ರನ್ನ ಬೆಳಗಲಿ:ಸೆ.೧೬.,ನವರಾತ್ರಿ ಉತ್ಸವದ ಪ್ರಯುಕ್ತ ಸೆ.೧೮ರ ಗುರುವಾರ ಸಂಜೆ ೬.೩೦ಕ್ಕೆರಂಭಾಪುರಿ, ಉಜ್ಜಯಿನಿ, ಶ್ರೀಶೈಲ, ಕಾಶಿ ಪೀಠದ ಜಗದ್ಗುರುಗಳ ಸಾನಿಧ್ಯದಲ್ಲಿ ೩೦ಕ್ಕೂ ಹೆಚ್ಚು ವಿವಿಧ ಮಠಾಧೀಶರ ಸಮ್ಮುಖದಲ್ಲಿ ಬೃಹತ್ ಧರ್ಮಸಭೆ ನಡೆಯಲಿದೆ ಎಂದು ಜ್ಯೋತಿಷ್ಯ ರತ್ನ ಡಾ. ರಮೇಶಕುಮಾರ ಶಾಸ್ತ್ರಿ ತಿಳಿಸಿದರು.
ಮಹಾಲಿಂಗ ಪೂರ ಜಿಎಲ್‌ವಿಸಿ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವ?ದಂತೆ ಈ ಬಾರಿಯೂ ರನ್ನಬೆಳಗಲಿಯ ಶ್ರೀ ಚಕ್ರಪುರವಾಸಿನಿ ಚಕ್ರೇಶ್ವರಿ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರ ಪುಣ್ಯಕೋಟಿ ಸಿದ್ಧಾಶ್ರಮದ ವತಿಯಿಂದ ನಾಡಹಬ್ಬ ದಸರಾ, ಆದಿಶಕ್ತಿ ಭುವನೇಶ್ವರಿ ಬೆಟ್ಟದ ಭುವನೋತ್ಸವ, ಬೃಹತ್ ಕುಂಭಮೇಳ ಮತ್ತು ನವರಾತ್ರಿ ಉತ್ಸವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಸೆ. ೧೭ ರಿಂದ ಎರಡು ದಿನಗಳ ಕಾಲ ೫೦ ಕ್ಕಿಂತ ಹೆಚ್ಚಿನ ನುರಿತ ಪಂಡಿತರಿಂದ ಯಜ್ಞ ಯಾಗ ಜರಗುವುದು.ಸೆ.೧೮ ಗುರುವಾರ ಬೆಳಿಗ್ಗೆ ೭.೩೦ಕ್ಕೆ ನಿಡಸೋಸಿ ಶ್ರೀಗಳಾದ ಡಾ. ಶಿವಲಿಂಗೇಶ್ವರ ಮಹಾಸ್ವಾಮಿಗಳಿಂದ ಆದಿಶಕ್ತಿ ಭುವನೇಶ್ವರಿ ದೇವಿ ಮೂರ್ತಿಗೆ ಪ್ರಾಣ ಪ್ರತಿ?ಪನೆ, ೮.೩೦ ಕ್ಕೆ ಮಹರ್ಷಿ ಡಾ. ಆನಂದ ಗುರೂಜಿ ಅವರಿಂದ ವಿಶ್ವ ಶಾಂತಿಗಾಗಿ ಆಯುತ ಮಹಾ ಚಂಡಿಯಾಗ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಶ್ರೀ ಚಕ್ರಕ್ಕೆ ವಿಶೇ? ಕುಂಕುಮಾರ್ಚನೆ ಮಧ್ಯಾಹ್ನ ೩ಕ್ಕೆ ಪಂಚಪೀಠಾಧೀಶ್ವರರ ದಿವ್ಯ ಸಾನಿಧ್ಯದಲ್ಲಿ ಬೃಹತ್ ಕುಂಭಮೇಳ ಹಾಗೂ ೫೦೦೮ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯ, ಸಂಜೆ ೬ಕ್ಕೆ ಕಾಶಿಯ ನುರಿತ ಪಂಡಿತರಿಂದ ಶಾಂಭವಿ ಸರೋವರಕ್ಕೆ ಮಹಾಗಂಗಾರತಿ, ೬.೩೦ಕ್ಕೆ ಪಂಚ ಪೀಠಾಧೀಶ್ವರರ ಸಾನಿಧ್ಯದಲ್ಲಿ ಬೃಹತ್ ಧರ್ಮ ಸಭೆ, ಆಶೀರ್ವಚನ, ಮಹಾಪ್ರಸಾದ ಮರುದಿನ ಸೆ. ೧೯ರ ಬೆಳಗ್ಗೆಯಿಂದ ವಿವಿಧ ಮಠಾಧೀಶರ ಭೇಟಿ ಹಾಗೂ ಸಂಜೆ ೭.೩೦ಕ್ಕೆ ರಾಜ್ಯದ ಮತ್ತು ಉತ್ತರ ಕರ್ನಾಟಕದ ಹೆಸರಾಂತ ಕಲಾವಿದರಿಂದ ಅದ್ದೂರಿ ಹಾಸ್ಯ ಮತ್ತು ಸಂಗೀತ ರಸಮಂಜರಿ ಜರುಗುವುದಾಗಿ ತಿಳಿಸಿದರು.
ಮುಖಂಡರಾದ ಸಿದ್ದುಗೌಡ ಪಾಟೀಲ, ಪಂಡಿತ ಪೂಜಾರಿ, ಶಿವನಗೌಡ ಪಾಟೀಲ, ಚಿಕ್ಕಪ್ಪನಾಯಕ, ಹನಮಂತ ಕೊಣ್ಣೂರ, ಶಿವಪ್ಪ ಹಾಡಕರ, ಮಹಾದೇವ ನೇಸೂರ, ನಾಗಪ್ಪ ಪಾಶ್ಚಾಪುರ, ಮಹಾಲಿಂಗಯ್ಯ ಮಠಪತಿ, ಪ್ರಕಾಶ ಪಾಶ್ಚಾಪುರ, ರವಿಚಂದ್ರ ಸಾಲಿಮನಿ ಮತ್ತಿತರರಿದ್ದರು.