ಮುಧೋಳ:ಸೆ. ೧೭.,ತಾಲೂಕ ಪಂಚಾಯತ್ ಮುಧೋಳ, ದಿನ ದಯಾಳು ಅಂತೋದಯ ಯೋಜನೆ ಅಡಿಯಲ್ಲಿ ತಾಲೂಕಿನ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು, ಐ ಎಫ್ ಸಿ ರೈತ ಮಹಿಳಾ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಕೃಷಿ ಮೇಳದ ಅಧ್ಯಯನ ಪ್ರವಾಸವು ಇತ್ತೀಚಿಗೆ ಜರಗಿತು.
ಈ ಅಧ್ಯಯನದಲ್ಲಿ ಕೃಷಿ ಜೀವನೋಪಾಯ ಚಟುವಟಿಕೆಗಳು,ಜಾನುವಾರು ಸಾಕಾಣಿಕೆ, ಜೇನು ಸಾಗಾಣಿಕೆ, ಕೃಷಿ ಉತ್ಪನ್ನಗಳ ಬ್ರಾಂಡಿಂಗ್ ಮತ್ತು ಮಾರುಕಟ್ಟೆ, ಸಾವಯವ ಗೊಬ್ಬರ ಉತ್ಪಾದನೆ ಮತ್ತು ಬಳಕೆಯ ಮಹತ್ವ,ಕೀಟನಾಶಕಗಳ ನಿಯಂತ್ರನ ಇನ್ನು ಅನೇಕ ವಿ?ಯಗಳ ಬಗ್ಗೆ ತಿಳಿದುಕೊಳ್ಳಲಾಯಿತು ಹಾಗೂ ಇದರಿಂದ ನಮ್ಮ ಜ್ಞಾನವನ್ನು ಹೆಚ್ಚಿಸಿ ಕೃಷಿಕ ಸಮುದಾಯ ರೈತರಿಗೆ ಮಾಹಿತಿ ನೀಡಲು ಅನುಕೂಲವಾಗುತ್ತದೆ ಎಂದು ರೈತ ಮಹಿಳೆಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಕಾರ್ಯಕ್ರಮದ ನೇತೃತ್ವವನ್ನು ಜಿಲ್ಲಾ ವ್ಯವಸ್ಥಾಪಕರಾದ ಭೀಮಾನಂದ ಶೆಟ್ಟರ,ತಾಲೂಕಾ ವ್ಯವಸ್ಥಾಪಕರಾದ ಸಂಜು ಬೆಳವಡಿಗಿ, ರೇವಣಸಿದ್ದಯ್ಯ ಮರೆಗುದ್ದಿ,ವಿಠ್ಠಲ ಮಾಂಗ್, ಅಡ್ವೇಶ್ ಧೂಪದ,ದೀಪಾ ಶಿರೋಳ,ಕಾಶಿಬಾಯಿ ಮೀಸೆ ಮತ್ತು ನೂರಾರು ಸಂಖ್ಯೆಯಲ್ಲಿ ಮಹಿಳಾ ರೈತರು ಭಾಗವಹಿಸಿದ್ದರು.