ಚ. ಕಿತ್ತೂರು. ಕಿತ್ತೂರು, ಬೈಲಹೊಂಗಲ, ಬೆಳಗಾವಿ ಗ್ರಾಮೀಣ, ಖಾನಾಪುರ ಕ್ಷೇತ್ರದ ಕಲ್ಪವೃಕ್ಷವಾಗಿದ್ದ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಸುಮಾರು 220 ಕೋಟಿ ರೂಪಾಯಿಗಳ ಸಾಲದಿಂದ ಮುಳಗುವ ಪರಿಸ್ಥಿತಿ ಬಂದು ಎದುರಾಗಿದ್ದು ಒಟ್ಟು 16500 ಶೇರು ಸದಸ್ಯರ ಹಾಗೂ ಕಬ್ಬು ಬೆಳೆಗಾರ ರೈತರ ಸಮಸ್ಯೆ ನಿವಾರಣೆ ನಾನು, ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ, ವಿಠ್ಠಲ ಹಲಗೇಕರ, ಚನ್ನರಾಜ ಹಟ್ಟಿಹೊಳಿ ಅನೇಕ ಹಿರಿಯ ಸಮಾನ ಮನಸ್ಕರ ನೇತೃತ್ವದಲ್ಲಿ ಅಳೆದು ತೊಗಿ 15 ಜನರನ್ನು ಚುನಾವಣೆಗೆ ನಿಲ್ಲಿಸಿದ್ದು ಇದರ ಮುಖ್ಯ ಉದ್ದೇಶ ಕಾರ್ಖಾನೆ ಉಳಿಸುವದು ಮತ್ತು ಕಬ್ಬು ಬೆಲೆಗಾರರನ್ನು ಬೆಳೆಸುವ ಪ್ರಯತ್ನ ನಾವೆಲ್ಲರೂ ಮಾಡುತ್ತಿದ್ದು ಇದ್ದಕ್ಕೆ ಶೇರುದಾರರ ಸಹಕಾರ ಇದ್ದು,ಸರ್ಕಾರದ ಅನುಧಾನ ತಂದು ಪುನಃಸಚೇತನ ಮಾಡಲು ಸಂಕಲ್ಪ ಮಾಡಿದ್ದೇವೆ. ಕಾರ್ಖಾನೆ ಹಗರಣಗಳ ಕುರಿತು ತನಿಖೆ ನಡೆಯುತ್ತಿದ್ದು , ಕಾರ್ಖಾನೆ ಅಭಿವೃದ್ಧಿಗೆ ಎಲ್ಲರ ಸಹಕಾರದೊಂದಿಗೆ ರೈತರ ಕಲ್ಪವೃಕ್ಷ ಕಾರ್ಖಾನೆ ಅಭಿವೃದ್ಧಿಗೆ ಕೆಲಸ ಮಾಡಲಾಗುವದೆಂದರು.
ವಿಧಾನ ಪರಿಷತ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ ನಾಲ್ಕು ವಿಧಾನಸಭಾ ಕ್ಷೇತ್ರಗಳ ಒಡನಾಡಿಯಾಗಿ ಅನೇಕ ರೈತರ ಕಲ್ಪವೃಕ್ಷವಾಗಿದ್ದ ಕಾರ್ಖಾನೆ ಇಂದು ಸಾಲದ ಹೊರೆಯಿಂದ ಹಿನ್ನಡೆ ಅನುಭವಿಸುತ್ತಿದೆ. ಆದರೂ ಕೂಡಾ ರೈತರ ಹಿತದೃಷ್ಟಿಯಿಂದ ಸರ್ಕಾರದ ಅನುಧಾನ ತಂದು ಮೊದಲು ಬಂಗಾರದ ಹೊಳೆ ಯಾಗಿದ್ದ ಸಕ್ಕರೆ ಕಾರ್ಖಾನೆಯನ್ನು ಪುನಃಚೇತನ ಮಾಡುವ ಉದ್ದೇಶದಿಂದ ಹಾಗೂ ಸುಮಾರು 1700 ಸದಸ್ಯರ ಹಾಗೂ 700 ಜನ ಸಿಬ್ಬಂದಿಯ ಕುಟುಂಬ ರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಿ, ನಮ್ಮ ಮೇಲೆ ವಿಶ್ವಾಸವನ್ನು ಶೇರುದಾರರು ಹೊಂದಿದ್ದು ಎಲ್ಲ 15 ಜನ ಆಯ್ಕೆ ಆಗುವ ವಿಶ್ವಾಸ ವ್ಯಕ್ತಪಡಿಸಿದರು. 15 ದಿನಕೊಮ್ಮೆ ಕಬ್ಬಿನ ಬಿಲ್ಲು ಪಾವತಿ, 700 ಜನ ಸಿಬ್ಬಂದಿಗೆ ಸರಿಯಾದ ಸಂಬಳ, ಸದಸ್ಯರಿಗೆ ಅರೋಗ್ಯ ವಿಮೆ, ಕ್ರೇಸಿಂಗ್ ಕ್ಯಾಪ್ಯಾಸಿಟಿ ಹೆಚ್ಚಳ, ನೂತನ ತಂತ್ರಜ್ಞಾನ ಬಳಕೆ, ಡಿಸ್ಟಲರಿ ಉನ್ನತಿಕರಣ, ಇಲ್ಲಿನ ಶಾಲೆಯ ಪುನಃ ಪ್ರಾರಂಭ , ಬಂಡೆಮ್ಮಾ ದೇವಸ್ಥಾನ ಅಭಿವೃದ್ಧಿ ಇನ್ನೂ ಅನೇಕ ಯೋಜನೆಗಳನ್ನು ದೊರಕಿಸುವ ಉದ್ದೇಶ ಹೊಂದಿದ್ದೇವೆ ಎಂದರು. ಈ ಸಂದರ್ಭದಲ್ಲಿ ಕಿತ್ತೂರು, ಖಾನಾಪುರ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ ಕ್ಷೇತ್ರದ ಮುಖಂಡರು, ರೈತ ನಾಯಕರು, ಕಬ್ಬು ಬೆಳಗಾರರು ಉಪಸ್ಥಿತರಿದ್ದರು.