ಸೆ. 19 ರಂದು ಸಾತ್ವಿಕ್ ಗ್ರೀನ್ ಎನರ್ಜಿಯ ಐಪಿಒ ಬಿಡುಗಡೆ

Pratibha Boi
ಸೆ. 19 ರಂದು ಸಾತ್ವಿಕ್ ಗ್ರೀನ್ ಎನರ್ಜಿಯ ಐಪಿಒ ಬಿಡುಗಡೆ
WhatsApp Group Join Now
Telegram Group Join Now

ಹುಬ್ಬಳ್ಳಿ,: ಸಾತ್ವಿಕ್ ಗ್ರೀನ್ ಎನರ್ಜಿ ಲಿಮಿಟೆಡ್  ಕಂಪನಿ ತನ್ನ ಈಕ್ವಿಟಿ ಷೇರುಗಳ ಆರಂಭಿಕ ಸಾರ್ವಜನಿಕ ಕೊಡುಗೆ(ಐಪಿಒ )ಗೆ ಸಂಬಂಧಿಸಿದ ಬಿಡ್ ನ್ನು 2025ರ ಸೆಪ್ಟೆಂಬರ್ 19 ರಂದು ಆರಂಭಿಸಲಿದೆ

ಒಟ್ಟು ಕೊಡುಗೆಯ ಗಾತ್ರ ಒಟ್ಟು ₹9000 ₹900 ಕೋಟಿವರೆಗಿನ ಈಕ್ವಿಟಿ ಷೇರ್ ಗಳನ್ನು ಒಳಗೊಂಡಿದ್ದು, ಇದರಲ್ಲಿ ಒಟ್ಟು ₹700 ಕೋಟಿವರೆಗಿನ ತಾಜಾ ಸಂಚಿಕೆ ಒಳಗೊಂಡಿದೆ ಮತ್ತು ಒಟ್ಟು ₹200 ಕೋಟಿವರೆಗಿನ ಮಾರಾಟಗಾರ ಷೇರ್‌ ಹೋಲ್ಡರ್‌ ಗಳ ಮಾರಾಟದ ಕೊಡುಗೆ ಒಳಗೊಂಡಿದೆ.

ಬಿಡ್/ ಆಫರ್  ಸೆಪ್ಟೆಂಬರ್ 19, 2025ರಂದು ಚಂದಾದಾರಿಕೆಗೆ ತೆರೆಯಲಿದ್ದು, ಮಂಗಳವಾರ, ಸೆಪ್ಟೆಂಬರ್ 23, 2025ರಂದು ಮುಕ್ತಾಯಗೊಳ್ಳಲಿದೆ.

ಕೊಡುಗೆಯ ಬೆಲೆ ಶ್ರೇಣಿಯನ್ನು ಪ್ರತೀ ಈಕ್ವಿಟಿ ಷೇರಿಗೆ ₹442 ರಿಂದ ₹465 ರವರೆಗೆ ನಿಗದಿಪಡಿಸಲಾಗಿದೆ ಕನಿಷ್ಠ 32 ಈಕ್ವಿಟಿ ಷೇರಿಗಳಿಗೆ ಬಿಡ್ ಮಾಡಬಹುದು ಮತ್ತು ಅದರ ನಂತರ 32 ಈಕ್ವಿಟಿ ಷೇರಿಗಳ ಗುಣಕಗಳಲ್ಲಿ ಬಿಡ್ ಮಾಡಬಹುದು.

ಕಂಪನಿಯು ಈಕ್ವಿಟಿ ಷೇರುಗಳ ತಾಜಾ ಸಂಚಿಕೆಯಿಂದ ಬರುವ ಆದಾಯವನ್ನು ಕೆಲವು ಬಾಕಿ ಇರುವ ಸಾಲಗಳ ಸಂಪೂರ್ಣ ಅಥವಾ ಭಾಗಶಃ ಪಾವತಿ ಅಥವಾ ನಿಗದಿತ ಮರುಪಾವತಿಗೆ, ನಮ್ಮ ಸಂಪೂರ್ಣ ಸ್ವಾಮ್ಯದ ಸಹಾಯಕ ಕಂಪನಿಯಾದ ಸಾತ್ವಿಕ್ ಸೋಲಾರ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‌ ಗೆ ಸಾಲ ಅಥವಾ ಈಕ್ವಿಟಿಯ ರೂಪದಲ್ಲಿ ಹೂಡಿಕೆ ಮಾಡಲು, ಆ ಸಹಾಯಕ ಕಂಪನಿಯ ಕೆಲವು ಬಾಕಿ ಇರುವ ಸಾಲಗಳ ಸಂಪೂರ್ಣ ಅಥವಾ ಭಾಗಶಃ ಮರುಪಾವತಿಗೆ, ಸಾತ್ವಿಕ್ ಸೋಲಾರ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‌ ಗೆ ಒಡಿಶಾದ ಗಂಜಾಮ್‌ ನ ಗೋಪಾಲಪುರ ಇಂಡಸ್ಟ್ರಿಯಲ್ ಪಾರ್ಕ್‌ ನ ಚಾಮಕಾಂಡಿಯ ರಾಷ್ಟ್ರೀಯ ಹೆದ್ದಾರಿ – 16ರಲ್ಲಿ 4 ಗಿಗಾ ವ್ಯಾಟ್ ಸೋಲಾರ್ ಪಿವಿ ಮಾಡ್ಯೂಲ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಹೂಡಿಕೆ ಮಾಡಲು ಮತ್ತು ಉಳಿದ ಮೊತ್ತವನ್ನು ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗೆ ಬಳಸಿಕೊಳ್ಳಲು ಉದ್ದೇಶಿಸಿದೆ.

ಡ್ಯಾಮ್ ಕ್ಯಾಪಿಟಲ್ ಅಡ್ವೈಸರ್ಸ್ ಲಿಮಿಟೆಡ್, ಆಂಬಿಟ್ ಪ್ರೈವೇಟ್ ಲಿಮಿಟೆಡ್ ಮತ್ತು ಮೋತಿಲಾಲ್ ಓಸ್ವಾಲ್ ಇನ್ವೆಸ್ಟ್‌ ಮೆಂಟ್ ಅಡ್ವೈಸರ್ಸ್ ಲಿಮಿಟೆಡ್ ಈ ಕೊಡುಗೆಯ ಬುಕ್ ರನಿಂಗ್ ಲೀಡ್ ಮ್ಯಾನೇಜರ್‌ ಗಳು  ಆಗಿರುತ್ತಾರೆ.

ಈ ಈಕ್ವಿಟಿ ಷೇರ್ ಗಳನ್ನು ಕಂಪನಿಯ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ ಮೂಲಕ ಸೆಪ್ಟೆಂಬರ್ 15, 2025ರಂದು ದೆಹಲಿ ಮತ್ತು ಹರಿಯಾಣದ ರಿಜಿಸ್ಟ್ರಾರ್ ಆಫ್ ಕಂಪನೀಸ್  ನಲ್ಲಿ ದಾಖಲಿಸಲಾಗಿದೆ ಮತ್ತು ಇವುಗಳನ್ನು ಬಿಎಸ್ಇ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಪಟ್ಟಿಮಾಡಲು ಪ್ರಸ್ತಾಪಿಸಲಾಗಿದೆ.

WhatsApp Group Join Now
Telegram Group Join Now
Share This Article