ಕಾಗವಾಡ: ಸರಕಾರಿ ಶಾಲೆಯಲ್ಲಿ ತರಗತಿ ಮಧ್ಯದಲ್ಲಿ ನೀರು ಕುಡಿಯುವುದು ಅತ್ಯಂತ ಅವಶ್ಯಕತೆಯಿದೆ. ನೀರು ಕುಡಿಯದಿದ್ದರೆ ತಲೆನೋವು,ಒತ್ತಡ ಅನೇ ಸಮಸ್ಯೆಗಳು ಉಂಟಾಗಬಹುದು. ಆ ಕಾರಣ ವಿದ್ಯಾರ್ಥಿಗಳಿಗೆ “ನೀರು ಗಂಟೆ” ದಿನದಲ್ಲಿ ಮೂರು ಬಾರಿ ಮಾಡುವುದು ಸರಕಾರದ ಆದೇಶ ಮಾಡಬೇಕು ಇದರಿಂದ ಮಕ್ಕಳು ನೀರು ಕುಡಿಯುವುದರಿಂದ ದೇಹ ಅಭಿವೃದ್ದಿವಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶಿಕ್ಷಣ ಇಲಾಖೆಗೆ ಮನವಿ ಮಾಡಿದರು. ಅವರು ಕಾಗವಾಡ ಕಾರ್ಯಾಲಯಕ್ಕೆ ಭೇಟಿ ನೀಡಿ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಕೆ ಮದಭಾವಿಯವರಿಗೆ ಮನವಿ ಸಲ್ಲಿಸಿ ಮಾತನಾಡಿ ಸರಕಾರಿ ಶಾಲೆಗಿಂತ ಖಾಸಗಿ ಶಾಲೆಗಳು ಸರಕಾರದ ಆದೇಶವನ್ನು ಗಾಳಿಗೆ ತೂರಿ ನಿಗದಿತ ಸಮಯಕ್ಕಿಂತ ಬೆಳ್ಳಗೆ ಶಾಲೆಗಳನ್ನು ಪ್ರಾರಂಭ ಮಾಡುತ್ತಿದ್ದು ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇವೆ. ಆದಕಾರಣ ಸರಕಾರ ನಿಯಮಾನುಸಾರ ಖಾಸಗಿ ಶಾಲೆ ಪ್ರಾರಂಭಿಸಲು ಸೂಚನೆ ನೀಡಬೇಕು ಎಂದರು ಇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾ ಅಧ್ಯಕ್ಷ ಸಿದ್ದು ವಡೆಯರ,ರೈತ ಅಧ್ಯಕ್ಷ ಗಣೇಶ ಕೊಳೆಕರ,ಉಪಾಧ್ಯಕ್ಷ ಫಾರುಕ್ ಅಲಾಸ್ಕರ್ ,ಮಹೇಶ್ ಮಟಗರಿ, ಬಾಬಾಸಾಬ್ ಕೊಟ್ಟಲಗೆ ,ಅಸಲಂಮ ಜಮಾದಾರ್ ,ರಾಮು ವಡ್ಡರ್ ಸೇರಿದಂತೆ ಇನ್ನಿತರು ಇದ್ದರು.