ಯರಗಟ್ಟಿ : ಸಮೀಪದ ಮುನವಳ್ಳಿ ಪಟ್ಟಣದ ವಿಶ್ವಕರ್ಮ ಸಮಾಜದ ವತಿಯಿಂದ ವಿಶ್ವಕರ್ಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಭವ್ಯ ಮೆರವಣಿಗೆಯ ಉದ್ಘಾಟನೆಯನ್ನು ಶ್ರೀ ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಸ್ವಾಮೀಜಿ ನೆರವೇರಿಸಿ ಮಾತನಾಡುತ್ತ ಎಲ್ಲ ಜನರಿಗೂ, ಎಲ್ಲ ವರ್ಗದವರಿಗೂ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರವಾಗಿದ್ದು, ಸರಕಾರ ಹಾಗೂ ಜನತೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡಬೇಕೆಂದರು.
ಮುಖಂಡರಾದ ವಿರೂಪಾಕ್ಷ ಮಾಮನಿ, ಅಂಬರೀಷ ಯಲಿಗಾರ, ಪಂಚನಗೌಡ ದ್ಯಾಮನಗೌಡರ, ರಮೇಶ ಗೋಮಾಡಿ, ಪುರಸಭೆ ಅಧ್ಯಕ್ಷ ಸಿ.ಬಿ.ಬಾಳಿ, ಸವದತ್ತಿ ಎ.ಪಿ.ಎಂ.ಸಿ. ಅಧ್ಯಕ್ಷ ಚಂದ್ರು ಪೂಜೇರ(ಜಂಬ್ರಿ), ಸುಭಾಸ ಗೀದಿಗೌಡ್ರ, ಶ್ರೀಕಾಂತ ಮಲಗೌಡ್ರ, ಗುರುಶಾಂತ ಚಂದರಗಿ, ಡಿ.ಡಿ.ಕಿನ್ನೂರಿ, ಚಂದ್ರು ಮುಚ್ಚಂಡಿ,
ಶ್ರೀ ವಿಶ್ವಕರ್ಮರ ಭಾವಚಿತ್ರದ ಭವ್ಯ ಮೆರವಣಿಗೆ ಸಕಲ ಮಂಗಲವಾದ್ಯ ವೈಭವಗಳೊಂದಿಗೆ, ಜನಪದ ಮಜಲುಗಳೊಂದಿಗೆ, ಆರತಿ ಕುಂಭ ಹೊತ್ತ ಸುಮಂಗಲೆಯರೊಂದಿಗೆ ಸಂಭ್ರಮ ಹಾಗೂ ಸಡಗರದಿಂದ ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿತು. ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಹಿರೇ ಅಗಸಿ, ಬಜಾರ ರಸ್ತೆ, ಶ್ರೀ ದಾನಮ್ಮ ಗುಡಿ ರಸ್ತೆ, ಸೂಲಕಟ್ಟಿ ಅಗಸಿ ಶ್ರೀ ಕಾಳಿಕಾದೇವಿ ದೇವಸ್ಥಾನ ತಲುಪಿತು. ನಂತರ ವೇದಿಕೆ ಕಾರ್ಯಕ್ರಮ ಜರುಗಿತು. ವಿಶ್ವಕರ್ಮ ಯುವಕ ಮಂಡಳ, ಶ್ರೀ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಹಾಗೂ ಗಾಯತ್ರಿ ಮಹಿಳಾ ಮಂಡಳ ಸದಸ್ಯರು ಸೇರಿದಂತೆ ಗಣ್ಯರು ಸೇರಿದಂತೆ ಇತರರು ಇದ್ದರು.