ಮಂಗಳೂರು (ಸೆ.20): ದೂರುದಾರ ಚಿನ್ನಯ್ಯ, ಸೌಜನ್ಯನ ಹೋರಾಟಗಾರರನ್ನು ಭೇಟಿ ಮಾಡಿದ ವೇಳೆ ಮಾತಾಡಿದ್ದಾರೆ ಎನ್ನಲಾಗ್ತಿರೋ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. 2 ನಿಮಿಷಗಳ 2ನೇ ವಿಡಿಯೋ ಇದೀಗ ರಿಲೀಸ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ತಿಮರೋಡಿ ಮನೆಯಲ್ಲೇ ಮಾಡಲಾಗಿದೆ ಎನ್ನಲಾಗ್ತಿರೋ ಈ 2 ನಿಮಿಷದ 58 ಸೆಕೆಂಡ್ಗಳ ಈ ವಿಡಿಯೋದಲ್ಲಿ ದೂರುದಾರ ಚಿನ್ನಯ್ಯ, ಧರ್ಮಸ್ಥಳ ತಾನೇ 70ಕ್ಕೂ ಹೆಚ್ಚು ಶವಗಳನ್ನ ಹೂತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಕೊಲೆಗೈದಿರುವ ಅನುಮಾನವನ್ನ ವ್ಯಕ್ತಪಡಿಸಿದ್ದಾನೆ.
ವಿಡಿಯೋದಲ್ಲಿ ಸ್ಪಾಟ್ ನಂಬರ್ 17ರ ಬಗ್ಗೆಯೂ ಚಿನ್ನಯ್ಯ ಮಾತಾಡಿದ್ದಾನೆ. ಗೋಮಟ್ಟ ಬೆಟ್ಟದಿಂದ ಬರುವ ಫಸ್ಟ್ ಟರ್ನ್ ನಲ್ಲಿ ಏನಿಲ್ಲ ಅಂದ್ರೂ 70ಕ್ಕೂ ಹೆಚ್ಚು ಹೆಣ ಹೂತು ಹಾಕಿದ್ದೇನೆ ಎಂದಿದ್ದಾನೆ. ಆ ಟರ್ನ್ ನಲ್ಲಿ ಬಿಳಿ ಸೀರೆಯ ಕೇರಳ ಮೂಲದ ಹೆಂಗಸಿನ ಹೆಣ ಹೂತು ಹಾಕಿದ್ದೇನೆ ಎಂದು ಆತ ಹೇಳಿದ್ದಾನೆ.
ಅದು ಸ್ಮಶಾನ ಅಲ್ಲ, ತರಕಾರಿ ತೆಗೆದುಕೊಂಡು ಹೋಗುವ ಗಾಡಿಯಲ್ಲಿ ಹೆಣ ತಂದು ಹೂತು ಹಾಕಿದ್ದೇನೆ. ನೇತ್ರಾವತಿ ತೀರದಲ್ಲಿ ಹೆಣ ಹೂತುಹಾಕಿದ್ದಕ್ಕೆ ಲೆಕ್ಕವೇ ಇಲ್ಲ ಎಂದು ಚಿನ್ನಯ್ಯ ಘಟನೆಗಳ ಬಗ್ಗೆ ಪರಿಪರಿಯಾಗಿ ವಿವರಣೆ ನೀಡಿದ್ದ.
ಪ್ರಾಥಮಿಕ ಶಾಲೆಯ ಹಿಂಭಾಗದ ಭಟ್ರ ಮನೆಯ ಬಾವಿಯಲ್ಲಿ ಒಂದು ಹೆಣ ಸಿಕ್ಕಿತ್ತು. ಅಲ್ಲಿ ಕೇಳಿದ್ರೆ ಹುಡುಗಿ ಫೇಲ್ ಆಗಿದ್ದಕ್ಕೆ ಬಾವಿಗೆ ಹಾರಿದ್ದಾಳೆ ಅಂತ ಹೇಳಿದ್ರು. ಆದ್ರೆ ಮನೆಯವರು ಅಳುತ್ತಿರಲಿಲ್ಲ. ಬಳಿಕ ನಾನು ಹೆಣವನ್ನ ಮೇಲೆ ಹಾಕಿ ವಾಪಸ್ ಬಂದಿದ್ದೆ ಎಂದು ಚಿನ್ನಯ್ಯ ವಿಡಿಯೋದಲ್ಲಿ ಹೇಳಿದ್ದಾನೆ ಎನ್ನಲಾಗ್ತಿದೆ.