ರನ್ನಬೆಳಗಲಿ : ಸಾಯಂಕಾಲ ೪:೩೦ ಗಂಟೆಗೆ ಶಾಲಾ ಕಾಲೇಜುಗಳು ಬಿಡುತ್ತವೆ ಈ ವೇಳೆಯಲ್ಲಿ ಮಹಾಲಿಂಗಪುರ ದಿಂದ ಮುಧೋಳಕ್ಕೆ ಹೋಗಲು ಯಾವುದೇ ಸಿಟಿ ಬಸ್ ಇಲ್ಲದ ಕಾರಣ ಮಹಾಲಿಂಗಪುರ ದಿಂದ ರನ್ನ ಬೆಳಗಲಿ ಮಳಲಿಕಿನಾಲ್, ಶಾಲಿಮನಿ, ಮುಗಳಖೋಡ, ಕಮತ್ ಮತ್ತು ಸೊರಗಾಂವಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗುತ್ತಿದ್ದು ಪ್ರತಿದಿನ ಸಾಯಂಕಾಲ ೪:೩೦ ರಿಂದ ೫ ಗಂಟೆಯ ಸಮಯದಲ್ಲಿ ಮಹಾಲಿಂಗಪುರ ದಿಂದ ಮುಧೋಳಕ್ಕೆ ಸಿಟಿ ಬಸ್ ಬಿಡಬೇಕೆಂದು ವಿನಂತಿಸಿ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮುಧೋಳ ಘಟಕದ ವ್ಯವಸ್ಥಾಪಕರಿಗೆ ರನ್ನಬೆಳಗಲಿಯ ಎಸ್ ಜಿ ಎಂ ಪದವಿಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಅರ್ಜಿ ಸಲ್ಲಿಸಿ ಮಾತನಾಡಿದರು.
ಮುತ್ತಪ್ಪ ಅಂಗಡಿ, ಶಿವು ಗಾಣಿಗೇರ, ಬಾಳಪ್ಪ ಯಡಹಳ್ಳಿ, ಸಿದ್ದು ಕಣಬೂರ, ಸಾಗರ ಹವಾಲ್ದಾರ, ಲಕ್ಷ್ಮಣ ಹಿಕಡಿ, ಸಿದ್ದು ದೊಡ್ಡಹಟ್ಟಿ, ಹುಲ್ಲಪ್ಪ ಚಂದಪ್ಪನವರ, ದರ್ಶನ ಕಾಳವ್ವಗೋಳ, ಮಲ್ಲು ಪೂಜಾರಿ, ಮುತ್ತು ಪೂಜಾರಿ, ಸದಾಶಿವ ಅವರಾದಿ ಇತರರಿದ್ದರು.