ಜಾತಿ ಗಣತಿಯಲ್ಲಿ ಉಪ್ಪಾರ ಎಂದೇ ನಮೂದಿಸಿ; ಸಿದ್ದವ್ವ ಖಿಲಾರೆ

Ravi Talawar
ಜಾತಿ ಗಣತಿಯಲ್ಲಿ ಉಪ್ಪಾರ ಎಂದೇ ನಮೂದಿಸಿ; ಸಿದ್ದವ್ವ ಖಿಲಾರೆ
WhatsApp Group Join Now
Telegram Group Join Now
ರಾಯಬಾಗ: ರಾಜ್ಯದಲ್ಲಿ ಸೆ. 22 ರಿಂದ ಅ. 7 ರವರೆಗೆ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಗಣತಿ ಸಮೀಕ್ಷೆಯಲ್ಲಿ ಉಪ್ಪಾರ ಸಮುದಾಯದ ಜನರು ತಮ್ಮ ಜಾತಿಯನ್ನು ಉಪ್ಪಾರ ಎಂದೇ ನಮೂದಿಸಬೇಕು ಎಂದು ಕರ್ನಾಟಕ ರಾಜ್ಯ ಉಪ್ಪಾರ ಮಹಾ ಸಭಾದ ಉಪಾಧ್ಯಕ್ಷೆ  ಸಿದ್ದವ್ವ ಮಾಹಾದೇವ ಖಿಲಾರೆ ಮನವಿ ಮಾಡಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ರಾಜ್ಯದಲ್ಲಿ ಉಪ್ಪಾರ ಸಮುದಾಯದವರು ವಿಭಿನ್ನವಾದ ಕಸುಬುಗಳಲ್ಲಿ ತೂಡಗಿಕೂಂಡಿರುವುದರಿಂದ ಕೆಲವೂಮ್ಮೆ ಅವರು ಬೇರೆ ಬೇರೆ ಹೆಸರುಗಳಲ್ಲಿ ಗುರುತಿಸಲ್ಪಡುತ್ತಾರೆ. ಇದರಿಂದಾಗಿ ಗಣತಿ ಸಂದರ್ಭದಲ್ಲಿ ವಿಭಿನ್ನ ಜಾತಿಗಳನ್ನು ನಮೂದಿಸುವ ಸಾಧ್ಯತೆ ಇದೆ. ಈ ಪ್ರತ್ಯೇಕ ನಮೂದುಗಳು ಸಮುದಾಯದ ಜನಸಂಖ್ಯೆಯನ್ನು ಒಟ್ಟಾಗಿ ತೋರಿಸಲು ಅಡ್ಡಿಯಾಗುತ್ತವೆ.  ಪರಿಣಾಮವಾಗಿ ಸರ್ಕಾರದ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳಿಂದ ಸಮುದಾಯದ ಜನರು ವಂಚಿತರಾಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು.
    ಸಮೀಕ್ಷೆದಾರರು ಮನೆ ಮನೆಗೆ ಬಂದಾಗ ಜಾತಿಯ ಕಾಲಂ ನಲ್ಲಿ ಯಾವುದೇ ಗೂಂದಲವಿಲ್ಲದೆ ಉಪ್ಪಾರ ಎಂದೇ ನಮೂದಿಸಬೇಕು. ಇದು ಸಮುದಾಯದ ಜನಸಂಖ್ಯೆಯನ್ನು ನಿಖರವಾಗಿ ನಿರೂಪಿಸಲು ಸಹಾಯ ಮಾಡುತ್ತದೆ. ಇದರಿಂದ ಸರ್ಕಾರಕ್ಕೆ ಉಪ್ಪಾರ ಸಮುದಾಯದವರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳನ್ನು ನಿಖರವಾಗಿ ಅಂದಾಜಿಸಲು ಸಹಾಯ ಮಾಡುತ್ತದೆ.ಒಟ್ಟಾರೆ ಜನಸಂಖ್ಯೆಯ ಅನುಗುಣವಾಗಿ ಮೀಸಲಾತಿ ಸೌಲಭ್ಯ, ವಸತಿ ಸೌಲಭ್ಯ, ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಈ ಜಾತಿ ಗಣತಿ ಸಮೀಕ್ಷೆ ಸೌಲಭ್ಯಗಳ ಸದ್ಬಳಕೆಗಾಗಿ ಈ ಸಮೀಕ್ಷೆ ಮಹತ್ವದ್ದಾಗಿದೆ ಎಂದರು.
WhatsApp Group Join Now
Telegram Group Join Now
Share This Article