ಜಮಖಂಡಿ :ನಗರದ ಅಂಚೆ ಕಚೇರಿಯಲ್ಲಿದ್ದ ರೇಲ್ವೆ ಟಿಕೆಟ್ ಬುಕ್ಕಿಂಗ್ ಕೌಂಟರನ್ನು ಪುನಹ ಪ್ರಾರಂಭಿಸುವಂತೆ ನಗರದ ಸರಫ್ ಬಜಾರ ವ್ಯಾಪಾರಸ್ತರ ಸಂಘ ಆಗ್ರಹಿಸಿದೆ. ಕೆಳದ ಕೆಲವು ತಿಂಗಳಿಂದ ಟಿಕೇಟ್ ಕೌಂಟರ್ ಬಂದ್ ಆಗಿದೆ. ಇದರಿಂದ ರೈಲು ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮಜರುಗಿಸಬೇಕೆಂದು ಮನವಿ ಸಲ್ಲಿಸಿದರು. ರೈಲು ಪ್ರಯಾಣಿಕರಿಗೆ ಮೊದಲಿನಂತೆ ಅನುಕೂಲ ಕಲ್ಪಿಸುವಂತೆ ಪೋಸ್ಟ ಮಾಸ್ಟರ್ ಎಸ್.ಎಸ್.ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಉಮೇಶ್ ಕೊಠಾರಿ, ರಮೇಶ್ ಮೆಹ್ತಾ, ಮುಖೇಶ್ ಜೈನ್, ಸಂದೀಪ್ ವರ್ಮಾ, ಬಾಲ್ ಕಿಸಾನ್ ವರ್ಮಾ, ದಾಮೋದರ್ ವರ್ಮಾ, ಸುರೇಶ್ ವರ್ಮಾ, ವಿಮಲ್ ಓಸ್ವಾಲ್, ಕಿರಣ್ ಓಸ್ವಾಲ್, ರಾಜೇಶ್ ಓಸ್ವಾಲ್, ನರೇಂದ್ರ ಭಂಡಾರಿ, ಮಂದರ್ ಓಸ್ವಾಲ್, ಪಿಂಟು ಓಸ್ವಾಲ್, ದರ್ಶನ್ ಓಸ್ವಾಲ್, ರಾಜೇಶ್ ಜೈನ್, ರಾಮದೇವ್ ವರ್ಮಾ, ಗೌರವ್ ವರ್ಮಾ ಮುಂತಾದವರು ಇದ್ದರು.