ಕೊಪ್ಪಳ, ಸೆಪ್ಟೆಂಬರ್ 16: ಕೊಪ್ಪಳ ನಗರಸಭೆ ಕಚೇರಿ ಸೇರಿ 5 ಕಡೆ ಮಂಗಳವಾರ ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ದಾಳಿ ನಡೆದಿದೆ. ಕೊಪ್ಪಳ ಲೋಕಾಯುಕ್ತ ಡಿವೈಎಸ್ಪಿ ವಸಂತಕುಮಾರ ನೇತೃತ್ವದಲ್ಲಿ, ನಗರಸಭೆ ಜಿಇ ಸೋಮಲಿಂಗಪ್ಪ, ಕಂದಾಯ ಅಧಿಕಾರ ಉಜ್ಚಲ, ಗುತ್ತಿಗೆದಾರರಾದ ಶಕೀಲ ಪಟೇಲ್ (ನಗರಸಭೆ ಅಧ್ಯಕ್ಷನ ಸಹೋದರ), ಪ್ರವೀಣ ಕಂದಾರಿ ಮನೆಯ ಮೇಲೆ ಕೂಡ ದಾಳಿ ನಡೆದಿದೆ. 2023-24 ನೆಯ ಸಾಲಿನ ನಗರಸಭೆಯ ಅನುದಾನದಲ್ಲಿ ದುರ್ಬಳಕೆ ಆರೋಪ ಸಂಬಂಧ ಈ ದಾಳಿ ನಡೆದಿದೆ. 336 ಕಾಮಗಾರಿಗಳಲ್ಲಿ ಸುಮಾರು 10 ಕೋಟಿ ರೂಪಾಯಿ ದುರ್ಬಳಕೆ ಮಾಡಿರುವ ಆರೋಪ ವ್ಯಕ್ತವಾಗಿತ್ತು. ಅರ್ಧಂಬರ್ಧ ಕಾಮಗಾರಿ, ಕೆಲ ಕಡೆ ಕಾಮಗಾರಿ ಮಾಡದೆ ಹಣ ಬಳಸಿರುವ ಆರೋಪ ಕೇಳಿಬಂದಿತ್ತು.