ಗದಗ: ನಗರದ ಮುಳಗುಂದನಾಕಾ ಬಳಿಯ ಶ್ರೀಅಡವೀಂದ್ರಸ್ವಾಮಿ ಮಠದಲ್ಲಿ ಸೆ. 22 ರಂದು ಜರುಗುವ 45 ನೇ ವರ್ಷದ ದಸರಾ ಮಹೋತ್ಸವ ಹಾಗೂ ಘಟಸ್ಥಾಪನೆ ಮತ್ತು ಶ್ರೀದೇವಿ ಪುರಾಣ ಪ್ರಾರಂಭೋತ್ಸವದ ಉದ್ಘಾಟಕರಾದ ಶುಭ್ ಜುವೆಲ್ಲರ್ಸ್ ಮಾಲೀಕರಾದ ಪೂಜಾ ಕಿರಣ ಭೂಮಾ ಹಾಗೂ ದತ್ತಾ ಪ್ರಾಪರ್ಟಿಸ್ ವ್ಯವಸ್ಥಾಪಕರಾದ ಕಿರಣ ಪ್ರಕಾಶ ಭೂಮಾ ಅವರನ್ನು ಶ್ರೀಅನ್ನಪೂರ್ಣೇಶ್ವರಿ ದೇವಿ ಜಾತ್ರಾ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಗೀತಾ ಹೂಗಾರ, ಸದಸ್ಯರಾದ ಜಯಶ್ರೀ ವಸ್ತ್ರದ, ಶಿವಪ್ರಭು ನೀಲಗುಂದ, ಅಶ್ವಿನಿ ನೀಲಗುಂದ ಅವರು ಸನ್ಮಾನಿಸಿ, ಆಮಂತ್ರಣ ನೀಡಿದರು.