್ಬೇಕು ಎಂಬ ಚರ್ಚೆ ನಡೆದಿದೆ. ಧರ್ಮದ ಕಾಲಂನಲ್ಲಿ ಹಿಂದೂ ಹಾಗೂ ಜಾತಿ ಕಾಲಂನಲ್ಲಿ ಒಕ್ಕಲಿಗ ಅಂತಷ್ಟೇ ಬರೆಸಬೇಕು ಎಂದು ನಿರ್ಧರಿಸಲಾಗಿದೆ.
‘ಒಕ್ಕಲಿಗ ಅಂತಾನೆ ಬರೆಸಬೇಕು’
ಧರ್ಮ ಹಿಂದೂ, ಜಾತಿ ಒಕ್ಕಲಿಗ ಎಂದು ಬರೆಸಲು ನಿರ್ಣಯ ಕೈಗೊಳ್ಳಲಾಗಿದೆ. ಯಾರು ಗೊಂದಲ ಮಾಡಿಕೊಳ್ಳದಂತೆ ಸಭೆಯಲ್ಲಿ ಶ್ರೀಗಳು ಸಲಹೆ ನೀಡಿದ್ದಾರೆ. ಬಳಿಕ ಉಪಜಾತಿಯನ್ನು ಬೇಕಾದ್ರೆ ನಮೂದಿಸಿ ಕುಂಚಟಿಗ , ಮರಸು, ಸರ್ಪ, ಹಳ್ಳಿಕಾರ್ ಒಕ್ಕಲಿಗ ಅಂತ ಬರೆಸಬಹುದು. ಆದ್ರೆ ಅದ್ರೆ ಜಾತಿ ಕಾಲಂನಲ್ಲಿ ಒಕ್ಕಲಿಗ ಅಂತ ಮಾತ್ರ ಬರೆಸಬೇಕು ಎಂಬ ನಿರ್ಣಯ ತೆಗೆದುಕೊಳ್ಳಲಾಗಿದೆ.