ಹುಕ್ಕೇರಿ. ಅರಿಹಂತ ಸೌಹಾರ್ದ ಸಹಕಾರಿ ಸಂಘಕ್ಕೆ 5. 72 ಕೋಟಿ ಲಾಭವಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಬರಮಪ್ಪ ಬಾಬು ಚೌಗಲಾ ಹೇಳಿದರು.
ಅವರು ಸಮೀಪದ ಹುಲ್ಲೋಳಿ ಗ್ರಾಮದ ದಿ ಅರಿಹಂತ ಸೌಹಾರ್ದ ಸಹಕಾರಿ ಸಂಘ ಇದರ 26 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು
ಸಸಿಗೆ ನೀರುಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವರ್ಷಂತೆಕ್ಕೆ ಸಹಕಾರಿಯ ಮುಖ್ಯ ಕಚೇರಿಯೊಂದಿಗೆ 10 ಶಾಖೆ ಯನ್ನು ಒಳಗೊಂಡು ಕಾರ್ಯನಿರ್ವಹಿಸುತ್ತಿದ್ದು ಘಟಪ್ರಭಾ, ಹುಕ್ಕೇರಿ, ಮುಗಳಖೋಡ, ಗೋಡಗೇರಿ,ಉಗಾರ್ ಖುರ್ದ.ಚಿಕ್ಕೋಡಿ, ದರೂರ್, ಮುನವಳ್ಳಿ, ಶೇಡಬಾಳ, ಅಥಣಿ ಹಾಗೂ ನೂತನವಾಗಿ ಬೆಳಗಾವಿಯಲ್ಲಿ ಪ್ರಾರಂಭವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಎಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನಗದು ಹಾಗೂ ಪ್ರಮಾಣ ಪತ್ರ ವಿತರಿಸಿದರು ಹಾಗೂ ಗಣ್ಯಮಾನ್ಯರಿಗೆ ಗೌರವ ಪೂರಕ ಸತ್ಕರಿಸಿದರು.
ಚಿಕ್ಕೋಡಿ ಚರಣಮೂರ್ತಿ ಮಠದ ಸಂಪಾದನ ಮಹಾಸ್ವಾಮಿಗಳು ಮಾತನಾಡಿ ಅರಿಹಂತ್ ಸೌಹಾರ್ದ ಸಹಕಾರಿ ಸಂಘವು ಇನ್ನೂ ಹೆಚ್ಚಿನ ರೀತಿಯ ಉತ್ತಂಗಕ್ಕೆ ಏರಲೆಂದು ಆಶೀರ್ವದಿಸಿದರು ಅರಿಹಂತ್ ಸೌಹಾರ್ದ ಬ್ಯಾಂಕಿನ ಅಧ್ಯಕ್ಷರಾದ ಬರಮಪ್ಪಾ ಚೌಗಲಾ ರವರು ದರೂರ್ ಶಾಖಾ ದವರಿಗೆ ಅವರ ಕಾರ್ಯ ವೈಖರ ನೋಡಿ ಮೊದಲನೆಯ ಬಹುಮಾನವಾಗಿ ಸಿಲ್ಡ್ ಹಾಗೂ ನಗದು ನೀಡಿ ಗೌರವ ಸತ್ಕಾರ ಮಾಡಿದರು.
ಈ ಸಮಾರಂಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಬಾಹುಬಲಿ ಭರಮಪ್ಪಾ ನಾಗನೂರಿ,ನಿರ್ದೇಶಕರಾದ ರವೀಂದ್ರ ಚಂದ್ರನಾಥ ಚೌಗಲಾ, ಜಯಪಾಲ ಸತ್ಯಪ್ಪಾ ಚೌಗಲಾ, ರಾಮಪ್ಪಾ ನಾಗಪ್ಪಾ ಗೋಟುರಿ, ಜಿನ್ನಪ್ಪಾ ಶಾಂತಪ್ಪಾ ಸಪ್ತಸಾಗರ, ಅಶೋಕ ಚಿಂತಪ್ಪಾ ಚೌಗಲಾ, ಪ್ರಕಾಶ ದೇವಪ್ಪಾ ಚೌಗಲಾ, ಪದ್ಮನಾಭ ರಾಮಪ್ಪಾ ಚೌಗಲಾ, ಬಾಬು ಅಪ್ಪಣ್ಣಾ ಅಕಿವಾಟೆ,
ಶ್ರೀಮತಿ ಶೃತಿ ಅಶೋಕ ಪಾಟೀಲ,
ಶ್ರೀಮತಿ ಸುಮತಿ ಜಯಪಾಲ ಚೌಗಲಾ, ಮಾಯಪ್ಪಾ ಹೊಳೆಪ್ಪಾ ಹೊಳೆಪ್ಪಗೋಳ, ಬಸವರಾಜ ಸತಿಗೌಡ ಪಾಟೀಲ, ಬಾಳಪ್ಪಾ ಸಾತಪ್ಪಾ ಸಂಕೇಶ್ವರಿ, ಅರುಣ ಭೂಪಾಲ ಚೌಗಲಾ, ಆನಂದ ಭೂ. ಚೌಗಲಾ ಅರಿಹಂತ ಸೌಹಾರ್ದ ಬ್ಯಾಂಕಿನ ಸರ್ವ ಶಾಖಾ ಅದ್ಯಕ್ಷರು ಸದಸ್ಯರು, ಶಾಖಾ ವ್ಯವಸ್ಥಾಪಕರು,ಆಡಳಿತ ಮಂಡಳಿ
ಸರ್ವ ಸದಸ್ಯರು
ಗಣ್ಯಮಾನ್ಯರು, ಮುಖಂಡರು ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಮಹಿಳೆಯರು,ಮಕ್ಕಳು ಉಪಸ್ಥಿತರಿದ್ದರು