ರಾಯಬಾಗ: ಗ್ರಾಮೀಣ ಮಟ್ಟದಲ್ಲಿ ಸಹಕಾರಿ ಸಂಘ ಅಭಿವೃದ್ದಿ ಹೊಂದಬೇಕಾದರೆ ಸಂಘದ ಸರ್ವ ಸದಸ್ಯರ ಹಾಗೂ ಆಡಳಿತ ಮಂಡಳಿಯ ಸಹಕಾರ ಅತಿ ಮುಖ್ಯವಾದ ಪಾತ್ರ ವಹಿಸುತ್ತದೆ ಎಂದು ಕಾಡಾ ಮಾಜಿ ಅಧ್ಯಕ್ಷ ಈರಗೌಡ ಪಾಟೀಲ ಹೇಳಿದರು.
ಗುರುವಾರ ತಾಲೂಕಿನ ಬಾವನಸೌಂದತ್ತಿ ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಸಭಾ ಭವನದಲ್ಲಿ ಜರುಗಿದ 2024-25 ನೇ ಸಾಲಿನ ಸಂಘದ ಸರ್ವಸಾಧಾರಣ ಸಭೆಯನ್ನುದೇಶಿಸಿ ಮಾತನಾಡಿದ ಅವರು, ಸಂಘಕ್ಕೆ ಉತ್ತಮ ಕಾರ್ಯ ನಿರ್ವಹಣೆಗಾಗಿ ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರಿ ಅಪೇಕ್ಸ್ ಬ್ಯಾಂಕವು 10 ಸಾವಿರ ರೂ. ಹಾಗೂ ಪ್ರಮಾಣ ಪತ್ರ ನೀಡಿರುತ್ತಾರೆ ಎಂದರು.
ಸಭೆಯಲ್ಲಿ ಸಂಘದ ಅಧ್ಯಕ್ಷ ಜಿನೇಶ್ವರ ಮಗದುಮ್ ಮಾತನಾಡಿ, ಸಂಘವು 1819 ಸದಸ್ಯರನ್ನು ಹೊಂದಿದ್ದು, 1 ಕೋಟಿಕ್ಕಿಂತ ಹೆಚ್ಚು ಷೇರು ಬಂಡವಾಳ, 1.58 ಕೋಟಿ ನಿಧಿ, 1.78 ಕೋಟಿ ಠೇವಣಿ, 2.84ಕೋಟಿ ಹೂಡಿಕೆ, 5.96 ಕೋಟಿ ಡಿ ಕೆ.ಸಿ.ಸಿ ಸಾಲ, 1.21ಕೋಟಿ ಜಾಮೀನು ಸಾಲ ಹಂಚಲಾಗಿದೆ. ಶೇ.99 ಸಾಲ ವಸೂಲಿ ಮಾಡಲಾಗಿದೆ. ಸನ್ 2024-25ನೆ ಸಾಲಿನ ಆಡಿಟ್ ವರ್ಗೀಕರಣ ‘ಅ’ ವರ್ಗವಾಗಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಜಿನೇಶ್ವರ ಮಗದುಮ್, ಉಪಾಧ್ಯಕ್ಷ ಸಯಾಜಿ ದೇಸಾಯಿ ಅವರನ್ನು ಉತ್ತಮ ಆಡಳಿತಕ್ಕಾಗಿ ಯುವಧುರೀಣ ಧೂಳಗೌಡ ಪಾಟೀಲ ಸತ್ಕರಿಸಿದರು.
ಆಡಳಿತ ಮಂಡಳಿ ಸದಸ್ಯರಾದ ಅಜೀತ ಕಾಮಗೌಡ, ಕುಮಾರ ಕಾಮಗೌಡ, ಮಹಾದೇವ ಮಂಗಸೂಳಿ, ಚಂದ್ರಕಾಂತ ಮುರಾಣಿ, ಕಲ್ಲಪ್ಪ ಖೋತ, ತ್ರಿಶಲಾ ಜನಾಜ, ಸುಗಂಧಾ ಚೌಗಲಾ, ಶ್ರೀಪತಿ ಕಾಂಬಳೆ, ಅಜಿತ ನಾಯಿಕ, ಶಿರಾಜ ತರಾಳ, ಕಾರ್ಯದರ್ಶಿ ಅಮೀತ ಜನಾಜ, ಸಿಬ್ಬಂದಿಗಳಾದ ಕಲ್ಲಪ್ಪ ಡೋಂಗರೆ, ರಾಹುಲ ಅಗಸರ, ಕುಮಾರ ರುಕಡೆ ಹಾಗೂ ಸಂಘದ ಸದಸ್ಯರು ಇದ್ದರು.