ಆದೋನಿ : 15..ಆಂಧ್ರಪ್ರದೇಶದ ಮಂತ್ರಾಲಯಂ ತಾಲ್ಲೂಕಿನ ಕೌತಾಳಂ ಮಂಡಲದ ಜಿಲ್ಲಾ ಪರಿಷತ್ತು ಕನ್ನಡ ಪ್ರೌಡಶಾಲೆಯಲ್ಲಿ ಗಣಿತ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಯು.ಎಸ್ ಅಯ್ಯಪ್ಪರವರಿಗೆ ಮತ್ತು ಕನ್ನಡ ಪಂಡಿತರಾಗಿ ಸೇವೆ ಸಲ್ಲಿಸುತ್ತಿರುವ ವಿ. ಸುಬ್ರಮಣ್ಯ ಶರ್ಮಾ ರವರಿಗೆ ಉಪಾಧ್ಯಾಯ ದಿನೋತ್ಸವದ ಸಂದರ್ಭವಾಗಿ ಇವರ ಶಿಕ್ಷಣದ ಸೇವೆ ಮತ್ತು ನಿಷ್ಟೆಯನ್ನು ಮೆಚ್ಚಿ “ಕರ್ನೂಲು ಜಿಲ್ಲಾಧಿಕಾರಿ ಮತ್ತು ಶಿಕ್ಷಣಾಧಿಕಾರಿಗಳಿಂದ “ಉತ್ತಮ ಜಿಲ್ಲಾ ಉಪಾಧ್ಯಾಯ ಪ್ರಶಸ್ತಿಗಳನ್ನು ” ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ “”ಕರ್ನೂಲು ಜಿಲ್ಲಾಧಿಕಾರಿ ರಂಜಿತ್ ಬಾಷ ಮತ್ತು ಶಿಕ್ಷಣಾಧಿಕಾರಿ ಶ್ಯಾಮುಲ್ ಪಾಲ್ ಮತ್ತು ಸಂಸದ ಕೆ.ನಾಗರಾಜ ಸೇರಿದಂತೆ ಶಾಲೆಯ ಶಿಕ್ಷಕರು ಶಿಕ್ಷಕಿಯರು ವಿದ್ಯಾರ್ಥಿಗಳು ಮತ್ತು ಗ್ರಾಮದ ಮುಖಂಡರು ಇದ್ದರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು