ನಂದಿನಿ ಮೊಸರು, ತುಪ್ಪ, ಬೆಣ್ಣೆ ಮತ್ತು ಲಸ್ಸಿ ಸೇರಿದಂತೆ ಹಲವು ಉತ್ಪನ್ನಗಳ ದರ ಇಳಿಕೆ

Ravi Talawar
ನಂದಿನಿ ಮೊಸರು, ತುಪ್ಪ, ಬೆಣ್ಣೆ ಮತ್ತು ಲಸ್ಸಿ ಸೇರಿದಂತೆ ಹಲವು ಉತ್ಪನ್ನಗಳ ದರ ಇಳಿಕೆ
WhatsApp Group Join Now
Telegram Group Join Now

ಬೆಂಗಳೂರು, ಸೆಪ್ಟೆಂಬರ್​ 20: ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ ಜಿಎಸ್​​ಟಿಯನ್ನುಇಳಿಕೆ ಬೆನ್ನಲ್ಲೇ ಇದೀಗ ನಂದಿನಿ ಮೊಸರು, ತುಪ್ಪ, ಬೆಣ್ಣೆ ಮತ್ತು ಲಸ್ಸಿ ಸೇರಿದಂತೆ ಹಲವು ಉತ್ಪನ್ನಗಳ ದರ ಇಳಿಕೆ ಆಗಿದ್ದು, ಸೋಮವಾರದಿಂದ ಹೊಸ ದರ ಜಾರಿಗೆ ಬರುವ ಸಾಧ್ಯತೆ ಇದೆ. ಆ ಮೂಲಕ ರಾಜ್ಯದ ಜನರಿಗೆ ಕೆಎಂಎಫ್​​  ಗುಡ್​​ ನ್ಯೂಸ್ ಕೊಟ್ಟಿದೆ. ಆದರೆ ಅಧಿಕೃತ ಆದೇಶ ಬಾಕಿಯಿದೆ.

ಜಿಎಸ್​​ಟಿ ಇಳಿಕೆ ಬೆನ್ನಲ್ಲೇ ದರ ಇಳಿಕೆಗೆ ಸಜ್ಜಾಗಿರುವ ಕೆಎಂಎಫ್​​ ಈ ಬಗ್ಗೆ ಶುಕ್ರವಾರ ಕೆಎಂಎಫ್​​ ಅಧಿಕಾರಿಗಳು ಸಭೆ ಮಾಡಿದ್ದಾರೆ. ಸಭೆಯಲ್ಲಿ ಯಾವುದರ ದರ ಎಷ್ಟು ಇಳಿಕೆ ಎಂಬುವುದನ್ನು ನಿರ್ಧಾರ ಮಾಡಲಾಗಿದೆ. ಮೊಸರಿನ ದರ ಲೀಟರ್​ಗೆ 4 ರೂ. ಇಳಿಕೆ ನಿರೀಕ್ಷೆ ಇದೆ. ಜೊತೆಗೆ ತುಪ್ಪ, ಬೆಣ್ಣೆ, ಲಸ್ಸಿ ಸೇರಿ ಹಲವು ಉತ್ಪನ್ನಗಳ ದರ ಕೂಡ ಇಳಿಕೆ ಆಗಿದೆ.

2017ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್​​ಟಿ ವಿಧಿಸಲಾಗಿತ್ತು. 2022 ರಲ್ಲಿ ಜಿಎಸ್​ಟಿಯನ್ನ ಶೇಕಡಾ 22ಕ್ಕೆ ಹೆಚ್ಚಿಸಲಾಗಿತ್ತು. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಹಾಲಿನ ಉತ್ಪನ್ನಗಳ ಮೇಲಿನ ಸರಕು ಸೇವಾ ತೆರಿಗೆಯನ್ನು ಶೇ.12ರಿಂದ 5ಕ್ಕೆ ಇಳಿಕೆ ಮಾಡಿದ್ದು, ಇದು ಸೆ. 22ರಿಂದ ಜಾರಿಗೆ ಬರಲಿದೆ. ಆ ಮೂಲಕ ಗ್ರಾಹಕರು ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.

WhatsApp Group Join Now
Telegram Group Join Now
Share This Article