ಘಟಪ್ರಭಾ. ಮಲ್ಲಾಪೂರ ಪಿ ಜಿ ಗ್ರಾಮದ ಅನೇಕ ಹಿರಿಯರು 59 ವರ್ಷಗಳ ಹಿಂದೆ ಸಾಲ ಸಿಗದ ಕಾಲದಲ್ಲಿ ಅಷ್ಟೇನು ಬೆಳವಣಿಗೆ ಹೊಂದದ ಘಟಪ್ರಭಾ ಗ್ರಾಮದ ಪರಿಸ್ಥಿತಿ ಮನಗಂಡ ಅವರು ಪಕ್ಕದ ಊರಿನ ಸಹಕಾರಿ ಬ್ಯಾಂಕ್ ಅಧ್ಯಕ್ಷರಿಗೆ ಸಾಲ ನೀಡಲು ಮನವಿ ಮಾಡಿದಾಗ ಅವರು ನಿರಾಕರಿಸಿದಾಗ ದಿ. ಮಲ್ಲಪ್ಪ ಹತ್ತರವಾಟ ಹಾಗೂ ಅನೇಕ ಹಿರಿಯರು ದೃಢ ಸಂಕಲ್ಪ ಮಾಡಿ ಸಹಕಾರಿ ಬ್ಯಾಂಕ ಸ್ಥಾಪನೆ ಮಾಡುವ ಉದ್ದೇಶದಿಂದ ಶೇರು ಸಂಗ್ರಹಣೆ ಮಾಡಿದಾಗ ಅದಕ್ಕೂ ಕಡಿಮೆ ಬಿದ್ದಾಗ ಹಿರಿಯ ಶ್ರೀಗಳ ಜೋಳಿಗೆಯಿಂದ ರೂ. 3200/- ಪಡೆದು ಬ್ಯಾಂಕ ಸ್ಥಾಪನೆ ಮಾಡಿ ನಮಗೆ ಬ್ಯಾಂಕ ವರದಾನವಾಗಿ ಕೊಟ್ಟಿದ್ದಾರೆ. ಹಾಗೂ ಬ್ಯಾಂಕಿನ ಪ್ರಥಮ ವ್ಯವಸ್ಥಾಪಕರಾಗಿ ನಮ್ಮ ತಂದೆ ದಿ. ಮಲ್ಲಪ್ಪ ತುಕ್ಕಾನಟ್ಟಿ ಅವರು ಸಹಕಾರಿ ಸೇವಕರಗಿ ಕೆಲಸ ಮಾಡಿ ಘಟಪ್ರಭಾ ಹಾಗೂ ಸುತ್ತಮುತ್ತಲಿನ ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕೆಲಸ ಮಾಡಿದ್ದಾರೆ ಎಂದು ಮಲ್ಲಾಪೂರ ಅರ್ಬನ ಬ್ಯಾಂಕಿನ ಅಧ್ಯಕ್ಷ ರಮೇಶ ತುಕ್ಕಾನಟ್ಟಿ ಹೇಳಿದರು.
ಅವರು ಗುರುವಾರದಂದು ಪಟ್ಟಣದ ದಿ ಮಲ್ಲಾಪೂರ ಅರ್ಬನ್ ಕೋ ಆಪ ಬ್ಯಾಂಕ ಲಿ. ಘಟಪ್ರಭಾ ಇದರ 2024- 25 ನೇ ಸಾಲಿನ 59 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಉದ್ದೇಸಿಸಿ ಮಾತನಾಡಿ ಕೃಷಿ, ಕೈಗಾರಿಕೆ, ವ್ಯಾಪಾರ, ಶಿಕ್ಷಣ ಕ್ಷೇತ್ರಕ್ಕೆ ಸಾಲ ನೀಡಿ, ಅವರ ಬೆಳವಣಿಗೆಗೆ ಬ್ಯಾಂಕ ಪ್ರಮುಖ ಪಾತ್ರ ವಹಿಸಿದೆ ಎಂದರು. ಈ ಬ್ಯಾಂಕ ಬೆಳವಣಿಗೆಗೆ ಆಡಳಿತ ಮಂಡಳಿ ಸಹಕಾರ, ಸಿಬ್ಬಂದಿ ಶ್ರಮ, ಗ್ರಾಹಕರ, ಶೇರುದಾರರ ವಿಶ್ವಾಸವೇ ಕಾರಣ ಎಂದರು.
ಬ್ಯಾಂಕಿನ ವ್ಯವಸ್ಥಾಪಕರಾದ ರಮೇಶ ಮುರಗೋಡ ವರದಿ ವಾಚನ ಮಾಡಿ ಮಾತನಾಡಿ ಸನ್ 2024-25 ನೇ ಸಾಲಿಗೆ ಬ್ಯಾಂಕು 4921 ಸದಸ್ಯರನ್ನು ಹೊಂದಿದ್ದು, ರೂ. 99,31,200/- ಗಳ ಶೇರ್ ಬಂಡವಾಳ, ರೂ.4,53,00,283-99 ಗಳ ಕಾಯ್ದಿಟ್ ನಿಧಿ, ರೂ. 23,02,97,566-18 ಗಳ ಠೇವಣಿ, ರೂ. 16,60,79,982/- ಗಳ ಸಾಲ ನೀಡಿದೆ. ರೂ. 29,62,77,395-91 ಗಳ ದುಡಿಯುವ ಬಂಡವಾಳ ಹೊಂದಿದೆ. ಪ್ರಸಕ್ತ ವರ್ಷ ಬ್ಯಾಂಕು ರೂ. 29,19,913-25 ಗಳ ಲಾಭ ಗಳಿಸಿ ಮತ್ತು 5 ಲಕ್ಷ ರೂಪಾಯಿ ವರೆಗಿನ ಠೇವಣಿ ಗೆ ವಿಮಾ ಸೌಲಭ್ಯ ಕಲ್ಪಿಸಿ ಸಹಕಾರಿ ರಂಗದ ಉತ್ತಮ ಬ್ಯಾಂಕ ಆಗಿ ಮುನ್ನಡೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಹೊನ್ನಜ್ಜ ಚ. ಕೋಳಿ, ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಶೈಲ ಮ. ಮಗದುಮ್ಮ, ಆನಂದ ದು ಕಬಾಡಗಿ, ಸತೀಶ ಬಿ ಹತ್ತರವಾಟ, ಶುಭಾಶಚಂದ್ರ ಶೆ ಕಾಡದವರ, ಮಹಾದೇವ ಕಾ. ಬಟನೂರೆ, ಮಹಾವೀರ ಪಾ ಹುಲ್ಲೋಳಿ, ಡಾ. ರಾಜಶೇಖರ ಗೊ. ತುಕ್ಕಾನಟ್ಟಿ, ಕಲ್ಲೋಳೆಪ್ಪಾ ಹ. ಜಮಖಂಡಿ, ರಾಮಪ್ಪ ಬ ನಾಯಿಕ, ಶ್ರೀಮತಿ ರೇವಕ್ಕ ಶಂ. ಕಮತ, ಶ್ರೀಮತಿ ಶೃತಿ ಮ. ಮಟಗಾರ, ಶ್ರೀಕಾಂತ ಸು. ಗಾಡವಿ, ರಮೇಶ ನಿ. ಬಂಗಾರಿ ,ಹಾಗೂ ಮಲ್ಲಾಪೂರ ಪಿಕೆಪಿಎಸ್ ಅಧ್ಯಕ್ಷ ಮುತ್ತಣ್ಣ ಹತ್ತರವಾಟ, ಮಂಜು ಮಟಗಾರ, ಜಿ ಎಸ್ ರಜಪೂತ,ಮಾರುತಿ ಹುಕ್ಕೇರಿ, ಎ ಕೆ ಚೌಗಲಾ,ಸತೀಶ ಪಾಟೀಲ, ವೀರಭದ್ರ ಕರೋಶಿ, ಮಲ್ಲಪ್ಪ ಬನ್ನನವರ, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಮಹಾಜನ, ಶ್ರೀಕಾಂತ ಕುಲಕರ್ಣಿ, ಎಮ್ ಎ ಪಾಟೀಲ, ಬಸವರಾಜ ಬಾಗೇವಾಡಿ, ಪಾರೇಶ ಗಡ್ಡಿ, ಗುಡಸ ಪಿಕೆಪಿಎಸ್ ಅಧ್ಯಕ್ಷ ಮಲ್ಲು ನರಸನ್ನವರ, ಶಿವನಪ್ಪ ನೇರ್ಲಿ,ಅಲ್ಲಪ್ಪ ಹುಕ್ಕೇರಿ ಹಾಗೂ ಘಟಪ್ರಭಾ ಹಾಗೂ ಸುತ್ತಮುತ್ತಲಿನ ರೈತರು, ಮುಖಂಡರು, ಶೇರುದಾರರು, ಸಿಬ್ಬಂದಿ ಭಾಗವಹಿಸಿದ್ದರು.