ಅಂತರ ಜಿಲ್ಲಾ ಬೈಕ್‌ ಕಳ್ಳನ ಬಂಧನ 24 ಬೈಕ್‌ಗಳ ವಶ – ಎಸ್‌ಪಿ ಸಿದ್ಧಾರ್ಥ ಗೊಯಲ್‌

Pratibha Boi
ಅಂತರ ಜಿಲ್ಲಾ ಬೈಕ್‌ ಕಳ್ಳನ ಬಂಧನ 24 ಬೈಕ್‌ಗಳ ವಶ – ಎಸ್‌ಪಿ ಸಿದ್ಧಾರ್ಥ ಗೊಯಲ್‌
WhatsApp Group Join Now
Telegram Group Join Now

ಜಮಖಂಡಿ;ನಗರಠಾಣೆ ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಬಾಗಲಕೊಟೆ, ವಿಜಯಪುರ, ಬೆಳಗಾಂವಿ ಜಿಲ್ಲೆಗಳಲ್ಲಿ ಬೈಕ್‌ಗಳನ್ನು ಕಳ್ಳತನ ಮಾಡಿದ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಬಂಧಿತನಿಂದ ವಿವಿಧ ಕಂಪನಿಗಳ ಸುಮಾರು 11 ಲಕ್ಷರೂ ಮೌಲ್ಯದ 24 ಬೈಕ್‌ಗಳನ್ನು ವಶ ಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ ಎಂದು ಬಾಗಲಕೊಟೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿದ್ಧಾರ್ಥ ಗೊಯಲ್‌ ತಿಳಿಸಿದರು. ನಗರಠಾಣೆಯ ಆವರಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ಬಾರಿ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು 22 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದರು ಎಂದು ತಿಳಿಸಿದರು.

ಹಿನ್ನೆಲೆ; ನಗರದ ಹನುಮಾನ ದೇವಸ್ಥಾನದ ಎದುರು ನಿಲ್ಲಿಸಲಾಗಿದ್ದ ತಾಲೂಕಿನ ಸಿದ್ಧಾಪುರ ಗ್ರಾಮದ ಯಲ್ಲಪ್ಪ ಕಾಗವಾಡ ಎಂಬುವರ ಬೈಕ್‌ ಆಗಸ್ಟ 7 ರಂದು ಕಳ್ಳತನವಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ನಗರಠಾಣೆ ಪೊಲೀಸರು ಡಿವೈಎಸ್‌ಪಿ ಸೈಯದ್‌ ರೊಶನ್‌ ಜಮೀರ, ಸಿಪಿಐ ಮಲ್ಲಪ್ಪ ಮಡ್ಡಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ತಾಲೂಕಿನ ಮಧುರಖಂಡಿ ಗ್ರಾಮದ ನಿವಾಸಿ ಲಕ್ಕಪ್ಪ ಮಾದರ ಎಂಬುವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 24 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಜಮಖಂಡಿ ಸೇರಿದಂತೆ, ರಬಕವಿ-ಬನಹಟ್ಟಿ, ಮುಧೋಳ, ಬೆಳಗಾಂವಿ ಜಿಲ್ಲೆಯ ಸವದತ್ತಿ,ಮುರುಗೋಡ, ವಿಜಯಪುರ ಜಿಲ್ಲೆಯ ಬಬಲೇಶ್ವರ, ಗಾಂಧಿಚೌಕ, ಬಸವನಬಾಗೇವಾಡಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿದ ಬಗ್ಗೆ ಆರೋಪಿ ವಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಾಧ ವಿಭಾಗದ ಪಿಎಸ್‌ಐ ಎನ್‌,ಕೆ.ಕಾಜಗಾರ, ನಗರಠಾಣೆ ಪಿಎಸ್‌ಐ ಅನೀಲ ಕುಂಬಾರ, ಸಿಬ್ಬಂದಿಗಳಾದ ಪ್ರಕಾಶ ಹೊಸಮನಿ, ಸಂಗಪ್ಪ ಕೊಠಿ, ಪರಶುರಾಮ,ಘಾಟಗೆ, ಮುತ್ತಪ್ಪ ಮಾಂಗ ರಾಜು ಪೂಜಾರಿ, ರಾಜಶೇಖರ ಮನಗೂಳಿ ಅವರ ತಂಡ ಕಾರ್ಯಾಚರಣೆ ನಡೆಸಿ ಬೈಕ್‌ ಕಳ್ಳತನದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಂಡಕ್ಕೆ ಜಿಲ್ಲಾ ಪೊಲೀಸ್‌ ವತಿಯಿಂದ ಬಹುಮಾನ ನೀಡಲಾಗುವದು ಎಂದು ಹೇಳಿದರು. ಮುಧೋಳ ಸಿಪಿಐ ಸಿರಹಟ್ಟಿ, ಗ್ರಾಮೀಣ ಪಿಎಸ್‌ಐ ಪೂಜೆರಿ ಮತ್ತು ಸಿಬ್ಬಂದಿಗಳು ಇದ್ದರು.

WhatsApp Group Join Now
Telegram Group Join Now
Share This Article