ಕೃಷ್ಣಾನದಿ ಹಿನ್ನೀರಿನ ಗ್ರಾಮಗಳ ಶಾಶ್ವತವಾಗಿ ಸ್ಥಳಾಂತರಿಸಿ: ಮಹಾದೇವ ಮಡಿವಾಳ

Ravi Talawar
ಕೃಷ್ಣಾನದಿ ಹಿನ್ನೀರಿನ ಗ್ರಾಮಗಳ ಶಾಶ್ವತವಾಗಿ ಸ್ಥಳಾಂತರಿಸಿ: ಮಹಾದೇವ ಮಡಿವಾಳ
WhatsApp Group Join Now
Telegram Group Join Now
ಅಥಣಿ: ತಾಲ್ಲೂಕಿನಲ್ಲಿ ಬರುವಂತ ಕೃಷ್ಣಾ ನದಿ ಹಿನ್ನೀರಿನಿಂದ ಮುಳುಗಡೆ ಹೊಂದಿರುವ ಹುಲಗಬಾಳ, ಸಪ್ತಸಾಗರ, ತೀರ್ಥ, ನದಿ ಇಂಗಳಗಾಂವ, ದರೂರ, ಸತ್ತಿ, ಖವಟಕೊಪ್ಪ, ಶೇಗುಣಸಿ & ಹಲ್ಯಾಳ ಗ್ರಾಮಗಳಿಗೆ ಇನ್ನೂವರೆಗೆ ಯಾವುದೇ ಪರಿಹಾರವನ್ನು ನೀಡಿಲ್ಲ ಹಾಗೂ ಇವರಿಗೆ ಶಾಶ್ವತವಾಗಿ ವಾಸ ಮಾಡಲು ಯಾವುದೇ ಸ್ಥಳಾವಕಾಶವನ್ನು ಗುರುತಿಸಿಲ್ಲ. ಈ ಎಲ್ಲ ಗ್ರಾಮದ ನಿರಾಶ್ರಿತರಿಗೆ ಪರಿಹಾರನೀಡಿ ಅವರಿಗೆ ವಾಸ ಮಾಡಲು ಸ್ಥಳಾವಕಾಶವನ್ನು ಕಲ್ಪಿಸಿ ಕೊಡುವುದಾಗಬೇಕು ಎಂದು ರೈತ ಸಂಘಟನೆ ಅಧ್ಯಕ್ಷ ಮಹಾದೇವ ಮಡಿವಾಳ ಆಗ್ರಹಿಸಿದರು.
ಪಟ್ಟಣದ ತಹಶೀಲ್ದಾರ ಕಛೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕ ನೂರಾರು ರೈತರಿಂದ ಸರಕಾರದಿಂದ ರೈತರನ್ನು ಕಡೆಗಣನೆ ಮಾಡಿ ಕೃಷ್ಣಾ ನದಿ ನೀರಿನ ಹಿನ್ನೀರಿನಲ್ಲಿ ಬಾದಿತವಾದ ಗ್ರಾಮಗಳ  ನಿರಾಶ್ರೀತರಿಗೆ ದಶಕಗಳಿಂದ ಬೇಡಿಕೆಯನ್ನು ಇಡೆರಿಸದ ಹಿನ್ನಲೆಯಲ್ಲಿ ತಹಶಿಲ್ದಾರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿ ಶೀಘ್ರದಲ್ಲಿ ನಮ್ಮ ಬೇಡಿಕೆಗಳನ್ನು ಇಡೆರಿಸುವಂತೆ ತಹಶೀಲ್ದಾರ ಸಿದ್ರಾಯ ಭೋಸಗಿ ಅವರಿಗೆ ಮನವಿ ಸಲ್ಲಿಸಿದರು
ಈ ವೇಳೆ ರೈತ ಸಂಘದ ಅಧ್ಯಕ್ಷ ಮಹಾದೇವ ಮಡಿವಾಳ ಮಾತನಾಡಿ ತಾಲೂಕಿನ ಕೃಷ್ಣಾನದಿ ಹಿನ್ನೀರಿನ ಗ್ರಾಮಗಳ ಶಾಶ್ವತವಾಗಿ ಸ್ಥಳಾಂತರ ಮಾಡುವುದು ಮತ್ತು ನಿರಾಶ್ರಿತರಾಗಿರುವವರಿಗೆ ಪರಿಹಾರ ಕೊಡಿಸುವದು ಹಾಗೂ ಬಸವೇಶ್ವರ ಯಾತನೀರಾವರಿ ಯೋಜನೆಯು ಕುಂಠಿತವಾಗಿದ್ದು ಅದನ್ನು ಪೂರ್ಣಗೊಳಿಸಬೇಕು. ನಾಗನೂರ ಪಿ.ಕೆ. ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ದೊಡವಾಡ, ಅವರಖೋಡ & ನಾಗನೂರ ಪಿ.ಕೆ.ಗ್ರಾಮಗಳಿಗೆ ಈಗಾಗಲೆ ರಡೇರಹಟ್ಟಿ, ಆರ್.ಸಿ. ಸೆಂಟರ್‌ದಲ್ಲಿ ನಿರಾಶ್ರಿತರಾದವರ ಹೆಸರಿಗೆ ಜಾಗ ಮಂಜೂರು ಮಾಡಿದ್ದು ಆದರೆ ಇವರಿಗೆ ಇಲ್ಲಿಯವರೆಗೆ ಮನೆಯ ಹಕ್ಕುಪತ್ರವನ್ನು ವಿತರಣೆ ಮಾಡಿಲ್ಲ. ಆಫಲಾನುಭವಿಗಳಿಗೆ ಹಕ್ಕುಪತ್ರ ನೀಡಿ ಅವರು ತಮ್ಮ ತಮ್ಮ ಜಾಗದಲ್ಲಿ ಅವಕಾಶ ಮಾಡಿಕೊಡಬೇಕು. ಹುಲಗಬಾಳಿ ಗ್ರಾಮಕ್ಕೆ ಪುನರ್ವಸತಿ ಮತ್ತು ಪುನರ್ನಿಮಾಣ ಮಾಡಲು ಮಾನ್ಯ ಉಚ್ಚನ್ಯಾಯಾಲಯ ಧಾರವಾಡ ಆದೇಶ ಮಾಡಿದ್ದರೂ ಸಹಿತ ಇಲ್ಲಿಯವರೆಗೆ ಜಿಲ್ಲಾಡಳಿತ ಯಾವುದೇ ಕ್ರಮವನ್ನು ತೆಗೆದುಕೊಂಡಿರುವುದಿಲ್ಲ. ತಾಲೂಕಿನಾದ್ಯಂತ ರಾತ್ರಿ ಸಮಯದಲ್ಲಿ ವಿದ್ಯುತ್ ಸ್ಥಗಿತಗೊಳಿಸುವುದರಿಂದ ನಮ್ಮ ರೈತಾಪಿ ಜನರಿಗೆ, ಶಾಲಾ ಮಕ್ಕಳಿಗೆ ರಾತ್ರಿ ಸಮಯದಲ್ಲಿ ವಿದ್ಯಾರ್ಥಿಗಳು ಅಧ್ಯಯನ ಸಾಧ್ಯವಾಗುತ್ತಿಲ್ಲ ಹೀಗೆ ಒಟ್ಟು ಹಲವಾರು ಸಮಸ್ಯೆಗಳು ಇದ್ದು ಅವುಗಳನ್ನು ಸರಕಾರ ಗಂಭೀರವಾಗಿ ಪರೀಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು
ಈ ವೇಳೆ ರೈತ ಮುಖಂಡರಾದ ಪ್ರಕಾಶ ಜೋಶಿ, ಮಹಮ್ಮದ ಜಮಾದಾರ, ಸಂಗಪ್ಪ ಕರಿಗಾರ, ಕೀರಣ ಮಸಾಳ, ಸದಾಶೀವ ಬಾಡಗಿ, ಪಿಂಟು ಕಬಾಡಗಿ, ದುಂಡಪ್ಪ ತನಂಗಿ, ಬರಮು ಕೌಜಲಗಿ, ಬಸವರಾಜ ಜಗದಾಳ, ಮಂಜೂಳಾ ಹಣಮಾಪೂರೆ, ಪಾರವ್ವಾ ಪಡಸಲಗಿ, ಶಾಂತಾ ಕೋಳಿ, ಇಂದು ಸಾವಳಂಕೆ, ಶೋಭಾ ಬಡಿಗೇರ ಸೇರಿದಂತೆ ಹಲವು ರೈತರು ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article