ಅಥಣಿ: ಸಹಕಾರಿ ಬ್ಯಾಂಕ್‌ಗಳು ಮೂಲತಃ ಸದಸ್ಯರ ಕೈಗಳಲ್ಲಿ ಆರ್ಥಿಕ ಶಕ್ತಿ ಹೆಚ್ಚಿಸಲು, ಗ್ರಾಮೀಣ ಮತ್ತು ನಗರವಾಸಿಗಳಿಗೆ ಸಾಲ ಮತ್ತು ಸೇವೆಗಳನ್ನು ತಲುಪಿಸಲು ಸಹಕಾರಿಯಾಗಿವೆ. ಆದರೆ ಸಹಕಾರಿ ಕ್ಷೇತ್ರದ ಅಭಿವೃದ್ದಿಗೆ ಆಡಳಿತ ಮಂಡಳಿ ರೈತರಲ್ಲಿ ವಿಶ್ವಾಸ ವ್ಯಕ್ತವಾಗಲು ಅವರಿಂದಲೆ ಮೊದಲು ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿ ಇಟ್ಟು ವಿಶ್ವಾಸರ್ಹತೆಯನ್ನು ಸಾಬಿತುಪಡಿಸಬೇಕಿದೆ ಅಂದಾಗ ಮಾತ್ರ ಸಹಕಾರಿ ಕ್ಷೇತ್ರ ಉಳಿಯಲು ಸಾಧ್ಯವಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು
ಪಟ್ಟಣದ ವಿಕ್ರಮಪೂರ ಬಡಾವಣೆಯಲ್ಲಿರುವ ಅಥಣಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ ನಿಯಮಿತ ಅಥಣಿ ಇದರ ನವೀಕರಣ ಕಟ್ಟಡ ಉದ್ಘಾಟನೆ ಹಾಗೂ ವಾರ್ಷಿಕೆ ಸರ್ವಸಾಧರಣ ಸಭೆಯ ಕಾರ್ಯಕ್ರಮವನ್ನು ಶಾಸಕ ಲಕ್ಷ್ಮಣ ಸವದಿ ಸಸಿಗೆ ನೀರು ಎರೆಯುವ ಮೂಲಕ ಚಾಲನೆ ನೀಡಿದರು
ಕಾರ್ಯಕ್ರಮವನ್ನು ಉದ್ದೇಶಿಸಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ ಸಹಕಾರಿ ಚಳುವಳಿಯ ಮೂಲ ಉದ್ದೇಶ ಹಾಳಾಗುತ್ತಿದೆ. ಹಣ ಪಡೆದು ಮತಗಳನ್ನು ನೀಡುವ ಸಂಸ್ಕೃತಿಯಿಂದ ಸಹಕಾರಿ ಕ್ಷೇತ್ರ ಪತನವಾಗುವದರಲ್ಲಿ ಯಾವುದೆ ಸಂಶಯ ಇಲ್ಲ, ಹಣ ಪಡೆದು ನಿರ್ದೇಶಕ ಸ್ಥಾನಕ್ಕೆ ಹೋದ ಪ್ರತಿನಿಧ ಏನು ಮಾಡಬಹುದು ಎಂದು ಒಂದು ಬಾರಿ ಯೋಚಿಸಿ, ಇಲ್ಲವಾದರ ಗಂಡಾಂತರ ಕಟ್ಟಿಟ್ಟ ಬುತ್ತಿ, ಯಾವುದೆ ಕಾರಣಕ್ಕೂ ಪ್ರಜ್ಞಾವಂತ ಮತದಾರರು ಹಣದ ಆಮಿಷಕ್ಕೆ ಒಳಗಾಗದೆ ಒಳ್ಳೆಯ ಅಭ್ಯರ್ಥಿಗಳಿಗೆ ಮತಗಳನ್ನು ಕೋಟ್ಟು ಸಹಕಾರಿ ಕ್ಷೇತ್ರವನ್ನು ಉಳಿಸುವ ಜವಾಬ್ದಾರಿ ನಮ್ಮೇಲ್ಲರ ಮೇಲೆ ಇದೆ. ಸಾರ್ವಜನಿಕರಿಂದ ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರಿಂದಲೂ ಬ್ಯಾಂಕಿಗೆ ಠೇವಣಿಗಳನ್ನು ಹೆಚ್ಚಿಸಿ ಸಾಲ ಸೌಲಭ್ಯಗಳನ್ನು ಕೊಟ್ಟಿದ್ದಾರೆ ಆಗ ಮಾತ್ರ ಸಹಕಾರಿ ಕ್ಷೇತ್ರದ ಬ್ಯಾಂಕುಗಳು ಉಳಿಯಲು ಸಾದ್ಯವಾಗುತ್ತದೆ ಎಂದು ಹೇಳಿದರು.
ಈ ವೇಳೆ ಅಥಣಿಯ ಶೇಟ್ಟರ ಮಠದ ಮರಳುಸಿದ್ದ ಸ್ವಾಮೀಜಿ, ಜಮಖಂಡಿಯ ಒಲೆ ಮಠದ ಆನಂದ ಗುರುಜಿ, ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಅಧ್ಯಕ್ಷ ಪರಪ್ಪ ಸವದಿ, ಬ್ಯಾಂಕಿನ ಅಧ್ಯಕ್ಷ ದುಂಡಪ್ಪ ಅಸ್ಕಿ,ಉಪಾಧ್ಯಕ್ಷ ಭರತ ಮಾಳಿ, ನಿರ್ದೇಶಕರಾದ ಅಶೋಕ ಪಡನಾಡ, ಕಲಗೌಡ ಪಾಟೀಲ, ರವೀಂದ್ರ ಗಾಣಿಗೇರ, ವಿನಯ ಪಾಟೀಲ, ಅಪ್ಪಾಸಾಹೇಬ ವಾಘಮೋರೆ, ತಂಗೇವ್ವಾ ಖೋತ, ಮಹಾದೇವ ಮೇತ್ರಿ, ರಾಜಗೌಡ ಪಾಟೀಲ, ಮಾನಸಿಂಗ ಮಗರ, ಸತ್ಯಪ್ಪ ಬಿರಾದಾರ, ಶ್ರೀಶೈಲ ನಾಯಿಕ, ಸುಜಾತಾ ಖಡಕಿ, ವ್ಯವಸ್ಥಾಪಕ ರಾಜೂ ತೇರದಾಳ ಸೇರಿದಂತೆ ಬ್ಯಾಂಕಿ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.