ಸೂಳೆಭಾವಿ ಗ್ರಾಮದಲ್ಲಿ  ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ

Ravi Talawar
ಸೂಳೆಭಾವಿ ಗ್ರಾಮದಲ್ಲಿ  ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ
WhatsApp Group Join Now
Telegram Group Join Now
ಬೆಳಗಾವಿ. ತಾಲೂಕಿನ ಸುಳೇಭಾವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ  ಸೇವಾ ಪಾಕ್ಷಿಕ ಅಭಿಯಾನ ಹಾಗೂ ವಿಶ್ವ ನಾಯಕ ಜನಪ್ರೀಯ ಪ್ರಧಾನ ಮಂತ್ರಿ  ನರೇಂದ್ರ ಮೋದಿ ರವರ 75 ನೇಯ ಜನ್ಮದಿನದ ಅಂಗವಾಗಿ ನಡೆದ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ನಡೆಯಿತು  ಮಾಜಿ ಸಿ.ಎಂ  ಹಾಗೂ ಸಂಸದರಾದ ಜಗದೀಶ್ ಶೆಟ್ಟರ್ ರವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುಭಾಷ್ ಪಾಟೀಲ, ಮಾಜಿ ಶಾಸಕರಾದ ಸಂಜಯ ಪಾಟೀಲ, ಮಂಡಳ ಅಧ್ಯಕ್ಷ ಯುವರಾಜ  ಜಾಧವ, ಜಿಲ್ಲಾ  ಎಸ್.ಸಿ ಮೋರ್ಚಾ ಅಧ್ಯಕ್ಷ   ಯಲ್ಲೇಶ ಕೋಲಕಾರ, ಪ್ರಕೋಷ್ಠಗಳ ಜಿಲ್ಲಾ ಸಂಯೋಜಕ ಮಹೇಶ ಮೋಹಿತೆ, ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ. ಗುರು ಕೋತಿನ,ಮನೋಜ ಪಾಟೀಲ,ಅಡಿವೇಶ ಅಂಗಡಿ, ವೀರಭದ್ರ  ನೇಸರಗಿ,ರಮೇಶ್ ಸರವದೇ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಡಾ.ಗುರು ಕೋತಿನ ಹಾಗೂ ಪ್ರಮುಖರು ಈ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರ ಮಾಡಿ ಮೇಲ್ದರ್ಜೆಗೆ ಏರಿಸಬೇಕು ಇದರಿಂದ ಸಾರ್ವಜನಿಕರಿಗೆ ಅನುಕೂಲ ಆಗುತ್ತದೆ ಎಂದು ಮನವಿ ಕೊಟ್ಟರು ಇದಕ್ಕೆ ಪ್ರತಿಕ್ರಿಯಿಸಿದ  ಜಗದೀಶ ಶೆಟ್ಟರ ಆದಷ್ಟು ಬೇಗನೆ ಪ್ರಸ್ತಾವನೆ ಸಲ್ಲಿಸಿ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸುವ ಭರವಸೆ ನೀಡಿದರು.
WhatsApp Group Join Now
Telegram Group Join Now
Share This Article