ಬಳ್ಳಾರಿ,ಸೆ.18: ಮಾಜಿ ಸಚಿವರು, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾದ ಬಿ.ನಾಗೇಂದ್ರವರ ಕಛೇರಿಯಲ್ಲಿ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಹಾಗೂ ಹಾಲಿ ಶಾಸಕ ಬಿ.ನಾಗೇಂದ್ರವರ ಆಪ್ತರು, ಕಾಂಗ್ರೇಸ್ ಪಕ್ಷದ ಮುಖಂಡರುಗಳು ಹಾಗೂ ವಿಶ್ವ ಕರ್ಮ ಸಮುದಾಯದ ಮುಖಂಡರು ಸೇರಿ ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸೂಚಿಸಿದರು.
ಶಾಸಕರ ಕಚೇರಿಯಲ್ಲಿ ವಿಶ್ವಕರ್ಮ ಜಯಂತ್ಯೋತ್ಸವದ ನಿಮಿತ್ತ ವಿಶ್ವಕರ್ಮ ಮಹಿಳಾ ಅಧ್ಯಕ್ಷರಾದ ತ್ರಿವೇಣಿ ಪತ್ತಾರ್ ಅವರಿಗೆ, ವಿಶ್ವಕರ್ಮ ಅಭಿವೃದ್ಧಿ ನಿಗಮದ ನಾಮ ನಿರ್ದೇಶಕ ಶ್ರೀಧರ ಗಡ್ಡೆ ಚಂದ್ರಶೇಖರ ಆಚಾರ್, ವಿಶ್ವಕರ್ಮ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕಪ್ಪಾಗಲ್ ಚಂದ್ರಶೇಖರ ಆಚಾರ್, ವೀರಶ್ ಶಿಲ್ಪಿ ಇವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು .
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಗ್ಯಾರಂಟಿಗಳ ಅಧ್ಯಕ್ಷರಾದ ಕೆಇ.ಚಿದಾನಂದಪ್ಪ, ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ಪಿ.ಜಗನ್, ಪಕ್ಷದ ಮುಖಂಡರುಗಳಾದ ಕೊಳಗಲ್ ಎರ್ರಿಸ್ವಾಮಿ, ಎರಗುಡಿ ಮಲ್ಲಯ್ಯ, ನಾಗಲಕೆರೆ ಗೋವಿಂದ, ಶ್ರೀನಾಥ್, ಸಂಗನಕಲ್ಲು ವಿಜಯ ಕುಮಾರ್, ಎಪಿಎಂಸಿ ಸದಸ್ಯ ಕುದನ್ ಸಾಬ್, ಇಂಟೆಕ್ ಜಿಲ್ಲಾಧ್ಯಕ್ಷ ರೂಪನಗುಡಿ ರಾಮಂಜಿನಿ, ಧನಂಜಯ ಹಮಾಲ್, ಚಾಗನೂರು ರಾಮಕೃಷ್ಣ, ನರೇಂದ್ರ, ಅಥವುಲ್ಲ, ಬಿ.ಎ.ಮಲ್ಲೇಶ್ವರಿ ಸೇರಿದಂತೆ ಶಾಸಕರ ಅಭಿಮಾನಿ ಬಳಗದವರು ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.