ಗದಗ: ಕ್ರೀಡೆಯಲ್ಲಿ ಸೋಲು ಗೆಲುವು ಸಮಾನ ರೀತಿಯಲ್ಲಿ ನೋಡುವುದರಿಂದ ಮನುಷ್ಯನು ತನ್ನ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಮುಖಂಡ ಸಚಿನ್ ಪಾಟೀಲ ಹೇಳಿದರು.
ನಗರದ ಕಳಸಾಪುರ ರಸ್ತೆಯ ಒಳಾಂಗಣ ಕ್ರೀಡಾಂಗಣದಲ್ಲಿ ವಾಯುವಿಹಾರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಲಯ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಂದ್ಯದಲ್ಲಿ ಗೆಲುವನ್ನು ಸಾಧಿಸಲು ಆಟಗಾರನಿಗೆ ತಾಳ್ಮೆ ಇರಬೇಕು. ಜೀವನ ಮತ್ತು ಆರೋಗ್ಯದ ಸುಧಾರಣೆಗೆ ಕ್ರೀಡೆಗಳು, ವ್ಯಾಯಾಮ ಹಾಗೂ ನಿರಂತರ ಚಟುವಟಿಕೆಗಳು ಬಹಳ ಮುಖ್ಯ ಎಂದು ಹೇಳಿದರು.
ವಾಯು ವಿಹಾರ ಸಂಘದ ಅಧ್ಯಕ್ಷ ರಮೇಶ ಹೂನ್ನಿನಾಯ್ಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಘಟನೆ ಸಂಘ ಆರಂಭದಿAದಲೂ ವಿವಿಧ ರೀತಿಯಲ್ಲಿ ಕ್ರೀಡೆಗಳನ್ನು ಆಯೋಜಿಸುತ್ತಾ ಬಂದಿದೆ. ಮೊದಲಿಗೆ ನಾವು ಮೈಲಾರಪ್ಪ ಮೆಣಸಗಿ ಕಾಲೇಜಿನಲ್ಲಿ ರಾಜ್ಯಮಟ್ಟದ ವಾಲಿಬಾಲ್ ಪಂದ್ಯ ಆಯೋಜಿಸುವ ಮೂಲಕ ಗದುಗಿನ ಕೀರ್ತಿಯನ್ನು ತಂದಿದ್ದೇವೆ. ಅದೇ ರೀತಿ ಮುಂದಿನ ದಿನಮಾನಗಳಲ್ಲಿ ನಮ್ಮ ಸಂಘದಿAದ ಕ್ರೀಡಾಪಟುಗಳಿಗೆ ಸಹಾಯ ಸಹಕಾರ ನೀಡಿ ರಾಜ್ಯ ದೇಶಕ್ಕೆ ಕ್ರೀಡೆಯಲ್ಲಿ ಪದಕ ತರುವಂತ ಕಾರ್ಯದಲ್ಲಿ ಸಹಾಯ ಮಾಡಲು ಯೋಚಿಸಿದ್ದೇವೆ ಎಂದು ತಿಳಿಸಿದರು.
ಮುಖಂಡರಾದ ಎಸ್.ಕೆ. ಮ್ಯಾಗೇರಿ, ತಂಡದ ಮಾಲೀಕರಾದ ಚನ್ನಪ್ಪ ಜಿನಾಗ, ಪ್ರಕಾಶ ಸಿದ್ದಲಿಂಗ, ಶರತ್ ಚಂದ್ರ ಭಾಗವಹಿಸಿದ್ದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ಸೋಮು ಲಮಾಣಿ ಅವರು ಪ್ರಥಮ, ದ್ವಿತೀಯ, ತೃತೀಯ ತಂಡಗಳಿಗೆ ಬಹುಮಾನ ರೂಪದಲ್ಲಿ ಹಣವನ್ನು ನೀಡಿದರು.
ವಿನಾಯಕ ಪವಾರ, ಬಸವರಾಜ ಸಿರುಗುಂಪಿ, ಕೆ.ವೈ. ವಿಭೂತಿ, ಈರಣ್ಣ ಬಳಗೇರ, ಡಾ. ಬಸವರಾಜ, ಮಲ್ಲೇಶ ಮುಧೋಳ, ಸಂತೋಷ ಮುಧೋಳ ನೇತೃತ್ವದ ತಂಡ ಪ್ರಥಮ ಬಹುಮಾನವನ್ನು ಪಡೆಯಿತು. ಶಿವಣ್ಣ ಗುಜಮಾಗಡಿ, ಯಚರಪ್ಪ ಸಜ್ಜನ, ವಿ.ಎ. ಸಜ್ಜನ, ಆನಂದ ಮುಧೋಳ, ಉಮೇಶ ಮುಧೋಳ ನೇತೃತ್ವದ ತಂಡ ದ್ವಿತೀಯ ಹಾಗೂ ಇಕ್ಬಾಲ್ ಮುಲ್ಲಾ, ಹುಚ್ಚಪ್ಪ ಶಿರಹಟ್ಟಿ, ಫಕ್ರುದ್ದೀನ್, ಬಸಣ್ಣ ಮುಧೋಳ ಹಾಗೂ ರಾಜು ಕತ್ತಿ ಒಳಗೊಂಡ ತಂಡವು ತೃತೀಯ ಬಹುಮಾನ ಪಡೆಯಿತು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ವಿ.ಎ. ಸಜ್ಜನ ನಿರೂಪಿಸಿದರು. ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ವರ ವಿಭೂತಿ ವಂದಿಸಿದರು.
ಸೋಲು ಗೆಲುವು ಸಮಾನ ರೀತಿಯಲ್ಲಿ ತೆಗೆದುಕೊಳ್ಳಿ: ಸಚಿನ್ ಪಾಟೀಲ್
