ಪ್ಯಾಕ್ಟರಿ ಧೂಳಿನಿಂದ ಗ್ರಾಮಸ್ಥರು ರೋಗಕ್ಕೆ ತುತ್ತಾಗಿದ್ದಾರೆ: ತಹಶೀಲ್ದಾರ್ ನಿರ್ಲಕ್ಷ ಆರೋಪ

Ravi Talawar
ಪ್ಯಾಕ್ಟರಿ ಧೂಳಿನಿಂದ ಗ್ರಾಮಸ್ಥರು ರೋಗಕ್ಕೆ ತುತ್ತಾಗಿದ್ದಾರೆ: ತಹಶೀಲ್ದಾರ್ ನಿರ್ಲಕ್ಷ ಆರೋಪ
WhatsApp Group Join Now
Telegram Group Join Now

ಹೊಸಪೇಟೆ: ವಡ್ಡರ ಹಳ್ಳಿ ಸಮೀಪ ಶುಭಲಾಭ್ ಎನ್ನುವ ಕಲ್ಲು ಪುಡಿ ಮಾಡುವ ಕ್ರಷರ್ ಸುಮಾರು ವರ್ಷಗಳಿಂದ ಆರಂಭ ವಾಗಿದೆ , ಇದರಿಂಧ ಹೊರ ಸೂಸುವ ದೂಳಿನಿಂದಾಗಿ ಬೆಳೆ ಹಾಗು ಸಾರ್ವಜನಿಕರಿಗೆ ಅನಾರೋಗ್ಯಕ್ಕೆ ಕಾರಣ ವಾಗಿದೆ , ಈ ಪ್ಯಾಕ್ಟರಿ ದೂಳಿನಿಂದ ಅಸ್ತಮ, ಕಿಡ್ನಿಸ್ಟೋನ್, ಕ್ಯಾನ್ಸರ್, ಇನ್ನು ಹಲವಾರು ಖಾಯಿಲೆಗಳಿಂದ ವಡ್ರಹಳ್ಳಿ ಗ್ರಾಮದ ಜನರು ತುತ್ತಾಗಿರುತ್ತಾರೆ. ಇದಕ್ಕೆ ಪರಿಹಾರ ನೀಡಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಡ್ರಹಳ್ಳಿ ಗ್ರಾಮದಲ್ಲಿರುವ ರೈತರಿಗೆ ಬೆಳೆ ಪರಿಹಾರ ನೀಡುವ ಕುರಿತು ಮತ್ತು ವಡ್ಡರಹಳ್ಳಿ ಗ್ರಾಮಕ್ಕೆ ಮೂಲಭೂತ ಸೌಕರ್ಯವನ್ನು ಕಲ್ಪಿಸಬೇಕೆಂಬ ಬೇಡಿಕೆ ಇಟ್ಟಿದೆ.

ಸುಮಾರು ೧೮ ಎಕರೆ ಜಮೀನಿನಲ್ಲಿ ಅನಾಮಧೇಯ ಕಾರ್ಖಾನೆಯನ್ನು ನಿರ್ಮಾಣ ಗೂಂಡಿದ್ದು ,ಈ ಕಾರ್ಖಾನೆಯು ಕರಡಿದಾಮ ಗುಡ್ಡಕ್ಕೆ ಒತ್ತುವರಿಯಾಗಿ ಮಾಡಿದ್ದು ಮತ್ತು ಹಳ್ಳ ಪರಂಪೋಕ ಮತ್ತು ಗ್ರಾಮದ ಜಾಗವನ್ನು ಮುಚ್ಚಿ ಕಾರ್ಖಾನೆಯನ್ನು ಕಟ್ಟಿರುತ್ತಾರೆ ಎಂದು ಎಂ.ಜಡೆಪ್ಪ ಜಿಲ್ಲಾ ಕಾರ್ಯಧ್ಯಕ್ಷ ಹೇಳುತ್ತಿದ್ದಾರೆ .ಪ್ಯಾಕ್ಟರಿಯಿಂದಾಗುವ ತೋಂದರೆಗಳನ್ನು ತಹಶೀಲ್ದಾರರ ಗಮನಕ್ಕೆ ೨೯.೦೭.೨೦೨೫ ರಂದು ತಂದಿದ್ದರೂ ಇಲ್ಲಿಯವರೆಗೆ ತಹಶೀಲ್ದಾರರು ಕ್ರಮಕೈಗೊಂಡಿರುವುದಿಲ್ಲ.ಎಂದು ಸ್ಥಳೀಯ ರೈತರು ಆರೋಪಿಸುತ್ತಿದ್ದಾರೆ.

ಈಬಗ್ಗೆ ೧೬.೦೯.೨೦೨೫ ರಂದು ವಡ್ರರಹಳ್ಳಿ ಗ್ರಾಮ ಪಾಪಿನಾಯಕನಹಳ್ಳಿ ಪಂಚಾಯಿತಿ ಕಾರ್ಯಾಲಯದಲ್ಲಿ ಸಭೆಕರೆಯಲಾಗಿದ್ದು, ಈ ಸಭೆಗೆ ತಹಶಿಲ್ದಾರರು ಹಾಜರಾಗಿಲ್ಲ.. ಇನ್ನು ೨ ಅಥವಾ ೩ ದಿನಗಳಲ್ಲಿ ಸಭೆಯ ದಿನಾಂಕವನ್ನು ನಿಗದಿ ಮಾಡಿ ಶುಬ್‌ಲಬ್ ಪ್ಯಾಕ್ಟರಿ ಮಾಲೀಕರು ಮತ್ತು ರೈತರು ವಡ್ರಹಳ್ಳಿ ಗ್ರಾಮಸ್ಥರು ಜಂಟಿಯಾಗಿ ಗ್ರಾಮಸಭೆ ನಡೆಸಬೇಕು. ಶುಬ್‌ಲಭ್ ಕಾರ್ಖಾನೆ ಮಾಲೀಕರು ಮತ್ತು ವಡ್ರಹಳ್ಳಿ ಗ್ರಾಮಸ್ಥರು ಜಂಟಿಯಾಗಿ ಸಭೆ ಕರೆದು ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕೆಂದು ಜಿಲ್ಲಾಧ್ಯಕ್ಷ ಟಿ.ನಾಗರಾಜ್ ಒತ್ತಾಯಿಸಿದ್ದಾರೆ.

ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಶುಭ್‌ಲಬ್ ಪ್ಯಾಕ್ಟ್ರಿ ಮುಂದುಗಡೆ ಇರುವ ಎನ್.ಹೆಚ್-೬೩ ರಸ್ತೆ ತಡೆ ಪ್ರತಿಭಟನೆ ಮಾಡಲಾಗುವುದು. ರೈತರ ಬೇಡಿಕೆಗಳನ್ನು ಈಡೇರುವವರೆಗೂ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ರೈತರು ತೀರ್ಮಾನಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಿ.ಪಿ.ಎಂತಾಲೂಕು ಅಧ್ಯಕ್ಷ .ವಿ.ಸ್ವಾಮಿ,ರೈತ ಸಂಘದ ಕಾರ್ಯದರ್ಶಿಸಣ್ಣಕ್ಕಿ ರುದ್ರಪ್ಪ ವಡ್ರಹಳ್ಳಿ ಗ್ರಾಮದ ರೈತ ಮುಖಂಡರುಗಳಾದ ಚಿದಾನಂದ, ಯು.ವಿಜಯಕುಮಾರ್, ವೆಂಕಟೇಶ್, ಸಿ.ಸಿದ್ದಪ್ಪ, ಹೇಮರೆಡ್ಡಿ, ರಾಜೇಶ್, ರಾಜಶೇಖರ್, ಸಣ್ಣೆಪ್ಪ, ಹೊನ್ನೂರಪ್ಪ, ಗೋವಿಂದಪ್ಪ, ನಾಗೇಶ, ನೀಲಕಂಠ, ಬಾಷಾ, ಇನ್ನು ಅನೇಕ ರೈತರು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article