ಜಂಗಮ ಜಾಗೃತಿ ಸಮಾವೇಶ ; ಭಾರತೀಯ ವೀರಶೈವ ಲಿಂಗಾಯತ ಜಂಗಮ ಪರಿಷತ್ ಉದ್ಘಾಟನೆ

Ravi Talawar
ಜಂಗಮ ಜಾಗೃತಿ ಸಮಾವೇಶ ; ಭಾರತೀಯ ವೀರಶೈವ ಲಿಂಗಾಯತ ಜಂಗಮ ಪರಿಷತ್ ಉದ್ಘಾಟನೆ
WhatsApp Group Join Now
Telegram Group Join Now
 ಬಳ್ಳಾರಿ ಸೆ 18. ರಾಘವ ಕಲಾ ಮಂದಿರದಲ್ಲಿ ನಡೆದ ಬಳ್ಳಾರಿ ಜಿಲ್ಲೆಯ ಜಂಗಮರ ಜಾಗೃತಿ ಸಮಾವೇಶದಲ್ಲಿಭಾರತೀಯ ವೀರಶೈವ ಲಿಂಗಯತ ಜಂಗಮ ಪರಿಷತ್ ಸಂಘಟನೆಯನ್ನು
ಕರ್ನಾಟಕ ಸರ್ಕಾರದ ಮಾಜಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆಲೀಲಾ ದೇವಿ ಆರ್ ಪ್ರಸಾದ್ಉದ್ಘಾಟಿಸಿದರು.ಹರಗಿನದೋಣಿ ಮಠದ ಷಟಸ್ಥಳ ಬ್ರಾಹ್ಮಿ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯವನ್ನು ವಹಿಸಿದ್ದರು.
ಸಭೆಯ ಅಧ್ಯಕ್ಷತೆ  ವಹಿಸಿದ್ದ ಪರಿಷತ್ ಅಧ್ಯಕ್ಷ ಕೆ ಎಂ ಮಹೇಶ್ವರ ಸ್ವಾಮಿ  ಪ್ರಸ್ತಾವಿಕವಾಗಿ ಮಾತನಾಡಿ,ದೇಶದ ಜಂಗಮ ಸಮುದಾಯದ ಸಮಗ್ರ ಅಭಿವೃದ್ಧಿಯ ಜೊತೆಗೆ ವೀರಶೈವ ಲಿಂಗಾಯತ ಸಮುದಾಯದ ಐಕ್ಯತೆಗಾಗಿ ಶ್ರಮಿಸುವ ಧ್ಯಯ ಸಂಘ ಹೊಂದಿದೆ ಎಂದು ತಿಳಿಸಿ ಕರ್ನಾಟಕ ಸರ್ಕಾರದ ಗಣತಿ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಿ ವೀರಶೈವ ಲಿಂಗಾಯತ ಜಂಗಮ ಎಂದು ಬರೆಯಿಸಲು ಕರೆ ನೀಡಿದರು
ಸಂಘ ಹಾಗೂ ಸಮಾವೇಷವನ್ನು ಉದ್ಘಾಟಿಸಿದ ಲೀಲಾ ದೇವಿ ಆರ್ ಪ್ರಸಾದ್ ಮಾತನಾಡಿ ಜಂಗಮರು  ಭಕ್ತರು ಇಲ್ಲದಿದ್ದರೆ ಅವರ ಇರುವಿಕೆ ಇರದು ಹಾಗೆನೇ ಜಂಗಮರು ಭಕ್ತರಿಗೆ ಅನಿವಾರ್ಯ  ಎಂದು ತಿಳಿಸಿ ಜಂಗಮ ವೀರಶೈವ ಲಿಂಗಾಯತ ಎಲ್ಲರೂ ಒಂದಾಗಿ  ಸಾಗಬೇಕೆಂದು ಪ್ರತಿಪಾದಿಸಿದರು. ಮುಂಬರುವ ಗಣತಿ ಕಾರ್ಯದಲ್ಲಿ ಎಲ್ಲರೂ ವೀರಶೈವ ಲಿಂಗಾಯತ ಎಂದು ಬರೆಸಿ ಅವರವರ ಉಪಜಾತಿ ಬರೆಸಬಹುದೆಂದು ಸಭೆಗೆ ತಿಳಿಸಿದರು
ಜಂಗಮರು ಭಾರತದಲ್ಲಿ ಮಾತ್ರ ಅಲ್ಲವಿದೇಶದಲ್ಲಿ ಕೂಡ ಇದ್ದಾರೆ ಈ ಸಂಘಟನೆ ಜಾಗತಿಕ ಸಂಘಟನೆ ಆಗಬೇಕೆಂದು ಆಶಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಅತಿಥಿಯಾಗಿದ್ದ ಮಾಜಿ ಶಾಸಕ ಟಿಎಂ ಚಂದ್ರಶೇಖರಯ್ಯಮಾತನಾಡಿ ಗಣತಿ ವಿಷಯದಲ್ಲಿ ಲಿಂಗಾಯತರು ಬೇರೆ ವೀರಶೈವ ಲಿಂಗಾಯತರು ಬೇರೆ ಎನ್ನುವ ಭಾವನೆ ಸರಿಯಲ್ಲ ಲಿಂಗಾಯತರಾಗಲಿ ವೀರಶೈವರಾಗಲಿ ವಿಭೂತಿ ಧರಿಸಿ ಎಡಗೈಯಲ್ಲಿ ಶಿವಲಿಂಗವನ್ನು  ಪೂಜಿಸುವ ಮಾರ್ಗ ಒಂದೇ ಆಗಿರುವುದರಿಂದ ನಾವೆಲ್ಲರೂ ವೀರಶೈವ ಲಿಂಗಾಯತರಾಗಿ ಮುಂದುವರಿಯೋಣ ಗಣತಿಯಲ್ಲಿ ವೀರಶೈವ ಲಿಂಗಾಯತರೆಂದು ಬರೆಯಿಸಿ ಉಪಜಾತಿ ಜಾತಿ ಬರೆಸಬಹುದು ಎಂದು ತಿಳಿಸಿದರು.
ಮಾಜಿ ಜಿಲ್ಲಾ ಪರಿಷತ್ ಸದಸ್ಯ ಎಚ್ ಕೆ ಮಲ್ಲಿಕಾರ್ಜುನಯ್ಯವಿವಿ ಸಂಘದ ಮಾಜಿ ಅಧ್ಯಕ್ಷ ಗುರುಸಿದ್ಧ ಸ್ವಾಮಿ, ಮಾಜಿ ಉಪಾಧ್ಯಕ್ಷ ಪಲ್ಲೇದ ಪಂಪಾಪತಿ, ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಪಂಚಾಕ್ಷರಿ, ರೈತ ಮುಖಂಡ ದರೂರು ಪುರುಷೋತ್ತಮ ಗೌಡ ಸಭೆಯಲ್ಲಿ ವೀರಶೈವ ಲಿಂಗಾಯತ ಎಂದು ಬರೆಸುವ ಬಗ್ಗೆ ಮಾತನಾಡಿ ಜಂಗಮರು ಬೇಡ ಜಂಗಮರೆಂದು ಬರೆಸಬಾರದು,  ಬದಲಾಗಿ ಜಂಗಮ ಅಥವಾ ವೀರಶೈವ ಜಂಗಮ ಎಂದು ಉಪಜಾತಿ ಕಾಲಂನಲ್ಲಿ ಬರೆಸಲು ತಿಳಿಸಿದರು.
ಆಶೀರ್ವಚನ ನೀಡಿದ ಹರಗಿನ ದೋಣಿ ಶ್ರೀಗಳು ಎಂದೆಂದಿಗೂ ವೀರಶೈವ ಲಿಂಗಾಯತ ಒಂದೇಲಿಂಗಾಯತ ಎಂದು ಬರೆಸಿದರೆ ಪ್ರತ್ಯೇಕ ಧರ್ಮ ಸಾಧ್ಯವಾಗುವುದಿಲ್ಲ
ಇದರಿಂದ ನಮ್ಮ ಸಮಾಜ ಒಡೆದು ಹೋಗುತ್ತದೆ ರಾಜಕೀಯ ಷಡ್ಯಂತರಕ್ಕೆ ನಾವು ಬಲಿಯಾಗದೆ ಹಿಂದೂ ವೀರಶೈವ ಲಿಂಗಾಯತ ಎಂದು ಬರೆಸಿ
ಉಪಜಾತಿಗಳನ್ನು ಬರೆಸಲು ಕರೆ ನೀಡಿದರು.
ಬಸವಣ್ಣನವರು 12ನೇಶತಮಾನದಲ್ಲಿ ತಾವು ವೀರಶವರೆಂದು ಒಪ್ಪಿಕೊಂಡಿರುವಾಗಲಿಂಗಾಯತ ಎಂಬ ಪ್ರಶ್ನೆ ಬಾರದೆಂದುಪಲ್ಲೇದ ಪಂಪಾಪತಿ ತಿಳಿಸಿದ್ದನ್ನು ಸಭೆ ಕೊಕ್ಕರ್ಲಿಂದ ಒಪ್ಪಿಕೊಂಡಿದ್ದು ಸಭೆಯಲ್ಲಿ ಮಂಡಿಸಿದ ನಿರ್ಣಯವೀರಶೈವ ಲಿಂಗಾಯತ ಜಂಗಮಎಂಬುದನ್ನು ಸಭೆ ಅನುಮೋದಿಸಿತು.
ಪದಾಧಿಕಾರಿಗಳಾದ ವಿಎಸ್ ಪ್ರಭಯ್ಯ, ಸಿಎಂ ಗುರುಬಸವರಾಜ ,ಕೆ ಎಮ್ ಕೊಟ್ರೇಶ್ ,ಎಚ್ ಕೆ ಗೌರಿಶಂಕರ,ರ್ರುದ್ರಯ್ಯ,ಬಿಎಂ ಯರಿಸ್ವಾಮಿ,ಎಂ ಚಂದ್ರ ಮೌಳಿ, ಬಂದ್ರಾಳು ಮೃತ್ಯುಂಜಯಮುಂತಾದವರು ಗೊತ್ತುಗಳನ್ನು ಮಂಡಿಸಿ ಗಣತಿ ಬಗ್ಗೆ ಮಾಹಿತಿ ನೀಡಿದರು.
WhatsApp Group Join Now
Telegram Group Join Now
Share This Article