ಗ್ರಾಮೀಣ ಪ್ರತಿಭೆ, ರಾಜ್ಯ ಮಟ್ಟದ ತರಬೇತಿಗೆ ಪಾಮಲದಿನ್ನಿ ಶಾಲೆ ವಿದ್ಯಾರ್ಥಿಗಳ ಆಯ್ಕೆ

Ravi Talawar
ಗ್ರಾಮೀಣ ಪ್ರತಿಭೆ, ರಾಜ್ಯ ಮಟ್ಟದ ತರಬೇತಿಗೆ ಪಾಮಲದಿನ್ನಿ ಶಾಲೆ ವಿದ್ಯಾರ್ಥಿಗಳ ಆಯ್ಕೆ
WhatsApp Group Join Now
Telegram Group Join Now
ಬೆಳಗಾವಿ. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ಬೆಂಗಳೂರು, ಇವರು ಆಯೋಜಿಸಿದ್ದ ರಾಜ್ಯ ಮಟ್ಟದ * ನಾನು ವಿಜ್ಞಾನಿ * ಎಂಬ  ವೈಜ್ಞಾನಿಕ ಮತ್ತು ಸ್ಥಳದಲ್ಲಿಯೇ ದೂರದರ್ಶಕ ಯಂತ್ರ ಸಿದ್ದಪಡಿಸುವ  ತರಬೇತಿ ಶಿಬಿರಕ್ಕೆ ಗೋಕಾಕ – ಮೂಡಲಗಿ ತಾಲೂಕಿನ ಪಾಮಲದಿನ್ನಿ ಗ್ರಾಮದ ವಿಜಯಶಾಲಿನಿ ವೀರಪ್ಪ ವಿಜಯನಗರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕು. ಶ್ರಾವತಿ ರಾಜು ದಂಡಿನ ಹಾಗೂ ಕು. ಕೀರ್ತಿ ಲಕ್ಷ್ಮಣ ಕಮತಿ ಅವರು ರಾಜ್ಯ ಮಟ್ಟಕ್ಕೆ ಆಯ್ಕೆ ಅಗಿದ್ದು, ರಾಜ್ಯ ಮಟ್ಟದ ಪರಿಷತ್  ತರಬೇತಿ ಸಂಸ್ಥಾಪಕ  ಅಧ್ಯಕ್ಷರಾದ ಡಾ. ಹುಲಿಕಟ್ಟಿ ನಟರಾಜ, ಅವರ ಪರವಾಗಿ ಪರಿಷತ್ ರಾಜ್ಯ ನಿರ್ದೇಶಕರಾದ ಬಸವರಾಜ ಹಟ್ಟಿಗೌಡರ ಪಾಮಲದಿನ್ನಿ ಶಾಲೆಗೆ ತೆರಳಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆಯ್ಕೆ ಪತ್ರ ವಿತರಿಸಿದರು.
    ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಮಾರುತಿ ವಿಜಯನಗರ, ಆಡಳಿತ ಅಧಿಕಾರಿ ಮಹಾಂತೇಶ ವಿಜಯನಗರ ಮತ್ತು ಸತೀಶ ವಿಜಯನಗರ, ವಿಜ್ಞಾನ ಶಿಕ್ಷಕರಾದ ಮಂಜುನಾಥ ಪಾಟೀಲ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article