ಜಮಖಂಡಿ: ಸ್ಥಳೀಯ ನಗರಸಭೆ ಚುನಾಯಿತ ಮತ್ತು ನಾಮನಿದೇರ್ಶನ ಪ್ರತಿನಿಧಿಗಳು ವಿಶೇಷ ಅಧ್ಯಯನಕ್ಕಾಗಿ ದೆಹಲಿ ಚಂದಿಗಡ ರಾಜ್ಯಗಳಿಗೆ ಪ್ರವಾಸ ಬೆಳಸಿದರು. ನಗರಸಭೆಯ ಸ್ವಚ್ಛ ಭಾರತ ಮಿಷನ್ ೨ ಯೋಜನೆಯಲ್ಲಿ ಸಾಮರ್ಥ್ಯ ಅಭಿವೃದ್ಧಿ ಅಡಿಯಲ್ಲಿ ಸ್ವಚ್ಛ ಸರ್ವೇಕ್ಷಣೆಯಲ್ಲಿ ಉತ್ತಮ ಸಾಧನೆಗೈದ ನಗರಪ್ರದೇಶಗಳಿಗೆ ಒಂದು ವಾರದ ವಿಶೇಷ ಅಧ್ಯಯನ ಪ್ರವಾಸಕ್ಕೆ ಮಾಜಿ ಶಾಸಕ ಆನಂದ ನ್ಯಾಮಗೌಡ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಈಶ್ವರ ವಾಳೆನ್ನವರ, ಉಪಾಧ್ಯಕ್ಷೆ ರೇಖಾ ಕಾಂಬಳೆ, ಸದಸ್ಯರಾದ ಪ್ರಕಾಶ ಹಂಗರಗಿ, ಶ್ರೀಧರ ಕನ್ನೂರ, ಮುಬಾರಕ ಅಪರಾಧ, ಪ್ರಶಾಂತ ಚರಕಿ, ಕುಶಾಲ ವಾಗಮೋರೆ, ಪೂಜಾ ವಾಳ್ವೇಕರ ಸಹಿತ ಹಲವರು ಇದ್ದರು.