ಜಾತಿ ಜನಗಣತಿಯಲ್ಲಿ ವೀರಶೈವ ಲಿಂಗಾಯತ ಜಂಗಮ ಎಂದು ಬರೆಸಿ : ಕೆ. ಎಂ ಮಹೇಶ್ವರ ಸ್ವಾಮಿ ಕರೆ 

Pratibha Boi
ಜಾತಿ ಜನಗಣತಿಯಲ್ಲಿ ವೀರಶೈವ ಲಿಂಗಾಯತ ಜಂಗಮ ಎಂದು ಬರೆಸಿ : ಕೆ. ಎಂ ಮಹೇಶ್ವರ ಸ್ವಾಮಿ ಕರೆ 
WhatsApp Group Join Now
Telegram Group Join Now
 ಬಳ್ಳಾರಿ 16.: ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಜನಗಣತಿಯಲ್ಲಿ ರಾಜ್ಯದ ಜಂಗಬರು ಜಾತಿ ಕಾಲಮ್‌ನಲ್ಲಿ ವೀರಶೈವ ಲಿಂಗಾಯತ ಜಂಗಮ ಎಂದು ಬರೆಸಿ ಎಂದು  ಭಾರತೀಯ ವೀರಶೈವ ಲಿಂಗಾಯತ ಜಂಗಮ ಪರಿಷತ್ ರಾಷ್ಟ್ರ ಅಧ್ಯಕ್ಷರಾದ ಕೆಎಂ ಮಹೇಶ್ವರ ಸ್ವಾಮಿ ಕರೆ ನೀಡಿದರು.
 ಅವರು ಇಂದು ನಗರದ ರಾಘವಾ ಕಲಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ ಜಂಗಮರು ಬೇಡ ಜಂಗಮ ಎಂದು ಜಾತಿ ಕಾಲಮ್ ನಲ್ಲಿ ಬರಸಿ ಕಾನೂನಿನ ತೊಡಕಿನಲ್ಲಿ ಸಿಕ್ಕಿದ್ದಾರೆ, ಇದು ಕಲಬುರಗಿ ನ್ಯಾಯಾಲಯದ ಆದೇಶದಲ್ಲಿ ಅರ್ಚಕರು ಮದುವೆ ಮಾಡಿಸುವ ಸ್ವಾಮಿಗಳು ಜಂಗಮರು ಬೇಡ ಜಂಗಮ ಜಾತಿಯಲ್ಲಿ ಬರುವುದಿಲ್ಲ ಎಂದು ಸ್ಪಷ್ಟವಾದ ಆದೇಶವನ್ನು ನೀಡಿದೆ ಕಾರಣ ನಮ್ಮ ಮುಂದಿನ ಪೀಳಿಗೆ ಕಾನೂನಿನ ತೊಡಕಿನಲ್ಲಿ ಸಿಕ್ಕು ತೊಂದರೆ ಅನುಭವಿಸುವುದನ್ನು  ತಪ್ಪಿಸಲು ವೀರಶೈವ ಲಿಂಗಾಯತ ಜಂಗಮ ಎಂದು ಬರೆಸುವಂತೆ ತಿಳಿಸಿದರು.
 ಜಂಗಮರು ಕುಟುಂಬ ನಿರ್ವಹಣೆಗಾಗಿ ಹೋಟೆಲ್ ನಡೆಸುವುದು ಮಹಿಳೆಯರು ಮನೆ ಕೆಲಸವನ್ನು ನಿರ್ವಹಿಸುವುದು ಖಾನಾವಳಿ ನಡೆಸುವುದು ಕೂಲಿ ಕೆಲಸ ಮಾಡುವುದು ಆಟೋರಿಕ್ಷಾ ಓಡಿಸಿ ಜೀವನ ನಡೆಸುತ್ತಿದ್ದಾರೆ. ಹೀಗೆ ಜಂಗಮರು ಅತ್ಯಂತ ಬಡತನದಲ್ಲಿ ಬದುಕುತ್ತಿದ್ದಾರೆ. ಹೀಗೆ ನಮ್ಮ ಜನಾಂಗದ ಸರ್ವತೋಮುಖ ಅಭಿವೃದ್ಧಿಗಾಗಿ ಜಾತಿ ಕಲಂ ನಲ್ಲಿ ಬೇಡ ಜಂಗಮ ಎಂದು ಬರೆಸದೆ ವೀರಶೈವ ಲಿಂಗಾಯತ ಜಂಗಮ ಎಂದು ಬರೆಸಿ ಎಂದು ಜಂಗಮದಾಯಕ್ಕೆ ತಿಳಿಸಿದರು.
 ಈ ಉದ್ದೇಶಕ್ಕಾಗಿ ನಾಳೆ ಬಳ್ಳಾರಿ ರಾಘವಾಂಕಲ ಮಂದಿರದಲ್ಲಿ ಜಂಗಮರ ಜಾಗೃತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ದಯವಿಟ್ಟು ಎಲ್ಲಾ ಜಂಗಮರು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಿದರು. ಧರ್ಮವನ್ನು ವೀರಶೈವ ಎಂದು ಬರೆಸಬೇಕು ಅಥವಾ ಹಿಂದೂ ಎಂದು ಬರೆಸಬೇಕು ಎಂಬ ಗೊಂದಲವಿದೆ 19 ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ  ಹಮ್ಮಿಕೊಂಡ ರಾಜ್ಯ ಸಮಾವೇಶದಲ್ಲಿ ಇದನ್ನು ನಿರ್ಧರಿಸಲಾಗುವುದು ಈ ಸಮಾವೇಶದಲ್ಲಿ ನಿರ್ಧರಿಸಿದಂತೆ ಜಂಗಮರು ಜಾತಿ ಜನಗಣತಿಯಲ್ಲಿ ದಾಖಲಿಸಬೇಕೆಂದು ಮನವಿ ಮಾಡಿದರು.
 ಈ ಪತ್ರಿಕಾಗೋಷ್ಠಿಯಲ್ಲಿ ಜಂಗಮ ಪರಿಷತ್ತಿನ ಖಜಾಂಚಿಯಾದ ಬಿಎಸ್ ಪ್ರಭಯ್ಯ, ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಎಚ್ ಕೆ ಗೌರಿಶಂಕರ್, ಕಾರ್ಯದರ್ಶಿ ಚಂದ್ರಮೌಳಿ, ನಾಗರಾಜ್, ಕಿರಣ್ ಕುಮಾರ್, ವಿಭೂತಿ ಎರ್ರಿಸ್ವಾಮಿ, ಬಿ ರುದ್ರಯ್ಯ, ರೇಣುಕಾ ಪ್ರಸಾದ್, ವಾಮದೇವಯ್ಯ, ಕೆ ಎಮ್ ಕೊಟ್ರೇಶ್, ಎಂ ಕೊಟ್ಟೂರು ಸ್ವಾಮಿ, ವಕೀಲರಾದ ಗುರುಬಸವರಾಜ್, ಕೋಳೂರು ಚಂದ್ರಶೇಖರ್ ಗೌಡ, ಜಾಲಿಹಾಳ್ ಶ್ರೀಧರ್, ಹಚ್ಚೋಳ್ಳಿ ಅಮರೇಶ್ ಸೇರಿದಂತೆ ಇತರರಿದ್ದರು.
WhatsApp Group Join Now
Telegram Group Join Now
Share This Article