ಬಳ್ಳಾರಿ : ಒಳ ಮೀಸಲಾತಿ ವರ್ಗೀಕರಣ ವಿರುದ್ಧ ಕೊರಚ ಕೊರಮ, ಲಂಬಾಣಿ ಮತ್ತು ಭೋವಿ ಜನಾಂಗದಿಂದ ಬೃಹತ್ ಪ್ರತಿಭಟನೆ ಮೆರವಣಿಗೆಯನ್ನು ನಡೆಸಲಾಯಿತು. ನಾರಾಯಣರಾವ್ ಪಾರ್ಕ್ ನಿಂದ ಆರಂಭವಾದ ಈ ಬೃಹತ್ ಪ್ರತಿಭಟನೆಯಲ್ಲಿ ಲಂಬಾಣಿ ಸಮುದಾಯದ ಮುಖಂಡ ಗೋಪಿ ನ್ಯಾಯಕ, ರಾಮ ನಾಯಕ್ ಭೋವಿ ಸಮಾಜದ ಮುಖಂಡ ಬಂಡಿಹಟ್ಟಿ ಮಹೇಶ್ ಭೋವಿ ಸಮಾಜದ ಅಧ್ಯಕ್ಷರಾದ ರಾಮಾಂಜನಿ, ಎಂ ಟಿ ಮಲ್ಲೇಶಪ್ಪ,ಕೊರಚ ಮತ್ತು ಕೊರಮ ಸಮಾಜದ ಮುಖಂಡರಾದ ಡಾಕ್ಟರ್ ಹನುಮಂತಪ್ಪ, ರಮಣಪ್ಪ ಭಜಂತ್ರಿ, ಶಂಕರ ಬಂಡೆ ವೆಂಕಟೇಶ್,ಹೆಚ್ ಕೆ ಹೆಚ್ ಹನುಮಂತಪ್ಪ, ರಂಗಸ್ವಾಮಿ, ಶ್ರೀನಿವಾಸ, ಶ್ರೀರಾಮುಲು, ಕೆ ವಿ ಶಂಕರ ಕೊಲಂಬೊ ಸಮಾಜದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಒಳ ಮೀಸಲಾತಿ ಸರಿಪಡಿಸಿ ಈ ಸಮುದಾಯಗಳಿಗೆ ಆರರಿಂದ ಏಳು ಪರ್ಸೆಂಟ್ ಮೀಸಲಾತಿ ನಿಗದಿಗೊಳಿಸಬೇಕೆಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.