ಬಳ್ಳಾರಿ,ಬೆಂಗಳೂರು,ಸೆ.20.: ಕರ್ನಾಟಕ ರಾಜ್ಯ ಶಿಕ್ಷಣ ನೀತಿ ಆಯೋಗದ ಅಂತಿಮ ವರದಿಯನ್ನು ಸಾರ್ವಜನಿಕ ಚರ್ಚೆಗೆ ಬಿಡುಗಡೆ ಮಾಡುವ ಕುರಿತು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಉಪಾಧ್ಯಕ್ಷ ವಿ.ಎನ್.ರಾಜಶೇಖರ್, ಉನ್ನತ ಶಿಕ್ಷಣ ಸಚಿವ ಡಾ||ಎಮ್. ಸಿ. ಸುಧಾಕರ್ ಅವರನ್ನು ಭೇಟಿ ಮಾಡಿ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಮನವಿ ಪತ್ರವನ್ನು ಸ್ವೀಕರಿಸಿದ ಸಚಿವರು ಪರಿಶೀಲಿಸುವುದಾಗಿ ಭರವಸೆ ಇತ್ತರು.
ರಾಜ್ಯ ಶಿಕ್ಷಣ ನೀತಿ ವರದಿಯನ್ನು ಸ್ವೀಕರಿಸಿದ ತಮ್ಮ ಸರ್ಕಾರವನ್ನು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಕರ್ನಾಟಕ ರಾಜ್ಯ ಸಮಿತಿಯು ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಕ್ಕೆ ಪರ್ಯಾಯವಾಗಿ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸುವುದು ಎಐಎಸ್‌ಇಸಿನ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು. ಜನಪರ ಶಿಕ್ಷಣ ನೀತಿಗಾಗಿ ಧ್ವನಿ ಎತ್ತಲು, ನಾವು ಜುಲೈ ೨೮, ೨೦೨೩ ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಯಶಸ್ವಿ ಶೈಕ್ಷಣಿಕ ಸಮಾವೇಶವನ್ನು ಆಯೋಜಿಸಿದ್ದು ನಿಮಗೆ ನೆನಪಿರಬಹುದು. ಈ ಕಾರ್ಯಕ್ರಮದಲ್ಲಿ ನೂರಾರು ಶಿಕ್ಷಣ ತಜ್ಞರು, ಶಿಕ್ಷಕರು, ಪ್ರಾಧ್ಯಾಪಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದ್ದರು.
ಈ ಸಮಾವೇಶದಲ್ಲಿ ನಿಮ್ಮ ಸರ್ಕಾರದ ಸನ್ಮಾನ್ಯ ಸಚಿವರಗಳಾದ ಡಾ. ಎಚ್. ಸಿ. ಮಹಾದೇವಪ್ಪ, ಡಾ. ಎಂ. ಸಿ. ಸುಧಾಕರ್ ಮತ್ತು ಶ್ರೀ ಮಧು ಬಂಗಾರಪ್ಪ ಅವರ ಉಪಸ್ಥಿತರಿದ್ದು, ಚರ್ಚೆಗಳಲ್ಲಿ ಭಾಗಿಯಾಗಿದ್ದು ಕಾರ್ಯಕ್ರಮವನ್ನು ಹೆಚ್ಚು ಅರ್ಥಪೂರ್ಣಗೊಳಿಸಿತು. ಅವರುಗಳು ಸಭೆಯಲ್ಲಿ ಬಂದAತಹ ಎಲ್ಲಾ ಅಮೂಲ್ಯ ಸಲಹೆಗಳನ್ನು ಕೂಲಂಕಷವಾಗಿ ಗಮನಿಸಿದರು. ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೈಬಿಟ್ಟು, ಎಲ್ಲಾ ಪಾಲುದಾರರನ್ನೂ ಒಳಗೊಂಡAತೆ ಹೊಸ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸುವ ತಮ್ಮ ಚುನಾವಣಾ ಭರವಸೆಯನ್ನು ಈಡೇರಿಸುವುದಾಗಿ ಅವರು ಭರವಸೆ ನೀಡಿದರು.
ಮಾನ್ಯರೇ, ಪ್ರೊ ಸುಖ್‌ದೇವ್ ಥೋರಾಟ್ (ಮಾಜಿ ಯುಜಿಸಿ ಅಧ್ಯಕ್ಷರು) ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯು ಈಗ ಕರ್ನಾಟಕ ರಾಜ್ಯ ಶಿಕ್ಷಣ ನೀತಿ ವರದಿಯನ್ನು ಪೂರ್ಣಗೊಳಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ವರದಿಯು ಹಲವು ಭರವಸೆಯ ಶಿಫಾರಸುಗಳನ್ನು ಒಳಗೊಂಡಿದೆ ಎಂಬುದು ಹೊರನೋಟಕ್ಕೆ ನಮಗೆ ಅನಿಸುತ್ತದೆೆ. ಆಯೋಗದ ವರದಿಯನ್ನು ಯಾವುದೇ ವಿಳಂಬ ಮಾಡದೆ ಸಾರ್ವಜನಿಕ ಚರ್ಚೆಗೆ ಬಿಡುಗಡೆ ಮಾಡುವುದು ಬಹಳ ಮುಖ್ಯ ಎಂದು ನಾವು ನಂಬಿದ್ದೇವೆ.
ಅಲ್ಲದೆ, ರಾಜ್ಯ ಶಿಕ್ಷಣ ನೀತಿಯ ಕುರಿತು ಒಂದು ರಾಜ್ಯಾದ್ಯಂತದ ಪ್ರಜಾತಂತ್ರಿಕ, ಚರ್ಚೆಯನ್ನು ಪ್ರಾರಂಭಿಸುವAತೆ ನಾವು ನಿಮ್ಮನ್ನು ಒತ್ತಾಯಿಸುತ್ತೇವೆ. ಈ ಪ್ರಕ್ರಿಯೆಯಲ್ಲಿ ಶಿಕ್ಷಣ ತಜ್ಞರು, ಶಿಕ್ಷಕರು, ಪ್ರಾಧ್ಯಾಪಕರು, ಶೈಕ್ಷಣಿಕ ವೇದಿಕೆಗಳು / ಸಂಘಟನೆಗಳು, ಪೋಷಕರು, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಸಂಘಟನೆ ಗಳನ್ನು ಎಲ್ಲಾ ಹಂತಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ಅವರ ಅಮೂಲ್ಯ ಸಲಹೆಗಳನ್ನು ಪಡೆದು ನೀತಿಯನ್ನು ಮತ್ತಷ್ಟು ಸಂಪತ್‌ಭರಿತಗೊಳಿಸಬೇಕು. ಈ ರಾಜ್ಯ ಶಿಕ್ಷಣ ನೀತಿಯು ವಿದ್ಯಾರ್ಥಿಪರ ಮತ್ತು ಬಡವರಪರ ನೀತಿಯಾಗಲಿ ಮತ್ತು ಇಡೀ ದೇಶಕ್ಕೆ ಮಾದರಿ ಶಿಕ್ಷಣ ನೀತಿಯಾಗಲಿ, ಎಂಬುದು ನಮ್ಮೆಲ್ಲರ ಆಶಯ ಈ ಪ್ರಯತ್ನಕ್ಕೆ ನಮ್ಮ ಕೊಡುಗೆಯಾಗಿ, ಎಐಎಸ್‌ಇಸಿ ಒಂದು “ಕರಡು ಜನಪರ ಶಿಕ್ಷಣ ನೀತಿಯನ್ನು” ಸಿದ್ಧಪಡಿಸಿದೆ. ಶಿಕ್ಷಣ ಕ್ಷೇತ್ರದಲ್ಲಿನ ಪ್ರಮುಖರು, ಶಿಕ್ಷಕರು, ಪ್ರಾಧ್ಯಾಪಕರು, ವಿದ್ವಾಂಸರು ಮತ್ತು ಪೋಷಕರು ಮತ್ತು ವಿದ್ಯಾರ್ಥಿಗಳು ಕಳೆದ ಐದು ವರ್ಷಗಳಿಂದ ದಣಿವರಿಯದ ಪರಿಶ್ರಮದಿಂದ ಈ ಕರಡು ತಯಾರಾಗಿದೆ. ಈ ಮನವಿ ಪತ್ರದ ಜೊತೆಗೆ ಈ ಕರಡು ಪುಸ್ತಕದ ಪ್ರತಿಯೊಂದನ್ನು ನಿಮ್ಮ ಪರಿಶೀಲನೆಗಾಗಿ ಸಲ್ಲಿಸುತ್ತಿದ್ದೇವೆ ಎಂದು ಎಐಎಸ್‌ಇಸಿ ಪರವಾಗಿ ಜಿಲ್ಲಾ ಕಾರ್ಯದರ್ಶಿ ನಾಗರತ್ನ ಎಸ್ ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.