ರನ್ನ ಬೆಳಗಲಿ:ಸೆ.೧೮., ಪಟ್ಟಣದ ಕುಂಬಾರ ಗಲ್ಲಿಯಲ್ಲಿ. ಗುರುವಾರ ದಂದು ಆರೋಗ್ಯ ಮತ್ತು ಕುಟುಂಬ ಇಲಾಖೆ ಮತ್ತು ಪಟ್ಟಣ ಪಂಚಾಯತ ರನ್ನ ಬೆಳಗಲಿ. ಆಶ್ರಯದಲ್ಲಿ ನಮ್ಮ ಕ್ಲಿನಿಕ್ ಉದ್ಘಾಟನೆ ಕಾರ್ಯಕ್ರಮ ಜರಗಿತು.
ಆರ್ ಬಿ ತಿಮ್ಮಾಪೂರ ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಕ್ಲಿನಿಕ್ ಉದ್ಘಾಟಿಸಿ,ಬಡವರ ಪಾಲಿಗೆ ವರದಾನವಾಗಲಿ ನಮ್ಮ ಕ್ಲಿನಿಕ್ ಎಂದು ಶುಭ ಹಾರೈಸಿ. ದಿನಗೂಲಿ ನೌಕರರು ಕೂಲಿ ಕಾರ್ಮಿಕರು ದೊಡ್ಡ ದೊಡ್ಡ ಆಸ್ಪತ್ರೆಗೆ ಹೋದರೆ. ಎ? ಖರ್ಚಾಗುತ್ತದೆ, ಎಂಬ ಭಯದಿಂದ ರೋಗವನ್ನೇ ಪರೀಕ್ಷಿಸದೆ ಮರಣ ಹೊಂದುತ್ತಿದ್ದಾರೆ.ಯಾವುದೇ ಬಗೆಯ ಖಾಯಿಲೆಗಳಿಂದ ನರಳುತ್ತಿದ್ದ ಬಿಪಿಎಲ್ ಕಾಡುದಾರಿಗೆ ಉಚಿತ ಚಿಕಿತ್ಸೆ, ಎಪಿಎಲ್ ಕಾರ್ಡ್ದಾರರಿಗೆ ಶೇಕಡಾ ೩೦ರ? ರಿಯಾಯಿತಿಯಲ್ಲಿ ಚಿಕಿತ್ಸೆಯನ್ನು ನಮ್ಮ ಸರ್ಕಾರ ನೀಡುತ್ತಿದೆ. ಐದು ಕೋಟಿ ತಾಯಂದಿರು ಶಕ್ತಿ ಯೋಜನೆಯಲ್ಲಿ ತಮ್ಮ ಕುಟುಂಬದ ನಿರ್ವಣೆಗೆ. ವಿವಿಧ ಸ್ಥಳದಲ್ಲಿ ಕೆಲಸಕ್ಕಾಗಿ ಪಯಣಿಸುತ್ತಾ, ಆರೋಗ್ಯಕ್ಕಾಗಿ ಜಿಲ್ಲಾ ಆಸ್ಪತ್ರೆಯನ್ನು ಸಂಪರ್ಕಿಸಿ ಉತ್ತಮ ಆರೋಗ್ಯದೊಂದಿಗೆ ಕುಟುಂಬಕ್ಕೆ ನೆರಳಾಗಿ ನಿಂತು ಸರ್ಕಾರದ ಗ್ಯಾರೆಂಟಿ ಯೋಜನೆಗೆ ಅಭಿನಂದಿಸುತ್ತಿದ್ದಾರೆ. ಸರ್ಕಾರದ ಗ್ಯಾರೆಂಟಿ ಯೋಜನೆಗಳಿಂದ ಬಡ ಜನತೆ ಆರ್ಥಿಕ ಅಭಿವೃದ್ಧಿ ಹೊಂದಿ.ಉತ್ತಮ ಜೀವನ ನಡೆಸುತ್ತಿದೆ. ಈ ದಿನ ಪ್ರಾರಂಭಗೊಂಡ ನಮ್ಮ ಕ್ಲಿನಿಕ್ ಸೌಲಭ್ಯವನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.
ಸ್ಥಳೀಯ ಪೂಜ್ಯರಾದ ಶ್ರೀ ಸಿದ್ದರಾಮ ಶಿವಯೋಗಿಗಳು ಸಾನಿಧ್ಯ ವಹಿಸಿದರು. ಮುಧೋಳ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದುಗೌಡ ಪಾಟೀಲ.ಲೋಕಾಪುರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ ಕಿವಡಿ,ಡಾ. ವೆಂಕಟೇಶ ಮಲಘಾನ,ಮುಖಂಡರಾದ ಶಿವನಗೌಡ ಪಾಟೀಲ,ಉದಯ ಸಾರವಾಡ, ಪ್ರವೀಣ ಪಾಟೀಲ, ಸಂಗಪ್ಪ ಅಮಾತಿ, ಚಿನ್ನು ಅಂಬಿ, ಪರಮಾನಂದ ಕುಟ್ಟರಟ್ಟಿ, ಸಿದ್ದು ಮಾಳಿ, ಲಕ್ಕಪ್ಪ ಹಂಚಿನಾಳ, ಮುಬಾರಕ್ ಅತ್ತಾರ, ನೀಲಕಂಠ ಸೈದಾಪುರ,ಮುತ್ತಪ್ಪ ಸನ್ನಟ್ಟಿ, ಯಮನಪ್ಪ ದೊಡಮನಿ,ಸದಾಶಿವ ಹಿಡಕಲ,ಮಲ್ಲು ಹೊಸಪೇಟೆ, ಮುದುಕಪ್ಪ ದೋಬಸಿ ಮತ್ತು ಆರೋಗ್ಯ ಇಲಾಖೆಯ ಕಾರ್ಯಕರ್ತೆಯರು, ಪಟ್ಟಣದ ಸಾರ್ವಜನಿಕರು ಉಪಸ್ಥಿತರಿದ್ದರು.