ಹಿರೇಬಾಗೇವಾಡಿ:ಹಿರೇ ಬಾಗೇವಾಡಿಯ ಸಿದ್ಧನಭಾವಿ ಕೆರೆಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಪೂಜಾ ವಿಧಿ-ವಿಧಾನಗಳ ಮೂಲಕ ಬಾಗಿನ ಅರ್ಪಿಸಿದರು.ಸಿದ್ದನಬಾವಿ ಕೆರೆ ತುಂಬಿರುವುದು ಖುಷಿಯ ಸಂಗತಿ. ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡುವಂತಾಗಿದೆ. ಇದು ಒಳ್ಳೆಯ ಮುನ್ಸೂಚನೆಯಾಗಿದೆ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.
ಈ ವೇಳೆ ಬಡೆಕೊಳ್ಳಿಮಠದ ಶ್ರೀ ನಾಗೇಂದ್ರ ಸ್ವಾಮಿಗಳು ,ಮುತ್ನಾಳ ಕೇದಾರ ಪೀಠದ ಶ್ರೀ ಶಿವಾನಂದ ಸ್ವಾಮಿಗಳು, ಜಾಲಿಕರೆಮ್ಮ ದೇವಿಯ ಆರಾಧಕರಾದ ಉಳವಪ್ಪ ಅಜ್ಜನವರು, ದರ್ಗಾ ಅಜ್ಜನವರಾದ ಅಶ್ರಫ್ ಪೀರ್ ಖಾದ್ರಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಶ್ರೀ ಜಪ್ತಿ, ಉಪಾಧ್ಯಕ್ಷರಾದ ಶ್ರುತಿ ಸಿದ್ದಣ್ಣವರ, ಸಿ ಸಿ ಪಾಟೀಲ, ಸುರೇಶ ಇಟಗಿ, ಗೌಸ್ ಜಾಲಿಕೊಪ್ಪ ಶ್ರೀಕಾಂತ ಮಾಧುಭರಮಣ್ಣವರ, ಅಡಿವೇಶ ಇಟಗಿ, ಪ್ರಕಾಶ ಜಪ್ತಿ, ಆನಂದ ಪಾಟೀಲ, ನಿಂಗಪ್ಪ ತಳವಾರ, ರಾಜಣ್ಣ ಪಾಟೀಲ, ಅಡಿವೆಪ್ಪ ಹಂಚಿನಮನಿ, ಸ್ವಾತಿ ಇಟಗಿ, ಖತಾಲ್ ಗೋವೆ, ಸ್ಮಿತಾ ಪಾಟೀಲ, ವಾಯ್. ಎಲ್. ಪಾಟೀಲ, ಪಡಿಗೌಡ ಪಾಟೀಲ, ಮಲ್ಲಪ್ಪ ಹುಲಿಕವಿ, ಸಲೀಂ ಸತ್ತಿಗೇರಿ, ಇಮ್ತಿಯಾಜ್ ಕರಿದಾವಲ, ರಾಘು ಪಾಟೀಲ, ಅಡಿವೆಪ್ಪ ತೋಟಗಿ, ತಮ್ಮಣ್ಣ ಗಾನಗಿ, ಬಿ.ಎನ್.ಪಾಟೀಲ ಇದ್ದರು.