ಮೂಡಲಗಿ : ಪಟ್ಟಣದ ಪ್ರತಿಷ್ಠಿತ ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯು ೧೭ ಶಾಖೆ ಹೊಂದಿ, ಪ್ರಸಕ್ತ ಆರ್ಥಿಕ ವ?ದ ಕೊನೆಯಲ್ಲಿ ೫.೮೫ ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸೊಸೈಟಿ ಅಧ್ಯಕ್ಷ ಸುಭಾಸ ಬೆಳಕೂಡ ಹೇಳಿದರು.
ಸೋಮವಾರದಂದು ಪಟ್ಟಣದ ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯ ೩೦ನೇ ವ?ದ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಸೊಸೈಟಿಯು ೪.೨೮ ಕೋಟಿ ರೂ ಶೇರು ಬಂಡವಾಳ , ೨೯೯.೭೨ ಕೋಟಿ ರೂ ಠೇವುಗಳು, ೨೭.೩೪ ಕೋಟಿ ರೂ. ನಿಧಿಗಳು, ೧೯೩.೬೬ ಕೋಟಿ ರೂ. ಸಾಲ ವಿತರಿಸಿದ್ದು, ೩೪೫.೧೭ ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದು ವಿವರಿಸಿದರು. ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ ಮಾತನಾಡಿದರು. ನೀಲಕಂಠ ಮಠದ ಶಿವಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಇಸ್ಮಾಯಿಲ್ ಕಳ್ಳಿಮನಿ, ನಿರ್ದೇಶಕರಾದ ಬಿ.ಸಿ.ಮೂಗಳಖೋಡ, ಲಕ್ಕಪ್ಪ ಪೂಜೇರಿ, ಗೊಡಚಪ್ಪ ಮುರಗೋಡ, ಬಿ.ಬಿ.ಬೆಳಕೂಡ ವಿಶಾಲ .ಶೀಲವಂತ, ಆರ್.ಡಿ.ಬಳೆಗಾರ, ಉಮಾ ಬೆಳಕೂಡ, ಶಾಂತವ್ವಾ ಬೋರಗಲ್, ರುಕ್ಮವ್ವಾ ಪೂಜೇರಿ, ಮಾಲಾ ಬೆಳಕೂಡ, ಶ್ಯಾಲನ್ ಕೊಡತೆ, ದಶರಥ ಹುಲಕುಂದ, ಶಂಕ್ರಯ್ಯ ಹಿರೇಮಠ ಉಪಸ್ಥಿತರಿದ್ದರು. ಚಂದ್ರಕಾಂತ ಕೊಡತೆ ನಿರೂಪಿಸಿದರು. ಪ್ರಧಾನ ವ್ಯವಸ್ಥಾಪಕ ರಮೇಶ ವಂಟಗೂಡಿ ಸ್ವಾಗತಿಸಿದರು, ಶಿವಾನಂದ ಮುರಗೋಡ ವಂದಿಸಿದರು